ಚಂಡೀಗಢ: ಇಲ್ಲಿನ ಮೇಯರ್ ಚುನಾವಣೆಯಲ್ಲಿ ನಡೆದ ಮತಚೀಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಚುನಾವಣಾಧಿಕಾರಿ ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಲಿದ್ದಾರೆ.
ಮತ್ತೊಂದೆಡೆ ಪಾಲಿಕೆ ಮೇಯರ್ ಆಗಿರುವ ಬಿಜೆಪಿಯ ಮನೋಜ್ ಸೋನ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಮೂವರು ಕೌನ್ಸಿಲರ್‌ಗಳು ಭಾನುವಾರ ಬಿಜೆಪಿ ಸೇರಿದ್ದಾರೆ.
ಫೆ.5ರಂದು ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಮನೋಜ್ ಸೋನ್ಕರ್ 16 ಮತಗಳನ್ನು ಪಡೆದಿದ್ದರು. ಇವರ ಎದುರಾಳಿ ಆಪ್‌ನ ಕುಲ್ದೀಪ್ ಕುಮಾರ್ 112 ಮತಗಳನ್ನು ಪಡೆದಿದ್ದರು.
ಇದೇ ಚುನಾವಣೆಯಲ್ಲಿ ಅಧಿಕಾರಿ ಮತಚೀಟಿಗಳಲ್ಲಿ ಅಕ್ರಮ ಎಸಗಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ 8 ಮತಗಳನ್ನು ಅಕ್ರಮ ಎಂದು ಘೋಷಿಸಿತ್ತು. ಆಪ್‌ನ ಕುಲ್ದೀಪ್ ಕುಮಾರ್ ಚುನಾವಣೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದರ ಬೆನ್ನಲ್ಲೇ ಮನೋಜ್ ಸೋನ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
‘ಸುಪ್ರೀಂ ನಿಮ್ಮನ್ನು ನೋಡುತ್ತಿದೆ’:
ಮತ್ತೊಂದೆಡೆ ಅರವಿಂದ್ ಕೇಜ್ರಿವಾಲ್ ಪಕ್ಷದ ಮೂವರು ಕೌನ್ಸಿಲರ್‌ಗಳು ಆಪ್ ಬಿಟ್ಟು ಬಿಜೆಪಿ ಪಾಳಯಕ್ಕೆ ಸೇರಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಅರುಣ್ ಸೂದ್ ಹೇಳಿದ್ದಾರೆ.