ನಟ ಟೈಗರ್ ಶ್ರಾಫ್‌ ಹತ್ಯೆಗೆ ಶೂಟೌಟ್‌ ಯತ್ನ

Published : Oct 19, 2026, 08:51 AM IST
Tiger shroff firing

ಸಾರಾಂಶ

ಹಿರಿಯ ನಟ ಜಾಕಿ ಶ್ರಾಫ್‌ ಅವರ ಪುತ್ರ ಹಾಗೂ ಯುವ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ, ಬೈಕ್‌ನಲ್ಲಿ ಬಂದ 3 ಶಂಕಿತ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಪಾತಕಿಗಳು ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ.

ಮುಂಬೈ : ಹಿರಿಯ ನಟ ಜಾಕಿ ಶ್ರಾಫ್‌ ಅವರ ಪುತ್ರ ಹಾಗೂ ಯುವ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ, ಬೈಕ್‌ನಲ್ಲಿ ಬಂದ 3 ಶಂಕಿತ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಪಾತಕಿಗಳು ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ. ಸುದೈವವಶಾತ್ ಅವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಆದರೆ ಶ್ರಾಫ್‌ ಅವರ ಕಾರು ಚಾಲಕ ಸೇರಿ ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ.

ಇದರ ಬೆನ್ನಲ್ಲೇ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನವನೆಂದು ಹೇಳಿಕೊಳ್ಳುವ ಅನಿಲ್ ಪಂಡಿತ್ ಎಂಬಾತನ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಬಹಿರಂಗವಾಗಿದ್ದು, ‘ಟೈಗರ್ ಶ್ರಾಫ್ ನಮ್ಮ ಹಿಟ್‌ಲಿಸ್ಟ್‌ನಲ್ಲಿದ್ದಾನೆ. ಏಕೆಂದರೆ ಆತ ನಮ್ಮ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ. ನಮ್ಮ ವಿರೋಧಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಿದ್ದಾನೆ’ ಎಂದಿದ್ದಾನೆ.

ಪೊಲೀಸರು ಇದರ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದು,15 ತಂಡ ರಚಿಸಿ ಸಿಸಿಟೀವಿ ದೃಶ್ಯ ಆಧರಿಸಿ ದಾಳಿಕೋರರಿಗೆ ಬಲೆ ಬೀಸಿದ್ದಾರೆ. ಒಬ್ಬನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಏನಾಯ್ತು?:

ಪಶ್ಚಿಮ ಉಪನಗರದ ಜುಹು ಪೊಲೀಸ್ ಠಾಣೆ ವ್ಯಾಪ್ತಿಯ ಪುಷ್ಪಾ ಪಾರ್ಕ್ ಬಳಿ ಶ್ರಾಫ್‌ ಅವರು ಫುಟ್ಬಾಲ್ ಮೈದಾನದಿಂದ ಹೊರಬರುವಾಗ ಬೈಕಲ್ಲಿ ಬಂದ ಮೂವರು ಗುಂಡು ಹಾರಿಸಿ ಪರಾರಿ ಆಗಿದ್ದಾರೆ. ಶ್ರಾಫ್ ಸುರಕ್ಷಿತವಾಗಿದ್ದಾರೆ ಮತ್ತು ಗುಂಡಿನ ದಾಳಿಯಲ್ಲಿ ಯಾವುದೇ ಗಾಯಗಳಾಗಿಲ್ಲ. ಚಾಲಕ ಹಾಗೂ ಸ್ನೇಹಿತರಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ

ವೈರಲ್ ಆಗಿರುವ ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಟನ ಕಾರಿನ ಮೇಲೆ ಗುಂಡು ಹಾರಿಸುತ್ತಿರುವುದು ಕಾಣುತ್ತದೆ.

ಬಿಷ್ಣೋಯಿ ಗ್ಯಾಂಗ್‌ ಸಿಟ್ಟು:

ರಾಜಸ್ಥಾನಿಗಳು ಪೂಜನೀಯ ಭಾವದಿಂದ ನೋಡುವ ಕೃಷ್ಣಮೃಗ ಬೇಟೆ ಆಡಿದ್ದ ಆರೋಪ ಸಲ್ಮಾನ್‌ ಖಾನ್ ಮೇಲಿದೆ. ಹೀಗಾಗಿ ರಾಜಸ್ಥಾನ ಮೂಲದವನಾದ ಪಾತಕಿ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌, ಸಲ್ಲು ವಿರುದ್ಧ ಪಿಸ್ತೂಲು ಝಳಪಿಸುತ್ತಲೇ ಇದೆ. ಟೈಗರ್ ಶ್ರಾಫ್‌ ಚಿತ್ರರಂಗದಲ್ಲಿ ನೆಲೆಯೂರಲು ಸಲ್ಲು ಕಾರಣ. ಹೀಗಾಗಿ ಶ್ರಾಫ್‌ ವಿರುದ್ಧವೂ ಬಿಷ್ಣೋಯಿ ಕತ್ತಿ ಮಸೆಯುತ್ತಿದ್ದಾನೆ ಎನ್ನಲಾಗಿದೆ.

ಮೊದಲಲ್ಲ:

2 ವರ್ಷ ಹಿಂದೆ ಸಲ್ಮಾನ್‌ ಆಪ್ತರಾದ ಮಾಜಿ ಸಚಿವ ಬಾಬಾ ಸಿದ್ದಿಕಿ ಮೇಲೆ ದಾಳಿ ಮಾಡಿ ಬಿಷ್ಣೋಯಿ ಗ್ಯಾಂಗ್‌ ಹತ್ಯೆ ಮಾಡಿತ್ತು, ಫೆಬ್ರವರಿಯಲ್ಲಿ, ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ಜುಹು ನಿವಾಸದ ಹೊರಗೆ ಹಾಗೂ ಏಪ್ರಿಲ್ 2024ರಲ್ಲಿ, ಮುಂಬೈನ ಬಾಂದ್ರಾ ಪ್ರದೇಶದಲ್ಲಿನ ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಇದೇ ಗ್ಯಾಂಗ್‌ ಗುಂಡು ಹಾರಿಸಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಕ್ತರ ಮೇಲೆ ಹರಿದ ಟ್ರಕ್‌: 14 ಜನ ಬಲಿ
ದಾಸ್‌, ರಾಂಕಾ ಬಿಡುಗಡೆ ಬಳಿಕ ಸಿಜೆಪಿ ಹೊಸ ರಣತಂತ್ರ: ದೀಪ್ಕೆ