ಪಿಟಿಐ ನವದೆಹಲಿಸುಪ್ರೀಂ ಕೋರ್ಟ್ ಆದೇಶಾನುಸಾರ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮಂಗಳವಾರ ಸಂಜೆ ಭಾರತೀಯ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಸಲ್ಲಿಸಿದೆ.
ಇನ್ನು ಮುಂದೆ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಚುನಾವಣಾ ಆಯೋಗವು ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ಎಸ್‌ಬಿಐ ಹಂಚಿಕೊಂಡ ವಿವರಗಳನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಅರ್ಥಾತ್ ಚುನಾವಣಾ ಬಾಂಡ್ ಖರೀದಿಸಿದವರ ಹೆಸರು, ಖರೀದಿ ಮೊತ್ತ ಸೇರಿ ಹಲವು ವಿಷಯಗಳು ಅಂದು ಬಹಿರಂಗವಾಗಲಿವೆ.
ಬಾಂಡ್ ನಿಷೇಧಿಸಿದ್ದ ಸುಪ್ರೀಂ:
ಆದರೆ ಈ ಗೌಪ್ಯತೆಯು ಮಾಹಿತಿ ಹಕ್ಕು ಉಲ್ಲಂಘನೆ ಆಗಿದೆ. ಗೌಪ್ಯತೆಯನ್ನು ದುರ್ಬಳಕೆ ಮಾಡಿಕೊಂಡು ಪಕ್ಷಗಳು ಸಕ್ರಮ ಮಾರ್ಗದ ಮೂಲಕ ಅಕ್ರಮ ಹಣ ಮಾಡಿಕೊಳ್ಳುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ರದ್ದು ಮಾಡಿತ್ತು ಮತ್ತು ಖರೀದಿದಾರರ ವಿವರಗಳನ್ನು ಮಾ.6ರಂದು ಬಹಿರಂಗಪಡಿಸಲು ಎಸ್‌ಬಿಐಗೆ ಆದೇಶಿಸಿತ್ತು.
ವಿವರಗಳನ್ನು ಬಹಿರಂಗಪಡಿಸಲು ಎಸ್‌ಬಿಐ ಜೂನ್ 30 ರವರೆಗೆ ಸಮಯ ಕೋರಿತ್ತು. ಆದಾಗ್ಯೂ, ಅದರ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ ಮಂಗಳವಾರ ಕೆಲಸದ ಸಮಯದ ಮುಕ್ತಾಯದೊಳಗೆ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಬ್ಯಾಂಕ್‌ಗೆ ತಿಳಿಸಿತ್ತು.ಯೋಜನೆ ಪ್ರಾರಂಭವಾದಾಗಿನಿಂದ ಎಸ್‌ಬಿಐ 30 ಹಂತಗಳಲ್ಲಿ 16,518 ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬಿಡುಗಡೆ ಮಾಡಿತ್ತು.