ದ.ಕೊರಿಯದಲ್ಲಿ ತುರ್ತುಸ್ಥಿತಿ ಡ್ರಾಮ

KannadaprabhaNewsNetwork |  
Published : Dec 04, 2024, 12:32 AM IST
ಕೊರಿಯಾ | Kannada Prabha

ಸಾರಾಂಶ

ದಕ್ಷಿಣ ಕೊರಿಯಾದಲ್ಲಿ ಮಂಗ​ಳವಾರ ತುರ್ತು​ಸ್ಥಿತಿ ಘೋಷ​ಣೆಯ ಹೈಡ್ರಾಮಾ ನಡೆ​ದಿ​ದೆ.

ಸಿಯೋಲ್‌: ದಕ್ಷಿಣ ಕೊರಿಯಾದಲ್ಲಿ ಮಂಗ​ಳವಾರ ತುರ್ತು​ಸ್ಥಿತಿ ಘೋಷ​ಣೆಯ ಹೈಡ್ರಾಮಾ ನಡೆ​ದಿ​ದೆ. ಅಧ್ಯಕ್ಷ ಯೂನ್‌ ಯೆಲ್‌ ಸಂಜೆ ಮಾತ​ನಾ​ಡಿ, ‘ಕಮ್ಯುನಿಸ್ಟ್‌ ಶಕ್ತಿಗಳಿಂದ ದೇಶ​ ರಕ್ಷಿಸಲು ತುರ್ತು ಸಮರ ಕಾನೂನು ಜಾರಿ ಮಾಡ​ಲಾ​ಗು​ತ್ತಿದೆ’ ಎಂದು ಘೋಷಿಸಿ, ‘ವೈರಿ ದೇಶ ಉ. ಕೊರಿಯಾ ಜತೆ ವಿಪ​ಕ್ಷ​ಗಳು ಶಾಮೀ​ಲಾ​ಗಿ​ರುವ ಕಾರಣ ಇದು ಅಗತ್ಯ’ ಎಂದು ಗುಡು​ಗಿ​ ಸಂಸತ್‌ ಬಂದ್‌ ಮಾಡಿ​ಸಿದ್ದ​ರು. ಆದರೆ ಬಳಿಕ, ಸಂಸ​ತ್ತಿಗೆ ಹಾಕಿದ್ದ ಭದ್ರತೆ ಭೇದಿಸಿ ಒಳ​ನು​ಗ್ಗಿದ ಸಂಸ​ದರು 190-0 ಮತ​ದಿಂದ ತುರ್ತು​ಸ್ಥಿತಿ ನಿಲು​ವ​ಳಿ​ಯನ್ನು ಸೋಲಿ​ಸಿ​ದ​ರು.ಏನಿದು ತುರ್ತುಪರಿಸ್ಥಿತಿ?ಮಾರ್ಷಲ್‌ ಲಾ (ಸಮರ ಕಾನೂನು ಅಥವಾ ತುರ್ತು ಸ್ಥಿತಿ) ಪ್ರಕಾರ, ಕೊರಿ​ಯಾ​ದಲ್ಲಿ ಮಂಗ​ಳ​ವಾ​ರ ನಾಗ​ರಿ​ಕರ ಸ್ವಾತಂತ್ರ್ಯದ ಮೇಲೆ, ಎಲ್ಲ ರಾಜ​ಕೀಯ ಚಟು​ವ​ಟಿ​ಕೆ​ಗಳ ಮೇಲೆ ನಿರ್ಬಂಧ ಹೇರಿ ಸಂಸ​ತ್ತನ್ನು ಬಂದ್‌ ಮಾಡ​ಲಾ​ಗಿ​ತ್ತು. ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿ​ವಾಣ ಹಾಕ​ಲಾ​ಗಿ​ತ್ತು. ಎಲ್ಲ ವೈದ್ಯರು, ಸರ್ಕಾರಿ ನೌಕ​ರರು ರಜೆ ಕಡಿ​ತ​ಗೊ​ಳಿಸಿ ಕೆಲಸ ಮಾಡಲು ಸೂಚಿ​ಸ​ಲಾ​ಗಿತ್ತು. ಇದನ್ನು ಉಲ್ಲಂಘಿ​ಸಿ​ದವರಿಗೆ ಕಠಿಣ ಸಜೆ ವಿಧಿ​ಸುವ ಆದೇಶ ಹೊರ​ಡಿ​ಸ​ಲಾ​ಗಿ​ತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ ಆರ್ಥಿಕತೆಗೆ ಏಟು ನೀಡಲು ದುಬೈಗೆ ಇರಾನ್‌ ಭಾರಿ ದಾಳಿ
ಭಾರತಕ್ಕೆ ಬೇಕಿದ್ದ ಪಾಕ್‌ ಉಗ್ರ ಅನಾಮಿಕ ವ್ಯಕ್ತಿ ಗುಂಡಿಗೆ ಬಲಿ