ಹೋರ್ಮುಜ್‌ ಜಲಸಂಧಿ ಮುಚ್ಚಲು ಇರಾನ್ ಸಂಸತ್‌ ಒಪ್ಪಿಗೆ : ಭಾರತಕ್ಕೂ ಸಂಕಷ್ಟ

KannadaprabhaNewsNetwork |  
Published : Jun 22, 2025, 11:47 PM ISTUpdated : Jun 23, 2025, 04:27 AM IST
ಜಲಸಂಧಿ  | Kannada Prabha

ಸಾರಾಂಶ

  ಇರಾನ್ ತನ್ನ ವೈರಿ ರಾಷ್ಟ್ರಗಳಿಗೆ ಮಹಾ ಆಘಾತ ನೀಡಲು ಮುಂದಾಗಿದ್ದು, ವಿಶ್ವದ ಅತ್ಯಂತ ನಿರ್ಣಾಯಕ ತೈಲ ಕಾರಿಡಾರ್‌ ಎಂದೇ ಬಿಂಬಿತ ಹೋರ್ಮುಜ್‌ ಜಲಸಂಧಿಯನ್ನು ಮುಚ್ಚಲು ಮುಂದಾಗಿದೆ. ಇದಕ್ಕೆ ಇರಾನ್‌ ಸಂಸತ್‌ ಕೂಡ ಒಪ್ಪಿಗೆ ನೀಡಿದ್ದು, ಇದರಿಂದ ಭಾರತದ ತೈಲ ವಹಿವಾಟಿಗೂ ಪೆಟ್ಟು ಬೀಳಲಿದೆ.

 ಟೆಹ್ರಾನ್‌: ಇರಾನ್‌ನ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ತನ್ನ ವೈರಿ ರಾಷ್ಟ್ರಗಳಿಗೆ ಮಹಾ ಆಘಾತ ನೀಡಲು ಮುಂದಾಗಿದ್ದು, ವಿಶ್ವದ ಅತ್ಯಂತ ನಿರ್ಣಾಯಕ ತೈಲ ಕಾರಿಡಾರ್‌ ಎಂದೇ ಬಿಂಬಿತ ಹೋರ್ಮುಜ್‌ ಜಲಸಂಧಿಯನ್ನು ಮುಚ್ಚಲು ಮುಂದಾಗಿದೆ. ಇದಕ್ಕೆ ಇರಾನ್‌ ಸಂಸತ್‌ ಕೂಡ ಒಪ್ಪಿಗೆ ನೀಡಿದ್ದು, ಇದರಿಂದ ಭಾರತದ ತೈಲ ವಹಿವಾಟಿಗೂ ಪೆಟ್ಟು ಬೀಳಲಿದೆ.

ಹೋರ್ಮುಜ್‌ ಜಲಸಂಧಿ ಬಂದ್ ಮಾಡಲು ಇರಾನ್‌ ಸಂಸತ್‌ ಒಪ್ಪಿಗೆ ಸೂಚಿಸಿರುವುದರ ಬಗ್ಗೆ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ಈ ಹಿಂದೆಯೂ ಕೆಲ ಸಂದರ್ಭದಲ್ಲಿ ಹೋರ್ಮುಜ್ ಜಲಸಂಧಿ ಮುಚ್ಚುವ ಬೆದರಿಕೆ ಹಾಕಿತ್ತು. ಮುಚ್ಚಿರಲಿಲ್ಲ. ಆದರೆ ಇದೀಗ ಅಮೆರಿಕಗೆ ಪಾಠ ಕಲಿಸಲು ಜಲಸಂಧಿ ಬಂದ್‌ ಮಾಡಿದೆ. ಒಮಾನ್ ಮತ್ತು ಇರಾನ್ ನಡುವಿನ ಈ ಹೋರ್ಮುಜ್‌ ಜಲಸಂಧಿಯ ಮೂಲಕವೇ ಜಗತ್ತಿಗೆ ಶೇ.20ರಷ್ಟು ತೈಲ ಸಾಗಣೆ ನಡೆಯುತ್ತದೆ. ಈಗ ಜಲಸಂಧಿ ಮುಚ್ಚುವುದರಿಂದ ಸುಮಾರು 1.8 ಕೋಟಿ ಬ್ಯಾರೆಲ್ ತೈಲ ಮತ್ತು ಇತರ ಇಂಧನಗಳ ಸಾಗಾಣೆಗೆ ತೊಡಕಾಗಲಿದೆ. ವಿಶ್ವದ ದೊಡ್ಡಣ್ಣ ಅಮೆರಿಕ ಬೇರೆ ದೇಶಗಳಿಗೆ ಇಂಧನ ರಫ್ತಿಗೆ ಇದೇ ಕಾಲುವೆ ಬಳಸುವುದರಿಂದ ಆರ್ಥಿಕವಾಗಿ ದೊಡ್ಡ ಪೆಟ್ಟು ಬೀಳಲಿದೆ.

ಭಾರತಕ್ಕೂ ಸಂಚಕಾರ?

ಭಾರತವು ಭಾರತವು ತನ್ನ ಕಚ್ಚಾ ತೈಲಗಳ ಬಳಕೆಯಲ್ಲಿ ಶೇ.90ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ ಶೇ.40ರಷ್ಟು ತೈಲಗಳು ಮತ್ತು ಶೇ.50ಕ್ಕಿಂತ ಹೆಚ್ಚು ಎಲ್‌ಎನ್‌ಜಿ ಈ ಮಾರ್ಗದ ಮೂಲಕವೇ ಹರಿಯುತ್ತದೆ. ದಿನಕ್ಕೆ ಸುಮಾರು 20 ಲಕ್ಷ ಬ್ಯಾರೆಲ್ ತೈಲಗಳು ಭಾರತಕ್ಕೆ ಹೋರ್ಮುಜ್ ಮೂಲಕವೇ ಬರುತ್ತದೆ. ಹೀಗಾಗಿ ಸಹಜವಾಗಿಯೇ ಇರಾನ್ ನಡೆ ಪರಿಣಾಮ ಬೀಳಬಹುದು. ಆದರೆ ಭಾರತದ ಮತ್ತೊಂದು ಪ್ರಮುಖ ಅನಿಲ ಪೂರೈಕೆದಾರ ಕತಾರ್‌ ಭಾರತಕ್ಕೆ ತೈಲ ಸರಬರಾಜಿಗೆ ಈ ಮಾರ್ಗ ಬಳಸುವುದಿಲ್ಲ ಹೀಗಾಗಿ ಭಾರತಕ್ಕೆ ಅಷ್ಟೊಂದು ದೊಡ್ಡ ಮಟ್ಟಿಗಿನ ಪೆಟ್ಟು ಬೀಳಲ್ಲ. ಆದರೆ ಜಲಸಂಧಿ ಸ್ಥಬ್ಧ ಆಗುವುದರ ಪರಿಣಾಮದಿಂದ ತೈಲ ಬೆಲೆಗಳು ದುಬಾರಿ, ಆಮದಿನ ಪ್ರಮಾಣದಲ್ಲಿ ಇಳಿಕೆಯಾಗಬಹುದು.

PREV
Read more Articles on

Recommended Stories

65 ಲಕ್ಷ ಬಿಹಾರ ಮತದಾರರ ಕೈಬಿಟ್ಟಿದ್ದೇಕೆ?: ಸುಪ್ರೀಂ ಪ್ರಶ್ನೆ
ಶುಭಾಂಶು ಶುಕ್ಲಾ ವಾರಾಂತ್ಯಕ್ಕೆ ಭಾರತಕ್ಕೆ