ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಇದೀಗ, ನದಿ ನೀರು ಹರಿಸುವ ವಿಚಾರದಲ್ಲಿ ಇನ್ನಷ್ಟು ಕಠಿಣ ಕ್ರಮಗಳಿಗೆ ಮುಂದಾಗಿದೆ.
ನವದೆಹಲಿ: ಪಹಲ್ಗಾಂ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಜತೆಗಿನ ಸಿಂಧು ಜಲ ಹಂಚಿಕೆ ಒಪ್ಪಂದಕ್ಕೆ ತಡೆ ಒಡ್ಡಿ ಮಾಡಿ ಜಲಾಘಾತ ನೀಡಿರುವ ಭಾರತ ಇದೀಗ, ನದಿ ನೀರು ಹರಿಸುವ ವಿಚಾರದಲ್ಲಿ ಇನ್ನಷ್ಟು ಕಠಿಣ ಕ್ರಮಗಳಿಗೆ ಮುಂದಾಗಿದೆ. ಇದಕ್ಕಾಗಿ ತನ್ನ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ಹಾಗೂ 6 ಹೊಸ ವಿದ್ಯುತ್ ಯೋಜನೆಗಳ ನಿರ್ಮಾಣ ಕಾರ್ಯಕ್ಕೆ ಚುರುಕು ನೀಡಲು ಮುಂದಾಗಿದೆ.
ಕಾಶ್ಮೀರದ ಸಲಾಲ್ ಮತ್ತು ಬಗ್ಲಿಹಾರ್ ಜಲವಿದ್ಯುತ್ ಯೋಜನೆಗಾಗಿ ನಿರ್ಮಿಸಲಾಗಿರುವ ಡ್ಯಾಂನ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಕಳೆದೊಂದು ವಾರದಿಂದ ಹೂಳು, ಕೆಸರು ಹೊರಹಾಕುವ ಕಾರ್ಯ ಶುರುವಾಗಿದೆ.
ಈ ನಡುವೆ, ಸರ್ಕಾರವು ಸವಾಲ್‌ಕೋಟ್‌ನಲ್ಲಿನ 1856 ಮೆ.ವ್ಯಾ. ಸಾಮರ್ಥ್ಯದ ಯೋಜನೆ, 1320 ಮೆ.ವ್ಯಾ. ಸಾಮರ್ಥ್ಯದ ಕೀರ್ಥೈ-ಐ ಮತ್ತು ಐ ಯೋಜನೆ ಮತ್ತು ಪಾಕಾಲ್‌ದುಲ್‌ನಲ್ಲಿರುವ 1000 ಮೆ.ವ್ಯಾ. ಯೋಜನೆ ಹಾಗೂ 2,224 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಇತರೆ 3 ಜಲ ವಿದ್ಯುತ್ ಯೋಜನೆಗಳ ನಿರ್ಮಾಣ ಕಾರ್ಯವನ್ನೂ ತೀವ್ರಗೊಳಿಸಲು ಮುಂದಾಗಿದೆ.
ಒಮ್ಮೆ ಈ 6 ಯೋಜನೆಗಳು ಪೂರ್ಣಗೊಂಡರೆ ಜಮ್ಮು-ಕಾಶ್ಮೀರ 10 ಸಾವಿರ ಮೆ.ವ್ಯಾ. ಜಲವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ. ಈ ಮೂಲಕ ಈ ಭಾಗದಲ್ಲಿ ಕೃಷಿ ಮತ್ತು ಕುಡಿವ ಉದ್ದೇಶಕ್ಕೆ ಹೆಚ್ಚಿನ ನೀರು ಸಿಕ್ಕಂತಾಗಲಿದೆ.
ಈ ನಡುವೆ, ಸರ್ಕಾರವು ಸವಾಲ್‌ಕೋಟ್‌ನಲ್ಲಿನ 1856 ಮೆ.ವ್ಯಾ. ಸಾಮರ್ಥ್ಯದ ಕೀರ್ಥೈ-1 ಮತ್ತು ಒಂದು ವೇಳೆ ಸಿಂಧು ನೀರು ಒಪ್ಪಂದ ಚಾಲ್ತಿಯಲ್ಲಿದ್ದಿದ್ದರೆ ಪಾಕಿಸ್ತಾನಕ್ಕೆ ಯಾವುದೇ ಡ್ಯಾಂ ನಿರ್ಮಿಸುವ ಆರು ತಿಂಗಳ ಮೊದಲೇ ಭಾರತವು ಮಾಹಿತಿ ನೀಡಬೇಕಾಗಿತ್ತು. ಆಗ ಪಾಕಿಸ್ತಾನವು ಕಾನೂನು ಸೇರಿ ಬೇರೆ ವಿಧಾನಗಳ ಮೂಲಕ ಯೋಜನೆಗಳಿಗೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇತ್ತು. ಇದೀಗ ಆ ಒಪ್ಪಂದವನ್ನು ಭಾರತ ತಡೆ ಹಿಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಗಮನಕ್ಕೆ ತಾರದೆ ಈ ಯೋಜನೆ ಕೈಗೆತ್ತಿಕೊಳ್ಳಬಹುದಾಗಿದೆ.
ಇನ್ನು 1987ರಲ್ಲಿ ನಿರ್ಮಿಸಿರುವ ಸಲಾಲ್ ಡ್ಯಾಂ, 2009ರಲ್ಲಿ ನಿರ್ಮಿಸಿರುವ ಬಗ್ಲಿಹಾರ್ ಡ್ಯಾಂ ಸ್ವಚ್ಛತಾ ಕಾರ್ಯ ಈವರೆಗೆ ನಡೆದಿಲ್ಲ. ಇಂಡಸ್ ನೀರು ಒಪ್ಪಂದ ಇದಕ್ಕೂ ಅಡ್ಡಿಉಂಟುಮಾಡಿತ್ತು.
ಮುಂಗಾರು ಬೆಳೆಗೆ ಹೊಡೆತ: ಪಾಕ್ ಅಳಲು ಇಸ್ಲಾಮಾಬಾದ್: ಭಾರತದಿಂದ ಚೆನಾಬ್ ನದಿ ಒಳಹರಿವಿನಲ್ಲಿ ಹಠಾತ್ ಇಳಿಕೆ ಆಗಿದೆ. ಇದು ಪಾಕಿಸ್ತಾನದ ಮುಂಗಾರು ಬೆಳೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾಕಿಸ್ತಾನದ ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ ಹೇಳಿದೆ.
ಭಾರತ ಜತೆ ಸಂಘರ್ಷದಿಂದ ಪಾಕ್‌ಗೆ ಆರ್ಥಿಕ ಹೊಡೆತ: ಮೂಡೀಸ್
ನವದೆಹಲಿ: ಪಾಕಿಸ್ತಾನದ ಜತೆಗಿನ ಸಂಘರ್ಷದ ವಾತಾವರಣ ಭಾರತದ ಆರ್ಥಿಕತೆ ಮೇಲೇ ಹೆಚ್ಚೇನೂ ಪರಿಣಾಮ ಬೀರುವುದಿಲ್ಲ. ಆದರೆ, ಈಗಾಗಲೇ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ಮಾತ್ರ ಭಾರೀ ಹೊಡೆತ ನೀಡಲಿದೆ. ಎಂದು ರೇಟಿಂಗ್ ಸಂಸ್ಥೆ ಮೂಡೀಸ್ ಹೇಳಿದೆ.ತು ಇದೀಗ ಬಿಡುಗಡೆ ಮಾಡಿದ ಪಾಕಿಸ್ತಾನ ಕುರಿತ ತನ್ನ ಹೊಸ ವರದಿಯಲ್ಲಿ ಎಚ್ಚರಿಕೆ ನೀಡಿರುವ ಮೂಡೀಸ್, ಸಂಘರ್ಷದ ವಾತಾವರಣವು ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಮೇಲೆ ಹೆಚ್ಚಿನ ಒತ್ತಡ ಬೀರಲಿದ್ದು, ಆರ್ಥಿಕ ಬೆಳವಣಿಗೆ ಕುಸಿತ ಕಾಣುವ ಸಾಧ್ಯತೆ ಇದೆ ಎಂದಿದೆ.
ಸದ್ಯ ಪಾಕಿಸ್ತಾನದ ಸ್ಥೂಲ ಆರ್ಥಿಕ ಪರಿಸ್ಥಿತಿಯು ಚೇತರಿಕೆ ಕಾಣುತ್ತಿದ್ದು, ಹಣದುಬ್ಬರ ಕಡಿಮೆಯಾಗುತ್ತಿದೆ. ಐಎಂಎಫ್ ಕಾರ್ಯಕ್ರಮದಲ್ಲಿನ ಪ್ರಗತಿಯಿಂದಾಗಿ ವಿದೇಶಿ ವಿನಿಮಯ ಮೀಸಲು ಹೆಚ್ಚುತ್ತಿದೆ. ಆದರೆ ಸಂಘರ್ಷದ ವಾತಾವರಣವು ಪಾಕಿಸ್ತಾನದ ಆರ್ಥಿಕ ಬೆಳವಣಿಗೆಗೆ ಅಡ್ಡಿಯುಂಟು ಮಾಡಲಿದೆ ಮತ್ತು ಸರ್ಕಾರದ ವಿತ್ತೀಯ ಬಲವರ್ಧನಾ ಕ್ರಮಕ್ಕೂ ಹೊಡೆತ ನೀಡಲಿದೆ. ವಿದೇಶಿ ವಿನಿಮಯ ಮೀಸಲು ಕುಸಿಯಲಿದೆ. ಒಟ್ಟಾರೆ ದೇಶದ ಆರ್ಥಿಕ ಸ್ಥಿರತೆಗೆ ಭಂಗವುಂಟು ಮಾಡಲಿದೆ ಎಂದು ವರದಿ ಹೇಳಿದೆ.
ಮೇ 9ರಂದು ಐಎಂಎಫ್ ಪಾಕಿಸ್ತಾನದ ಅಧಿಕಾರಿಗಳನ್ನು ಭೇಟಿಯಾಗಲಿದ್ದು, ಹೊಸದಾಗಿ 10,958 ಕೋಟಿ ರು. ಸಾಲದ ಕುರಿತು ಚರ್ಚೆ ನಡೆಸಲಿದೆ. ಪಾಕಿಸ್ತಾನದ ಆರ್ಥಿಕತೆಯು ಇದೀಗ ಐಎಂಎಫ್ ಸಾಲದ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಐಎಂಎಫ್‌ನಿಂದ ಸಾಲ ಸಿಗದೇ ಹೋದರೆ ಪಾಕಿಸ್ತಾನದ ಆರ್ಥಿಕತೆಗೆ ತೀವ್ರ ಹೊಡೆತ ಬೀಳಲಿದೆ. ಈಗಾಗಲೇ ಭಾರತವು ಪಾಕಿಸ್ತಾನಕ್ಕೆ ಸಾಲ ಸಿಗದಂತೆ ಐಎಂಎಫ್ ಮೇಲೆ ಒತ್ತಡ ಹಾಕಲು ನಿರ್ಧರಿಸಿದೆ.