8000 ಉದ್ಯೋಗಿಗಳ ಮನೆಗೆ ಕಳಿಸಿ, ಎಐಗೆ ಕೆಲಸ: ಐಬಿಎಂ

KannadaprabhaNewsNetwork |  
Published : May 27, 2025, 11:51 PM ISTUpdated : May 27, 2025, 11:52 PM IST
ಐಬಿಎಂ | Kannada Prabha

ಸಾರಾಂಶ

ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಮಾನವನ ಉದ್ಯೋಗವನ್ನು ಕಸಿಯಲಿದೆ ಎಂಬ ಆತಂಕದ ನಡುವೆಯೇ, ವಿಶ್ವದ ದೊಡ್ಡ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಐಬಿಎಂ ಸುಮಾರು 8000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಜಾಗದಲ್ಲಿ ಎಐ ಏಜೆಂಟ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ.

ಮಾನವನ ಬದಲಿಗೆ ಎಐ ಏಜೆಂಟ್ ಕಾರ್ಯನಿರ್ವಹಣೆ

ನ್ಯೂಯಾರ್ಕ್: ಜಗತ್ತಿನ ಎಲ್ಲ ಕ್ಷೇತ್ರಗಳಲ್ಲಿ ತನ್ನ ಬಾಹುಗಳನ್ನು ವಿಸ್ತರಿಸುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಮಾನವನ ಉದ್ಯೋಗವನ್ನು ಕಸಿಯಲಿದೆ ಎಂಬ ಆತಂಕದ ನಡುವೆಯೇ, ವಿಶ್ವದ ದೊಡ್ಡ ತಂತ್ರಜ್ಞಾನ ಕಂಪನಿಗಳ ಪೈಕಿ ಒಂದಾದ ಐಬಿಎಂ ಸುಮಾರು 8000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಜಾಗದಲ್ಲಿ ಎಐ ಏಜೆಂಟ್‌ಗಳನ್ನು ನಿಯೋಜಿಸಲು ನಿರ್ಧರಿಸಿದೆ.

ವರದಿಗಳ ಪ್ರಕಾರ ಈ ಉದ್ಯೋಗ ಕಡಿತದ ಬಹುಪಾಲು ಮಾನವ ಸಂಪನ್ಮೂಲ (ಎಚ್‌ಆರ್‌) ವಿಭಾಗದ ಮೇಲೆ ಬಿದ್ದಿದೆ. ಇತ್ತೀಚೆಗೆ ಐಬಿಎಂ 200 ಎಚ್‌ಆರ್‌ ಉದ್ಯೋಗಿಗಳ ಬದಲಿಗೆ ಎಐ ಎಜೆಂಟ್‌ಗಳನ್ನು ನಿಯೋಜಿಸಿತ್ತು. ಅದಾದ ಕೆಲವೇ ದಿನಗಳಲ್ಲಿ 8000 ಮಂದಿ ಉದ್ಯೋಗ ಕಡಿತದ ವಿಚಾರ ಹೊರಬಿದ್ದಿದೆ.

ಎಐ ಏಜೆಂಟ್‌ಗಳ ಕಾರ್ಯವೇನು?:

ಮಾಹಿತಿ ಹಂಚಿಕೆ, ಉದ್ಯೋಗಿಗಳ ಪ್ರಶ್ನೆಗಳಿಗೆ ಉತ್ತರಿಸುವುದು ಅಥವಾ ಆಂತರಿಕ ದಾಖಲೆಗಳನ್ನು ಸಂಸ್ಕರಿಸುವಂತಹ ಕಾರ್ಯಗಳನ್ನು ನಿರ್ವಹಿಸಬಹುದಾದ ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ಕಂಪನಿ ಹೊಂದಿದೆ. ಈ ಏಜೆಂಟ್‌ಗಳನ್ನು ಹೆಚ್ಚು ಮಾನವ ಚಟುವಟಿಕೆ ಅಗತ್ಯವಿಲ್ಲದ ಕಾರ್ಯಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಈ ಮೊದಲು ಮಾನವರು ಮಾಡುತ್ತಿದ್ದ ಅನೇಕ ಕೆಲಸಗಳನ್ನು ಎಐ ಏಜೆಂಟ್‌ಗಳು ಮಾಡುತ್ತಿರುವುದರಿಂದ ಬೃಹತ್ ಸಂಖ್ಯೆಯಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ನಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಭಿನ್ನಮತದ ವಿವಾದ, ವಿಪಕ್ಷ ಆಕ್ರೋಶದ ಬೆನ್ನಲ್ಲೇ ಚು. ತ್ರಿಮೂರ್ತಿಗಳ ಸಭೆ
ನೋಟಿಸ್‌ ಕೊಟ್ಟವರ ಮನೆಗೇ ಇನ್ನು ಅಧಿಕಾರಿಗಳ ಬರ್ತಾರೆ-ಎಸ್‌ಐಆರ್‌ ನಿಯಮ ಸಡಿಲ