ನವದೆಹಲಿ: ಉಪರಾಷ್ಟ್ರಪತಿ (ವೀಪಿ) ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರ ಪರ ವಿಪಕ್ಷಗಳ ಸಂಸದರು ಅಡ್ಡ ಮತದಾನ ನಡೆದ ಬಗ್ಗೆ ಇಂಡಿಯಾ ಕೂಟದಲ್ಲಿ ಒಡಕು ಸೃಷ್ಟಿಯಾಗಿದೆ,
ಅಡ್ಡ ಮತದಾನ ಕುರಿತು ಮಾತನಾಡಿದ ಮನೀಶ್, ‘ಚುನಾವಣೆಯಲ್ಲಿ ಅಡ್ಡ ಮತದಾನವಾಗಿದ್ದರೆ, ಅದನ್ನು ಇಂಡಿಯಾ ಕೂಟದ ಎಲ್ಲಾ ಘಟಕಗಳು ಆಂತರಿಕ ತನಿಖೆ ನಡೆಸಬೇಕು. ಅಡ್ಡ ಮತದಾನ ಗಂಭೀರವಾದ ವಿಷಯವಾಗಿದ್ದು, ಆಂತರಿಕ ಒಗ್ಗಟ್ಟಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಇವು ನಂಬಿಕೆ ಮತ್ತು ವಿಶ್ವಾಸದ ಲೋಪ’ ಎಂದು ಅಸಮಾಧಾನ ಹೊರಹಾಕಿದದ್ದಾರೆ,
ಮತ್ತೊಂದೆಡೆ ಬುಧವಾರ ಸಚಿವ ಕಿರಣ್ ರಿಜಿಜು ಅವರು ವಿಪಕ್ಷದ ಸಂಸದರಿಗೆ ಅಡ್ಡ ಮತದಾನ ಮಾಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ.