ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಈ ಬಾರಿಯ ಬಜೆಟ್‌ ಗಾತ್ರ 50.65 ಲಕ್ಷ ಕೋಟಿ ರು.!

KannadaprabhaNewsNetwork |  
Published : Feb 02, 2025, 01:01 AM ISTUpdated : Feb 02, 2025, 04:58 AM IST
ಬಜೆಟ್‌ ಗಾತ್ರ | Kannada Prabha

ಸಾರಾಂಶ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್‌ ಗಾತ್ರ 50,65,345 ಲಕ್ಷ ಕೋಟಿ ರುಪಾಯಿ.

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್‌ ಗಾತ್ರ 50,65,345 ಲಕ್ಷ ಕೋಟಿ ರುಪಾಯಿ. ಕಳೆದ ವರ್ಷ ಮಂಡಿಸಿದ ಬಜೆಟ್‌ಗೆ ಹೋಲಿಸಿದರೆ ಬಜೆಟ್‌ ಗಾತ್ರ ಶೇ.7.4ರಷ್ಟು ಹೆಚ್ಚಾಗಿದೆ. ಕಳೆದ ಬಾರಿ ಕೇಂದ್ರ ಸರ್ಕಾರ 47.16 ಲಕ್ಷ ಕೋಟಿ ಬಜೆಟ್‌ ಮಂಡಿಸಿತ್ತು.

ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರಿ ಪ್ರಾಯೋಜಕತ್ವದ ಯೋಜನೆಗಳಿಗೆ 5,41,850 ವಿನಿಯೋಗಿಸಲು ಉದ್ದೇಶಿಸಲಾಗಿದೆ. ಕಳೆದ ಬಜೆಟ್‌ನಲ್ಲಿ 4,15,356.25 ಕೋಟಿ ವಿನಿಯೋಗಿಸಲಾಗಿತ್ತು. ಕಳೆದ ಬಾರಿ 15.13 ಲಕ್ಷ ಕೋಟಿ ರು. ಅನ್ನು ಕೇಂದ್ರದ ಯೋಜನೆಗಳಿಗೆ ತೆಗೆದಿರಿಸಿದ್ದ ಸರ್ಕಾರ, ಈ ಬಾರಿ 16.29 ಲಕ್ಷ ಕೋಟಿ ವಿನಿಯೋಗಿಸಲಿದೆ.

ಸಾಲ, ಸಣ್ಣ ಉಳಿತಾಯ ಮತ್ತು ಪ್ರೊವಿಡೆಂಟ್‌ ಫಂಡ್‌ಗಳ ಮೇಲಿನ ಬಡ್ಡಿ ದರ ಹೆಚ್ಚಳ, ಉದ್ಯೋಗ ಸೃಷ್ಟಿ ಯೋಜನೆಗಳಿಗೆ ಹೆಚ್ಚಿನ ವಿನಿಯೋಗದಂಥ ಹಲವು ಕಾರಣಗಳಿಂದಾಗಿ ಬಜೆಟ್‌ ವೆಚ್ಚವು ಈ ಬಾರಿ ಹೆಚ್ಚಾಗಿದೆ. ಒಟ್ಟಾರೆ ಬಂಡವಾಳ ವೆಚ್ಚವು 11.22 ಲಕ್ಷ ಕೋಟಿಯಾಗಿದ್ದರೆ, ಪರಿಣಾಮಕಾರಿ ಬಂಡವಾಳ ವೆಚ್ಚವು 15.48 ಲಕ್ಷ ಆಗಿರಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!