ಹೂಗ್ಲಿ: ಆತ್ಮಹತ್ಯೆ ಯತ್ನದಿಂದ ರಕ್ಷಿಸಲ್ಬಟ್ಟಿದ್ದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದ ಅಚ್ಚರಿಯ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.
ಹತ್ಯೆ ನಡೆದ ದಿನ ಸಂಜೆ ಎಂದಿನಂತೆ ಮಕ್ಕಳು ಪಾಠ ಹೇಳಿಸಿಕೊಳ್ಳಲು ಬಂದಾಗ ಪ್ರಮತೇಶ್ ಕೈಯಿಂದ ರಕ್ತ ಸೋರುತ್ತಿದ್ದದು ಕಂಡುಬಂದಿತ್ತು. ಈ ಬಗ್ಗೆ ಮಕ್ಕಳು ನೀಡಿದ ಮಾಹಿತಿ ಮೇರೆಗೆ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಆತನ ಪ್ರಾಣ ಉಳಿಸಿದ್ದರು.
ಆದರೆ ಬಳಿಕ ಆತನ ವಿರುದ್ಧ ಕುಟುಂಬದ ಮೂವರ ಹತ್ಯೆಗೈದ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದ ತೀರ್ಪು ಇದೀಗ ಬಂದಿದ್ದು, ಇದೊಂದು ಘೋರ ಅಪರಾಧ ಎಂದು ಪರಿಗಣಿಸಿರುವ ನ್ಯಾಯಾಲಯ ಪ್ರಮತೇಶ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿ ಆದೇಶಿಸಿದೆ.