- ಕರಿಷ್ಮಾ ಕಪೂರ್ ಮಾಜಿ ಪತಿ ಮನೆಯಲ್ಲಿ ಕದನ
ಆಟೋ ಬಿಡಿಭಾಗಗಳ ಕಂಪನಿಯಾದ ಸೋನಾ ಬಿಎಲ್‌ಡಬ್ಲ್ಯು ಪ್ರಿಸಿಷನ್ ಫೋರ್ಜಿಂಗ್ ಲಿ.ನ ಮಾಲೀಕ ಸಂಜಯ್ ಜೂ.12ರಲ್ಲಿ ಲಂಡನ್‌ನಲ್ಲಿ ಮೃತಪಟ್ಟಿದ್ದರು. ಅದರ ಬೆನ್ನಲ್ಲೇ ಕಂಪನಿ ಕಂಪನಿಯ ಹೆಚ್ಚುವರಿ ನಿರ್ದೇಶಕರಾಗಿ ಪ್ರಿಯಾರನ್ನು ಶುಕ್ರವಾರ ನಡೆದ ವಾರ್ಷಿಕ ಸಭೆಯಲ್ಲಿ ನೇಮಿಸಲಾಗಿದೆ. ಇದಕ್ಕೆ ಸಂಜಯ್ ತಾಯಿ ರಾಣಿ ಕಪೂರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಪತಿಯ ನಿಧನದ ಬಳಿಕ ಪೂರ್ಣ ಆಸ್ತಿಗೆ ತಾನೇ ಮಾಲಕಿಯಾಗಿದ್ದೆ. ಆದರೆ ಪುತ್ರನ ಸಾವಿನ ಶೋಕದ ವೇಳೆ ಕಂಪನಿಯ ಕೆಲ ವ್ಯಕ್ತಿಗಳಿಂದ ನನ್ನ ಸಹಿಪಡೆದು ವಂಚನೆ ಮಾಡಿದ್ದಾರೆ. ಕಂಪನಿಗೆ ಪ್ರಿಯಾ ನೇಮಕ ಕಾನೂನು ಬಾಹಿರ ಎಂದು ರಾಣಿ ಕಪೂರ್ ಆರೋಪಿಸಿದ್ದಾರೆ. ಆದರೆ, ರಾಣಿ ಕಪೂರ್ ಅವರು ಸಂಸ್ಥೆಯ ಷೇರುದಾರರು ಅಲ್ಲ ಎಂದು ಕಂಪನಿ ಹೇಳಿದೆ.