ತ.ನಾಡು ಪಟಾಕಿ ಕಾರ್ಖಾನೆ ಸ್ಫೋಟಕ್ಕೆ 5 ಮಹಿಳೆಯರು ಸೇರಿ 8 ಮಂದಿ ದುರ್ಮರಣ

KannadaprabhaNewsNetwork |  
Published : May 10, 2024, 01:38 AM ISTUpdated : May 10, 2024, 05:09 AM IST
ಶಿವಕಾಶಿ | Kannada Prabha

ಸಾರಾಂಶ

: ತಮಿಳುನಾಡಿನ ಶಿವಕಾಶಿ ಸಮೀಪ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಐವರು ಮಹಿಳೆಯರು ಸೇರಿ ಎಂಟು ಜನರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ವಿರುದ್ಧನಗರ: ತಮಿಳುನಾಡಿನ ಶಿವಕಾಶಿ ಸಮೀಪ ಪಟಾಕಿ ಕಾರ್ಖಾನೆಯಲ್ಲಿ ಗುರುವಾರ ಭೀಕರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಐವರು ಮಹಿಳೆಯರು ಸೇರಿ ಎಂಟು ಜನರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ವಿರುದ್ಧನಗರ ಜಿಲ್ಲೆಯಲ್ಲಿರುವ ಸೆಂಗಮಾಲಾಪಟ್ಟಿಯಲ್ಲಿನ ಕಾರ್ಖಾನೆಯಲ್ಲಿ 10 ಮಂದಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದ ವೇಳೆಗೆ ಸ್ಫೋಟ ಸಂಭವಿಸಿದೆ. ಆದರೆ ಸ್ಫೋಟಕ್ಕೆ ಕಾರಣ ಇನ್ನು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಚುನಾವಣಾ ಆಯೋಗದ ಜೊತೆ ಮಾತುಕತೆ ನಡೆಸಿದ ಪರಿಹಾರದ ಬಗ್ಗೆ ಪ್ರಸ್ತಾಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇರಾನ್‌ ಸೋಲೊಪ್ಪದ ಸಾಹಸದ ಹಿಂದೆ ‘ಜಾಫರಿ’ ತಂತ್ರ!
ಇರಾನ್‌ ಶರಣಾಗತಿ ಸನ್ನಿಹಿತ: ಟ್ರಂಪ್‌