ಇದು ನಾಯಿಗಳ ಸಮಯ ಎಂದ ಇಸ್ಲಾಮಿಕ್‌ ಬೋಧಕ ಸಲ್ಮಾನ್‌ ಅಝಾರಿ ಸೆರೆ

KannadaprabhaNewsNetwork |  
Published : Feb 06, 2024, 01:30 AM ISTUpdated : Feb 06, 2024, 08:55 AM IST
ಸಲ್ಮಾನ್‌ | Kannada Prabha

ಸಾರಾಂಶ

ದ್ವೇಷ ಭಾಷಣ ಮಾಡಿದ ಆರೋಪದಡಿ ಮುಸ್ಲಿಂ ಧರ್ಮ ಪ್ರಚಾರಕ ಸಲ್ಮಾನ್‌ ಅಝಾರಿಯನ್ನು ಬಂಧಿಸಲಾಗಿದೆ.

ಜುನಾಗಢ: ದ್ವೇಷ ಭಾಷಣ ಮಾಡಿದ ಆರೋಪದಡಿ ಇಸ್ಲಾಮಿಕ್‌ ಬೋಧಕ ಮುಫ್ತಿ ಸಲ್ಮಾನ್‌ ಅಝಾರಿಯನ್ನು ಗುಜರಾತ್‌ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ಜ.31 ರ ರಾತ್ರಿ ಗುಜರಾತ್‌ನ ಜುನಾಗಢ್ ನಗರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಲ್ಮಾನ್‌ ‘ಇದು ನಾಯಿಗಳ ಸಮಯ, ಮುಂದೆ ನಮ್ಮ ಸಮಯ.

ಮುಸ್ಲಿಂ ಸಮುದಾಯ ಅವುಗಳ ವಿರುದ್ಧ ಹೋರಾಡಬೇಕು’ ಎಂದಿದ್ದರು.

ಈ ಕುರಿತ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಸಲ್ಮಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸ್ಥಳೀಯ ಆಯೋಜಕನರನ್ನು ಬಂಧಿಸಲಾಗಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಟ್ರಂಪ್‌ ವಸೂಲಿ ಮಾಡಿದ್ದ ₹12 ಲಕ್ಷಕೋಟಿ ತೆರಿಗೆ ಬಡ್ಡಿ ಸಮೇತ ವಾಪಸ್‌
ಅಮೆರಿಕ- ಇರಾನ್‌ ಯುದ್ಧ! ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಅಟ್ಯಾಕ್‌!