ನವದೆಹಲಿ: ದಿ.ಪ್ರಧಾನಿ ರಾಜೀವ್ ಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ನಿಷೇಧಗೊಂಡಿದ್ದ ಬ್ರಿಟಿಷ್-ಇಂಡಿಯಾ ಕಾದಂಬರಿಕಾರ ಸಲ್ಮಾನ್ ರಶ್ದಿ ಅವರ ‘ದ ಸಟಾನಿಕ್ ವರ್ಸೆಸ್’ ಪುಸ್ತಕ 36 ವರ್ಷಗಳ ನಂತರ ಸದ್ದಿಲ್ಲದೆ ಭಾರತಕ್ಕೆ ಮರಳಿದೆ.
ನಿಷೇಧ ಏಕೆ?: ಪುಸ್ತಕ ಧರ್ಮ ದೂಷಣೆಯಿಂದ ಕೂಡಿದೆ ಎಂದು ಪುಸ್ತಕ ಮತ್ತು ಲೇಖಕ ಸಲ್ಮಾನ್ ವಿರುದ್ಧ ಮುಸ್ಲಿಂ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಗತ್ತಿನ ಹಲವು ದೇಶಗಳಲ್ಲಿ ಪುಸ್ತಕವನ್ನು ನಿಷೇಧಿಸಲಾಗಿತ್ತು.
ನಿಷೇಧ ರದ್ದು: ಪುಸ್ತಕ ಆಮದು ನಿಷೇಧ ರದ್ದು ಪ್ರಶ್ನಿಸಿದ್ದ ಅರ್ಜಿಯೊಂದನ್ನು ಇತ್ತೀಚೆಗೆ ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಪುಸ್ತಕ ನಿಷೇಧಿಸುವ ಆದೇಶದ ಪ್ರತಿ ಹಾಜರಿಗೆ ಅಧಿಕಾರಿಗಳು ವಿಫಲರಾದ ಬೆನ್ನಲ್ಲೇ, ಅಂಥ ಯಾವುದೇ ನಿಷೇಧ ಇಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು.