ಸಾರಾಂಶ
ರಷ್ಯಾ ಮೇಲೆ ಪ್ರತೀಕಾರಕ್ಕಾಗಿ ರಷ್ಯಾದ 2 ಅತಿದೊಡ್ಡ ತೈಲ ಕಂಪನಿಗಳಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್ ಮೇಲೆ ಅಮೆರಿಕದ ಟ್ರಂಪ್ ಸರ್ಕಾರ ನಿರ್ಬಂಧ ಹೇರಿದೆ. ಇವು ಸಂಗ್ರಹಿಸಿದ ಹಣವನ್ನೇ ಯುದ್ಧಕ್ಕೆ ರಷ್ಯಾ ಬಳಸುತ್ತಿವೆ ಎನ್ನುವ ಕಾರಣಕ್ಕೆ ಈ ಕ್ರಮ
ವಾಷಿಂಗ್ಟನ್/ನವದೆಹಲಿ: ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ಮೇಲೆ ಪ್ರತೀಕಾರಕ್ಕಾಗಿ ರಷ್ಯಾದ 2 ಅತಿದೊಡ್ಡ ತೈಲ ಕಂಪನಿಗಳಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್ ಮೇಲೆ ಅಮೆರಿಕದ ಟ್ರಂಪ್ ಸರ್ಕಾರ ನಿರ್ಬಂಧ ಹೇರಿದೆ. ಇವು ಸಂಗ್ರಹಿಸಿದ ಹಣವನ್ನೇ ಯುದ್ಧಕ್ಕೆ ರಷ್ಯಾ ಬಳಸುತ್ತಿವೆ ಎನ್ನುವ ಕಾರಣಕ್ಕೆ ಅಮೆರಿಕ ಈ ಕ್ರಮ ಕೈಗೊಂಡಿದ್ದು, ಇದರ ಪರಿಣಾಮ ಭಾರತವು ವರ್ಷಾಂತ್ಯ ದೊಳಗೆ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಅನಿವಾರ‍್ಯತೆ ಎದುರಾಗಿದೆ.
ನ.21ರೊಳಗೆ ಈ ಕಂಪನಿಗಳ ಜತೆಗಿನ ವಹಿವಾಟು ಮೊಟಕು
ಏಕೆಂದರೆ, ‘ನ.21ರೊಳಗೆ ಈ ಕಂಪನಿಗಳ ಜತೆಗಿನ ವಹಿವಾಟು ಮೊಟಕುಗೊಳಿಸಬೇಕು. ಇಲ್ಲದಿದ್ದರೆ ಭಾರಿ ತೆರಿಗೆ ಹಾಕಲಾಗುವುದು’ ಎಂದು ವಹಿವಾಟುದಾರರಿಗೆ ಅಮೆರಿಕ ಖಜಾನೆ ಇಲಾಖೆ ಎಚ್ಚರಿಸಿದೆ. ಇದು ಈ ಎರಡೂ ಕಂಪನಿಗಳಿಂದ ಹೆಚ್ಚು ತೈಲ ಖರೀದಿಸುವ ಹಾಗೂ ಭಾರತದ ಅತಿದೊಡ್ಡ ತೈಲ ಸಂಸ್ಕರಣಾ ಹೊಂದಿರುವ ರಿಲಯನ್ಸ್‌ಗೆ ದೊಡ್ಡ ಹೊಡೆತ ಕೊಡಲಿದೆ. ಅಲ್ಲದೆ, ಭಾರತದಲ್ಲಿ ಬಂಕ್‌ಗಳನ್ನು ಹೊಂದಿರುವ ನಯಾರಾ ಹಾಗೂ ರಿಲಯನ್ಸ್ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ವರ್ಷಾಂತ್ಯಕ್ಕೆ ರಷ್ಯಾ ಕಂಪನಿಗಳಿಂದ ತೈಲ ಖರೀದಿ ಮಾಡುವುದು ಸ್ಥಗಿತವಾಗಲಿದೆ ಎನ್ನಲಾಗಿದೆ. ಇದನ್ನು ಸರಿದೂಗಿಸಲು ಭಾರತೀಯ ತೈಲ ಸಂಸ್ಕರಣಾಗಾರರು ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಿಂದ ಕಚ್ಚಾ ತೈಲ ಖರೀದಿ ಹೆಚ್ಚಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಭಾರತ ಕಮ್ಮಿ ಮಾಡಿದೆ- ಶ್ವೇತಭವನ:
ಭಾರತವು ರಷ್ಯಾದಿಂದ ತೈಲ ಖರೀದಿ ಕಡಿಮೆ ಮಾಡುತ್ತಿದೆ. ಡೊನಾಲ್ಡ್ ಟ್ರಂಪ್ ಅವರ ಮನವಿ ಮೇರೆಗೆ ಭಾರತ ಈ ನಿರ್ಧಾರ ಕೈಗೊಂಡಿದೆ ಎಂದು ಶ್ವೇತಭ ವನ ವಕ್ತಾರೆ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))