ಆಸ್ಪತ್ರೆ ಸೇವೆಗಳಿಗೆ ಏಕರೂಪ ದರ: ಕೇಂದ್ರಕ್ಕೆ ಸುಪ್ರೀಂ ತಾಕೀತು

KannadaprabhaNewsNetwork |  
Published : Feb 29, 2024, 02:03 AM ISTUpdated : Feb 29, 2024, 11:25 AM IST
ಆಸ್ಪತ್ರೆ ಸೇವೆಗಳು | Kannada Prabha

ಸಾರಾಂಶ

ಆಸ್ಪತ್ರೆ ಸೇವೆಗಳಿಗೆ ಏಕರೂಪ ದರ ನಿಗದಿ ನಿಗದಿ ಮಾಡಬೇಕು ಎಂದು ಸೂಚಿಸಿರುವ ಸುಪ್ರೀಂ ಕೋರ್ಟ್‌, ಒಂದು ತಿಂಗಳೊಳಗೆ ಈ ಕುರಿತು ಕ್ರಮ ಕೈಗೊಳ್ಳದೇ ಹೋದಲ್ಲಿ ನಾವೇ ಈ ಕುರಿತು ಆದೇಶ ಹೊರಡಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದೆ.

ನವದೆಹಲಿ: ಆಸ್ಪತ್ರೆ ಸೇವೆಗಳಿಗೆ ಏಕರೂಪ ದರ ನಿಗದಿ ನಿಗದಿ ಮಾಡಬೇಕು ಎಂದು ಸೂಚಿಸಿರುವ ಸುಪ್ರೀಂ ಕೋರ್ಟ್‌, ಒಂದು ತಿಂಗಳೊಳಗೆ ಈ ಕುರಿತು ಕ್ರಮ ಕೈಗೊಳ್ಳದೇ ಹೋದಲ್ಲಿ ನಾವೇ ಈ ಕುರಿತು ಆದೇಶ ಹೊರಡಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದೆ.

‘ವೆಟರನ್ಸ್‌ ಫೋರಂ ಫಾರ್‌ ಟ್ರಾನ್ಸ್‌ಪರೆನ್ಸಿ ಇನ್‌ ಪಬ್ಲಿಕ್‌ ಲೈಫ್‌’ ಎಂಬ ಸರ್ಕಾರೇತರ ಸಂಸ್ಥೆಯೊಂದು, 2012ರ ಕ್ಲಿನಿಕಲ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆಯ 9ನೇ ವಿಧಿಯ ಅನ್ವಯ ವಿವಿಧ ಚಿಕಿತ್ಸೆಗಳಿಗೆ ಸೂಕ್ತ ದರ ನಿಗದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿತ್ತು.

ಇದರ ವಿಚಾರಣೆ ನಡೆಸಿ ಉದಾಹರಣೆ ಸಮೇತ ಆದೇಶ ನೀಡಿದ ಕೋರ್ಟ್‌,‘ಕ್ಯಾಟರಾಕ್ಟ್‌ (ಕಣ್ಣಿನ) ಶಸ್ತ್ರಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಯಲ್ಲಿ 10 ಸಾವಿರ ರು.ವೆಚ್ಚ ತಗುಲಿದರೆ, ಖಾಸಗಿ ಆಸ್ಪತ್ರೆಗಳಲ್ಲಿ 30 ಸಾವಿರ ರು. ನಿಂದ 1.40 ಲಕ್ಷ ರು.ವರೆಗೂ ದರ ವಿಧಿಸಲಾಗುತ್ತಿದೆ. 

ಒಂದೇ ರೀತಿಯ ಸೇವೆಗೆ ಹೀಗೆ ದರ ತಾರತಮ್ಯ ಇದ್ದರೂ, ಇದನ್ನು ಸರ್ಕಾರ ತಡೆದಿಲ್ಲ, ಈ ತಾರತಮ್ಯ ತಡೆಯಲು 14 ವರ್ಷಗಳ ಹಿಂದಿನ ಕಾಯ್ದೆ ಜಾರಿಯಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಕಿಡಿಕಾರಿತು.

ಈ ಕಾಯ್ದೆಯ ಅನ್ವಯ ದೇಶಾದ್ಯಂತ ಇರುವ ಎಲ್ಲಾ ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರಗಳು ತಮ್ಮಲ್ಲಿ ನೀಡುವ ವಿವಿಧ ಸೇವೆಗಳ ಶುಲ್ಕದ ಕುರಿತು ಪ್ರಾದೇಶಿಕ ಮತ್ತು ಆಂಗ್ಲ ಭಾಷೆಯಲ್ಲಿ ಸ್ಪಷ್ಟ ಮಾಹಿತಿಯನ್ನು ಎಲ್ಲರಿಗೂ ಕಾಣುವ ಸ್ಥಳದಲ್ಲಿ ಪ್ರದರ್ಶಿಸುವುದು ಕಡ್ಡಾಯ. 

ಇಂಥ ದರ ಕಾಲಕಾಲಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಗದಿ ಮಾಡುವ ಮಿತಿಯಲ್ಲೇ ಇರಬೇಕು ಎಂದು ಸೂಚಿಸುತ್ತದೆ.ಆದರೆ ಈ ಅರ್ಜಿ ವಿಚಾರಣೆ ವೇಳೆ ತನ್ನ ಅಸಹಾಯಕತೆ ಪ್ರದರ್ಶಿಸಿದ್ದ ಕೇಂದ್ರ ಸರ್ಕಾರ, ಈ ಕುರಿತು ಹಲವು ಬಾರಿ ರಾಜ್ಯಗಳಿಗೆ ಮನವಿ ಮಾಡಿಕೊಂಡರೂ ಅವುಗಳು ಸೂಕ್ತವಾಗಿ ಸ್ಪಂದಿಸಿಲ್ಲ ಎಂದಿತ್ತು. 

ಈ ವೇಳೆ ಅರ್ಜಿದಾರರು, ಕೇಂದ್ರ ಸರ್ಕಾರ ತನ್ನ ವಿಶೇಷ ಅಧಿಕಾರ ಬಳಸಿ ದರ ನಿಗದಿ ಮಾಡಬಹುದು ಎಂದಿತ್ತು.ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್‌, ‘ನಾಗರಿಕರು ಆರೋಗ್ಯ ಸೇವೆಗಳ ಮೂಲಭೂತ ಹಕ್ಕು ಹೊಂದಿದ್ದಾರೆ. 

ಈ ವಿಷಯದಲ್ಲಿ ಕೇಂದ್ರ ಸರ್ಕಾರ ತನ್ನ ಹೊಣೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳು ಶೀಘ್ರವೇ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳ ಸಭೆ ಕರೆಯಬೇಕು. 

ಅಲ್ಲಿ ಏಕರೂಪ ದರ ನಿಗದಿ ಮಾಡಿ ಅದನ್ನು ಎಲ್ಲಾ ಆಸ್ಪತ್ರೆಗಳು ಕಡ್ಡಾಯವಾಗಿ ಪ್ರದರ್ಶಿಸುವಂತೆ ನೋಡಿಕೊಳ್ಳಬೇಕು. ಈ ಪ್ರಕ್ರಿಯೆ ಒಂದು ತಿಂಗಳಲ್ಲಿ ಮುಗಿಯಬೇಕು’ ಎಂದಿದೆ.

‘ಇಲ್ಲದೇ ಹೋದಲ್ಲಿ ಅರ್ಜಿದಾರರ ಕೋರಿಕೆಯಂತೆ ಸಿಜಿಎಚ್‌ಎಸ್‌ (ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ) ಯೋಜನೆಯ ದರಪಟ್ಟಿಯನ್ನೇ ದೇಶವ್ಯಾಪಿ ಜಾರಿ ಮಾಡುವಂತೆ ಆದೇಶಿಸುತ್ತೇವೆ ಎಂದು ಎಚ್ಚರಿಸಿತು.

 ಅಲ್ಲದೆ ಒಂದು ವೇಳೆ ರಾಜ್ಯಗಳು ಏಕರೂಪ ದರ ನಿಗದಿಗೆ ಮುಂದಾಗದೇ ಹೋದಲ್ಲಿ ಕೇಂದ್ರದ ವಿಶೇಷ ಅಧಿಕಾರ ಬಳಸಿ’ ಎಂಬ ಸೂಚನೆಯನ್ನೂ ನೀಡಿತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಷ್ಯಾದ ಯಾಕುಟಿಯಾದಲ್ಲಿ- 56 ಡಿ.ಸೆ. ತಾಪ ದಾಖಲು
ಹಾರುವ ಮೊದಲೇ ಕೇರಳದ ವಿಮಾನ ಸಂಸ್ಥೆ ಸಂಕಷ್ಟದಲ್ಲಿ