ಸೆನ್ಸೆಕ್ಸ್‌ 1062 ಅಂಕ ಕುಸಿತ:ಹೂಡಿಕೆದಾರರಿಗೆ ಒಂದೇದಿನ 7.33 ಲಕ್ಷ ಕೋಟಿ ನಷ್ಟ

KannadaprabhaNewsNetwork |  
Published : May 10, 2024, 01:37 AM IST
ಸೆನ್ಸೆಕ್ಸ್‌  | Kannada Prabha

ಸಾರಾಂಶ

: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಗುರುವಾರ 1062 ಅಂಕಗಳ ಭಾರೀ ಕುಸಿತ ಕಂಡು 72404 ಅಂಕಗಳಲ್ಲಿ ಮುಕ್ತಾಯವಾಗಿದೆ.

ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್‌ ಗುರುವಾರ 1062 ಅಂಕಗಳ ಭಾರೀ ಕುಸಿತ ಕಂಡು 72404 ಅಂಕಗಳಲ್ಲಿ ಮುಕ್ತಾಯವಾಗಿದೆ. ಪರಿಣಾಮ ಹೂಡಿಕೆದಾರರಿಗೆ ಒಂದೇ ದಿನ 7.33 ಲಕ್ಷ ಕೋಟಿ ರು.ನಷ್ಟು ನಷ್ಟವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 345 ಅಂಕ ಕುಸಿದು 21957 ಅಂಕಗಳಲ್ಲಿ ಕೊನೆಗೊಂಡಿದೆ.

ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತ ಅನಿಶ್ಚಿತತೆ, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆ ಹಿಂದಕ್ಕೆ ಪಡೆದಿದ್ದು, ಜಾಗತಿಕ ಷೇರು ಪೇಟೆಗಳ ಕುಸಿತ, ಪ್ರಮುಖ ಕಂಪನಿಗಳ ತ್ರೈಮಾಸಿಕ ವರದಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೆ ಇರುತ್ದು, ರಿಲಯನ್ಸ್‌, ಎಚ್‌ಡಿಎಫ್‌ಸಿಯಂಥ ಪ್ರಮುಖ ಕಂಪನಿಗಳ ಷೇರುಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗಿದ್ದು ಸೂಚ್ಯಂಕವನ್ನು ಭಾರೀ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸೋಲೊಪ್ಪದ ಸಾಹಸದ ಹಿಂದೆ ‘ಜಾಫರಿ’ ತಂತ್ರ!
ಇರಾನ್‌ ಶರಣಾಗತಿ ಸನ್ನಿಹಿತ: ಟ್ರಂಪ್‌