ಟಿಟಿಡಿಯ ಲಡ್ಡು ತಯಾರಿಗೆ ಕಲಬೆರಕೆ ತುಪ್ಪ ವಿವಾದದ ನಡುವೆಯೂ ಮಾರಾಟದಲ್ಲಿ ಇಳಿಕೆಯಿಲ್ಲ

KannadaprabhaNewsNetwork |  
Published : Sep 24, 2024, 01:47 AM ISTUpdated : Sep 24, 2024, 07:05 AM IST
ತಿರುಪತಿ ವೆಂಕಟೇಶ್ವರ ದೇವಾಲಯದ ಪ್ರಸಿದ್ಧ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕೆಗೆ ಬಳಸಿದ ತುಪ್ಪದಲ್ಲಿ ದನ, ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ವೆಂಕಟೇಶ್ವರ ದೇಗುಲದ ಸಮುಚ್ಚಯವನ್ನು ಧಾರ್ಮಿಕವಾಗಿ ಶುದ್ಧೀಕರಣಗೊಳಿಸುವ ಪ್ರಕ್ರಿಯೆ ಸೋಮವಾರ ನೆರವೇರಿತು. | Kannada Prabha

ಸಾರಾಂಶ

ತುಪ್ಪ ಕಲಬೆರಕೆ ವಿವಾದದ ಹೊರತಾಗಿಯೂ ತಿರುಪತಿ ಲಡ್ಡು ಮಾರಾಟದಲ್ಲಿ ಯಾವುದೇ ಇಳಿಕೆಯಾಗಿಲ್ಲ. ಭಕ್ತರು ಟಿಟಿಡಿಯ ಕೇಂದ್ರಗಳಿಂದ ಶ್ರದ್ಧಾಭಕ್ತಿಯಿಂದ ಲಡ್ಡುಗಳನ್ನು ಖರೀದಿಸುತ್ತಿದ್ದಾರೆ.

ತಿರುಮಲ: ಲಡ್ಡು ತಯಾರಿಗೆ ಬಳಸುವ ತುಪ್ಪ ಕಲಬೆರಕೆಯಾಗಿತ್ತು ಎಂಬ ವಿವಾದದ ಹೊರತಾಗಿಯೂ ತಿರುಪತಿ ಲಡ್ಡು ಮಾರಾಟದಲ್ಲಿ ಯಾವುದೇ ಇಳಿಕೆಯಾಗಿಲ್ಲ. ಭಕ್ತರು ಹಿಂದಿನಂತೆಯೇ ದೇಶದ ವಿವಿಧ ರಾಜ್ಯಗಳಲ್ಲಿರುವ ಟಿಟಿಡಿಯ ಕೆಂದ್ರಗಳಿಂದ ಶ್ರದ್ಧಾಭಕ್ತಿಯಿಂದ ಲಡ್ಡು ಖರೀದಿಸುತ್ತಿದ್ದಾರೆ ಎಂಬ ಅಂಕಿ ಅಂಶ ಲಭ್ಯವಾಗಿದೆ.

ಟಿಟಿಡಿ ವಿಶಾಖಪಟ್ಟಣದ ಋಷಿಕೊಂಡ ಬೆಟ್ಟ, ಗುಂಟೂರು ಜಿಲ್ಲೆಯ ವೆಂಕಟಪಾಲೆಂ, ವಿಜಯವಾಡ, ಹೈದರಾಬಾದ್‌, ಚೆನ್ನೈ, ಬೆಂಗಳೂರು, ದೆಹಲಿ, ಕುರುಕ್ಷೇತ್ರ, ಜಮ್ಮು ಮತ್ತು ಕಾಶ್ಮೀರ ಮೊದಲಾದ ಪ್ರದೇಶಗಳಲ್ಲಿ ಲಡ್ಡು ಮಾರಾಟ ಮಾಡುತ್ತದೆ.

ಟಿಟಿಡಿ ಅಧಿಕಾರಿಗಳು ಈ ಬಗ್ಗೆ ಹೇಳಿಕೆ ನೀಡಿ, ನಿತ್ಯ ದೇಗುಲದಲ್ಲಿ ಸರದಿಯಲ್ಲಿ ನಿಲ್ಲುವ ಭಕ್ತರಿಗೆ ನೀಡುವ ಲಡ್ಡು ಜೊತೆಗೆ, ಸೆ.21ರ ಶನಿವಾರ ವೆಂಕಟಪಾಲೆಂಗೆ 3000, ವಿಶಾಖಪಟ್ಟಣಂಗೆ 4000, ವಿಜಯವಾಡಕ್ಕೆ 2000, ಚೆನ್ನೈಗೆ 10000, ಬೆಂಗಳೂರಿಗೆ 3000, ಹೈದ್ರಾಬಾದ್‌ಗೆ 8000 ಲಡ್ಡು ಪೂರೈಸಲಾಗಿದೆ ಎಂದಿದ್ದಾರೆ.

ವಿಶಾಖಪಟ್ಟಣ ಟಿಟಿಡಿ ಅಧಿಕಾರಿಯೊಬ್ಬರು ಮಾತನಾಡಿ, ‘ನಮಗೆ ಬಂದ ಎಲ್ಲ 4000 ಲಡ್ಡು ಶನಿವಾರ ಮಾರಾಟ ಆದವು’ ಎಂದಿದ್ದಾರೆ.

ಇನ್ನು ಭಕ್ತರು ಮಾತನಾಡಿ ‘ಲಡ್ಡು ನಮಗೆ ಅಚ್ಚುಮೆಚ್ಚು. ಈಗ ಕರ್ನಾಟಕದ ಕೆಎಂಎಫ್‌ ಶುದ್ಧತುಪ್ಪ ಬಳಕೆ ಆಗುತ್ತಿದೆ. ಹೀಗಾಗಿ ನಮಗೆ ಇದರ ಖರೀದಿಗೆ ಹಿಂಜರಿಕೆ ಇಲ್ಲ’ ಎಂದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದಲ್ಲಿ ಮತ್ತೆ 2 ಕಂಪನಿಗೆ ವಿಮಾನ ಸೇವೆಗೆ ಅನುಮತಿ
ತೆಲಂಗಾಣ ಸಾರಿಗೆ ಅಧಿಕಾರಿ ₹100 ಕೋಟಿ ಆಸ್ತಿ ಒಡೆಯ?