ನವದೆಹಲಿ: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಕಂಪನಿಗಳ ಪೈಕಿ 3ನೇ ಸ್ಥಾನದಲ್ಲಿರುವ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿ. ಕುರಿತು ಸಾಕಷ್ಟು ಚರ್ಚೆಗಳು ನಡೆದಿದ್ದವು.
ಆದರೆ ಇದೀಗ ಈ ಕಂಪನಿಗೆ ರಿಲಯನ್ ಇಂಡಸ್ಟ್ರೀಸ್‌ನ ನಂಟಿರುವ ಸುದ್ದಿ ಹೊರಬಿದ್ದಿದೆ. ಕ್ವಿಕ್ ಸಪ್ಲೈ ಚೈನ್ 2000ರಲ್ಲಿ ಸ್ಥಾಪನೆಯಾಗಿದ್ದು, ಉಗ್ರಾಣಗಳನ್ನು ನಿರ್ಮಿಸಿಕೊಡುವಲ್ಲಿ ಖ್ಯಾತಿ ಗಳಿಸಿದೆ.
ಇದರ ನಿರ್ದೇಶಕರೆಲ್ಲರೂ ಸಹ ರಿಲಯನ್ಸ್ ಸಮೂಹದಲ್ಲಿ ಬಹುತೇಕ ಕಂಪನಿಗಳ ಆಡಳಿತ ಮಂಡಳಿಯ ನಿರ್ದೇಶಕರೇ ಅಗಿದ್ದಾರೆ.
ಆದರೆ ರಿಲಯನ್ಸ್ ವಕ್ತಾರರು ಸ್ಪಷ್ಟನೆ ನೀಡಿದ್ದು, ಕ್ವಿಕ್ ಸಪ್ಲೈ ಚೈನ್ ರಿಲಯನ್ಸ್‌ನ ಅಂಗಸಂಸ್ಥೆಯಲ್ಲ ಎಂದು ತಿಳಿಸಿದ್ದಾರೆ.