ಒಂದೇ ದಿನ ಬೆಳ್ಳಿ ₹50000, ಚಿನ್ನ ₹ 7400 ಪತನ

KannadaprabhaNewsNetwork |  
Published : Feb 03, 2026, 02:00 AM IST
ಚಿನ್ನ | Kannada Prabha

ಸಾರಾಂಶ

ಭಾರೀ ಏರಿಕೆ ಕಂಡು ಖರೀದಿದಾರರಲ್ಲಿ ಹೂಡಿಕೆ ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ಸತತ 3ನೇ ದಿನ ಕೂಡಾ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಸೋಮವಾರ ಒಂದೇ ದಿನ 1 ಕೆಜಿಗೆ 50000 ರು. ಮತ್ತು ಪ್ರತಿ 10 ಗ್ರಾಂ ಚಿನ್ನದ ಬೆಲೆ 7400 ರು.ನಷ್ಟು ಇಳಿದಿದೆ. 

 ನವದೆಹಲಿ: ಭಾರೀ ಏರಿಕೆ ಕಂಡು ಖರೀದಿದಾರರಲ್ಲಿ ಹೂಡಿಕೆ ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ಸತತ 3ನೇ ದಿನ ಕೂಡಾ ಇಳಿಕೆ ಕಂಡಿದೆ. ಬೆಳ್ಳಿ ಬೆಲೆ ಸೋಮವಾರ ಒಂದೇ ದಿನ 1 ಕೆಜಿಗೆ 50000 ರು. ಮತ್ತು ಪ್ರತಿ 10 ಗ್ರಾಂ ಚಿನ್ನದ ಬೆಲೆ 7400 ರು.ನಷ್ಟು ಇಳಿದಿದೆ. ಇದು ಖರೀದಿದಾರರಲ್ಲಿ ಸಂಭ್ರಮ ಮೂಡಿಸಿದ್ದರೆ, ಈ ಲೋಹಗಳ ಮೇಲೆ ಹೂಡಿಕೆ ಮಾಡಿದ್ದವರಿಗೆ ಭಾರೀ ಶಾಕ್‌ ನೀಡಿದೆ.

ಬೆಳ್ಳಿ ಬೆಲೆಯು ಕೇಜಿಗೆ 50000 ರು.ಗಳ ಭಾರೀ ಕುಸಿತ

ಸೋಮವಾರ ಬೆಂಗಳೂರಿನಲ್ಲಿ ಬೆಳ್ಳಿ ಬೆಲೆಯು ಕೇಜಿಗೆ 50000 ರು.ಗಳ ಭಾರೀ ಕುಸಿತ ಕಂಡು 3 ಲಕ್ಷ ರು.ಗೆ ತಲುಪಿದೆ. ಕೇವಲ ಜ.29ರಂದು 4 ಲಕ್ಷ ರು.ಗಡಿದಾಟಿದ್ದ ಬೆಳ್ಳಿ ಬೆಲೆ ಕೇವಲ 4 ದಿನಗಳಲ್ಲಿ ಭರ್ಜರಿ 1 ಲಕ್ಷ ರು.ನಷ್ಟು ಕುಸಿತ ಕಂಡಿದೆ. ಇನ್ನು ದೆಹಲಿಯಲ್ಲಿ ಬೆಳ್ಳಿ ಬೆಲೆ ಸೋಮವಾರ 52,000 ರು. ಕುಸಿದು 2.60 ಲಕ್ಷ ರು.ಗೆ ಬಂದಿಳಿದಿದೆ.

ಮತ್ತೊಂದೆಡೆ ಬೆಂಗಳೂರಿನಲ್ಲಿ 22 ಕ್ಯಾರಟ್‌ ಚಿನ್ನ 10 ಗ್ರಾಂಗೆ 6800 ರು. ಕುಸಿದು 1,40,400 ರು.ಗೆ, 24 ಕ್ಯಾರಟ್ ಚಿನ್ನ 7410 ರು. ಪತನವಾಗಿ 1,53,170 ರು.ಗೆ ಇಳಿದಿದೆ. ಅದೇ ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನ 12,800 ಭಾರಿ ಕುಸಿತದಿಂದ 10 ಗ್ರಾಂಗೆ 1,52,700 ರು.ಗೆ ತಲುಪಿದೆ. 4 ದಿನಗಳಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಅಂದಾಜು 25000 ರು.ನಷ್ಟು ಇಳಿಕೆಯಾಗಿದೆ.

ಕುಸಿತಕ್ಕೆ ಕಾರಣವೇನು:

ಚೀನಾದ ಶಾರ್ಟ್‌ಸೆಲ್ಲರ್‌ಗಳಿಂದ ಭಾರೀ ಪ್ರಮಾಣದ ಚಿನ್ನ, ಬೆಳ್ಳಿ ಸೇಲ್‌

ಅಮೆರಿಕ ಕೇಂದ್ರೀಯ ಬ್ಯಾಂಕ್‌ಗೆ ಹಣದುಬ್ಬರ ಕಡಿತ ಪರದ ಕೆವಿನ್‌ ನೇಮಕ

ದರ ಏರಿದಾಗ ಮಾರಿ ಲಾಭ ಮಾಡಿಕೊಳ್ಳಲು ಹೂಡಿಕೆದಾರರು ಮುಂದಾಗಿದ್ದು

ಚಿನ್ನ, ಬೆಳ್ಳಿ ಬದಲಾಗಿ ಹೂಡಿಕೆದಾರರು ಡಾಲರ್‌ ಖರೀದಿಯತ್ತ ಮುಖ ಮಾಡಿದ್ದು

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಭಾರತದ ಮಹಾ ದಿಗ್ವಿಜಯ ಯುರೋಪ್‌ ಬಳಿಕ ಇದೀಗ ಅಮೆರಿಕ ಜತೆಗೂ ಭಾರತದ ಡೀಲ್‌
ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!