ಚಾಕು ಇರಿತಕ್ಕೊಳಗಾದ ಸಂದರ್ಭದಲ್ಲಿ ಜೀವ ಉಳಿಸಿದ ಆಟೋ ಚಾಲಕಗೆ ನಟ ಸೈಫ್‌ ಅಲಿ ಖಾನ್ ಧನ್ಯವಾದ

KannadaprabhaNewsNetwork |  
Published : Jan 23, 2025, 12:48 AM ISTUpdated : Jan 23, 2025, 04:39 AM IST
ಸೈಫ್‌ | Kannada Prabha

ಸಾರಾಂಶ

  ಚಾಕು ಇರಿತಕ್ಕೊಳಗಾದ ಸಂದರ್ಭದಲ್ಲಿ ತಮ್ಮನ್ನು ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ನಟ ಸೈಫ್‌ ಅಲಿ ಖಾನ್ ಭೇಟಿ ಮಾಡಿ ಧನ್ಯವಾದ ಸಮರ್ಪಿಸಿದ್ದಾರೆ.

ಮುಂಬೈ: ಚಾಕು ಇರಿತಕ್ಕೊಳಗಾದ ಸಂದರ್ಭದಲ್ಲಿ ತಮ್ಮನ್ನು ಆಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರನ್ನು ನಟ ಸೈಫ್‌ ಅಲಿ ಖಾನ್ ಭೇಟಿ ಮಾಡಿ ಧನ್ಯವಾದ ಸಮರ್ಪಿಸಿದ್ದಾರೆ.

ಸೈಫ್‌ ಲೀಲಾವತಿ ಆಸ್ಪತ್ರೆಯಲ್ಲಿರುವಾಗಲೇ ಭಜನ್‌ರನ್ನು ಭೇಟಿ ಮಾಡಿದ್ದರು. ಈಗ ಆ ಫೋಟೋಗಳು ಬಿಡುಗಡೆ ಆಗಿವೆ. ಒಂದು ಚಿತ್ರದಲ್ಲಿ ಚಾಲಕ, ಸೈಫ್‌ ಪಕ್ಕದಲ್ಲಿ ಕುಳಿತು ಕ್ಯಾಮರಾ ನೋಡಿ ನಗುತ್ತಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟ, ಭಜನ್ ಹೆಗಲ ಮೇಲೆ ಕೈ ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿದ ಭಜನ್, ‘ಸೈಫ್‌ ಅವರ ಆಪ್ತ ಸಹಾಯಕನಿಂದ ಕರೆ ಬಂದಿತು. ಮಾಧ್ಯಮಗಳಿರುವ ಕಾರಣ ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಭೇಟಿ ಮಾಡಿದೆ. ಅವರ ಜೊತೆ ಕೆಲ ಸೆಲ್ಫಿ, ಫೋಟೋಗಳನ್ನು ತೆಗೆದುಕೊಂಡೆ’ ಎಂದಿದ್ದಾರೆ . ದಾಳಿಯಿಂದ ಗಾಯಗೊಂಡಿದ್ದ ಸೈಫ್‌ರನ್ನು ಭಜನ್ ಜ.16ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ