ಗೂಗಲ್‌ ಸಿಇಒಪಿಚೈಗೆ 3 ವರ್ಷಕ್ಕೆ 6300 ಕೋಟಿ ರು. ವೇತನ, ಭತ್ಯೆ!

Published : Mar 08, 2026, 09:54 AM IST
sunder pichai

ಸಾರಾಂಶ

ಕಳೆದ 11 ವರ್ಷಗಳಿಂದ ಗೂಗಲ್‌ ಮತ್ತು 7 ವರ್ಷಗಳಿಂದ ಆಲ್ಫಾಬೆಟ್‌ನ ಸಿಇಒ ಆಗಿರುವ ಭಾರತೀಯ ಮೂಲದ ಸಿಇಒ ಸುಂದರ್‌ ಪಿಚೈಗೆ ಕಂಪನಿಯ ಆಡಳಿತ ಮಂಡಳಿ ಮುಂದಿನ 3 ವರ್ಷದ ಅವಧಿಗೆ ವೇತನ, ಭತ್ಯೆ ಮತ್ತು ಪ್ರೋತ್ಸಾಹಕಗಳ ರೂಪದಲ್ಲಿ 6300 ಕೋಟಿ ರು.ನ ಆಫರ್‌ ನೀಡಿದೆ ಎಂದು ವರದಿಯಾಗಿದೆ.

ವಾಷಿಂಗ್ಟನ್‌: ಕಳೆದ 11 ವರ್ಷಗಳಿಂದ ಗೂಗಲ್‌ ಮತ್ತು 7 ವರ್ಷಗಳಿಂದ ಆಲ್ಫಾಬೆಟ್‌ನ ಸಿಇಒ ಆಗಿರುವ ಭಾರತೀಯ ಮೂಲದ ಸಿಇಒ ಸುಂದರ್‌ ಪಿಚೈಗೆ ಕಂಪನಿಯ ಆಡಳಿತ ಮಂಡಳಿ ಮುಂದಿನ 3 ವರ್ಷದ ಅವಧಿಗೆ ವೇತನ, ಭತ್ಯೆ ಮತ್ತು ಪ್ರೋತ್ಸಾಹಕಗಳ ರೂಪದಲ್ಲಿ 6300 ಕೋಟಿ ರು.ನ ಆಫರ್‌ ನೀಡಿದೆ ಎಂದು ವರದಿಯಾಗಿದೆ.

‘ಫೈನಾನ್ಷಿಯಲ್‌ ಟೈಮ್ಸ್‌’ ವರದಿ

‘ಫೈನಾನ್ಷಿಯಲ್‌ ಟೈಮ್ಸ್‌’ ವರದಿ ಪ್ರಕಾರ, ಮುಂದಿನ ಮೂರು ವರ್ಷಗಳ ಅವಧಿಗೆ ವಾರ್ಷಿಕ 180 ಕೋಟಿ ರು. ವೇತನದ ಹೊರತಾಗಿ 1000 ಕೋಟಿ ರು. ಮೌಲ್ಯದ ಫರ್‌ಪಾರ್ಮೆನ್ಸ್‌ ಸ್ಟಾಕ್‌ ಯುನಿಟ್‌ ರೂಪದಲ್ಲಿ 1000 ಕೋಟಿ ರು., ಸಾಧನೆ ಆಧರಿತವಾಗಿ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಮಾಸಿಕ ಸ್ವರೂಪದಲ್ಲಿ ನೀಡಲಾಗುವು ಅಂದಾಜು 750 ಕೋಟಿ ರು. ಮೊತ್ತದ ಕಂಪನಿಯ ಷೇರುಗಳು ಸಿಗಲಿವೆ.

1500 ಕೋಟಿ ರು. ಮೌಲ್ಯದ ಷೇರುಗಳು ಸಿಗಲಿದೆ

ಇದಲ್ಲದೆ ಗೂಗಲ್‌ನ ಸ್ವಯಂಚಾಲಿತ ಕಾರು ಯೋಜನೆಯಾದ ವೈಮೋ ಸೇರಿದಂತೆ ಇತರೆ ಕೆಲ ಕಂಪನಿಗಳಲ್ಲಿನ1500 ಕೋಟಿ ರು. ಮೌಲ್ಯದ ಷೇರುಗಳು ಸಿಗಲಿದೆ. ಇವು ಮುಂದಿನ ಮೂರು ವರ್ಷಗಳಲ್ಲಿ ಶೇ.200ರಷ್ಟು ಏರಿಕೆಯ ನಿರೀಕ್ಷೆ ಇದೆ. ಹೀಗೆ ಒಟ್ಟಾರೆ ಮುಂದಿನ ಮೂರು ವರ್ಷದಲ್ಲಿ ಪಿಚೈ6300 ಕೋಟಿ ರು.ಗೂ ಹೆಚ್ಚಿನ ವೇತನ, ಭತ್ಯೆ ಪಡೆಯಲಿದ್ದಾರೆ.

ಸಾಧನೆ: 2015ರಲ್ಲಿಪಿಚೈಗೂಗಲ್‌ ಸಿಇಒ ಆದ ವೇಳೆ ಕಂಪನಿಯ ಮಾರುಕಟ್ಟೆ ಮೌಲ್ಯ 4.5 ಲಕ್ಷ ಕೋಟಿ ರು. ಇದ್ದಿದ್ದು ಇದೀಗ 3.6 ಲಕ್ಷ ಕೋಟಿ ಡಾಲರ್‌ ದಾಟಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸ್ತ್ರೀಯರಿಗೆ ₹2500, ಮದ್ವೆಗೆ ಚಿನ್ನ, ಫ್ರೀ ಎಲ್‌ಪಿಜಿ; ವಿಜಯ್‌ ವಿಜಯ್‌ ಘೋಷಣೆ
ನಿಮ್ಮ ಮನೆಗೂ ತಟ್ಟಿತು ಇರಾನ್‌ ಯುದ್ಧದ ಬಿಸಿ ! ಅಡುಗೆ ಸಿಲಿಂಡರ್‌ ದರ ಭಾರೀ ದುಬಾರಿ