ಮಾಜಿ ಸಿಎಂ ಪನ್ನೀರ್‌ಗೆ ಹಲಸಿನ ಚಿಹ್ನೆ ಬಳಿಕ ಹಣ್ಣು ಸೇಲ್‌ ಏರಿಕೆ!

KannadaprabhaNewsNetwork |  
Published : Apr 04, 2024, 01:07 AM ISTUpdated : Apr 04, 2024, 05:45 AM IST
ಪನ್ನೀರ್‌ಸೆಲ್ವಂ | Kannada Prabha

ಸಾರಾಂಶ

ಲೋಕಸಭೆ ಚುನಾವಣೆಗೆ ತಮಿಳುನಾಡಿನ ರಾಮನಾಥಪುರಂ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರಿಗೆ ಚುನಾವಣಾ ಆಯೋಗ ಹಲಸಿನ ಹಣ್ಣನ್ನು ಚಿಹ್ನೆಯಾಗಿದೆ ನೀಡಿದೆ.

ರಾಮನಾಥಪುರಂ: ಲೋಕಸಭೆ ಚುನಾವಣೆಗೆ ತಮಿಳುನಾಡಿನ ರಾಮನಾಥಪುರಂ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರಿಗೆ ಚುನಾವಣಾ ಆಯೋಗ ಹಲಸಿನ ಹಣ್ಣನ್ನು ಚಿಹ್ನೆಯಾಗಿದೆ ನೀಡಿದೆ. 

ಅದರ ಬಳಿಕ ಅವರ ಅಭಿಮಾನಿಗಳು ಎಲ್ಲೆಡೆ ಹಲಸಿನ ಹಣ್ಣು ಖರೀದಿಗೆ ಸಭೆಗಳಿಗೆ ಆಗಮಿಸುತ್ತಿದ್ದಾರೆ ಮತ್ತು ಮನೆಗೂ ಕೊಂಡೊಯ್ಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಹಲಸಿನ ಮಾರಾಟ ದಿಢೀರ್‌ ಹೆಚ್ಚಳವಾಗಿದೆ. ಪ್ರತಿದಿನ 30 ರಿಂದ 40 ಟನ್‌ಗಳಷ್ಟು ಹಲಸು ಮಾರಾಟವಾಗುತ್ತಿದೆ, ಈ ಎರಡು ದಿನಗಳಿಂದ ಹಲಸು ಬೇಡಿಕೆ ಹೆಚ್ಚಾಗುತ್ತಿದೆ ಎಂದು ಇಲ್ಲಿನ ಹಣ್ಣಿನ ವ್ಯಾಪಾರಸ್ಥರು ತಿಳಿಸಿದ್ದಾರೆ.

 ಎಐಎಡಿಎಂಕೆ ನಾಯಕರಾಗಿದ್ದ ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ಬಣದಲ್ಲಿ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಪನ್ನೀರ್‌ಸೆಲ್ವಂ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಹೀಗಾಗಿ ಅವರು ಪಕ್ಷೇತರರಾಗಿ ಚುನಾವಣೆಗೆ ನಿಂತಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೆಡಿ ಚಿತ್ರದ ‘ಸೆರಗು ಸರ್‌ಸೇ’ ಹಾಡು ಬಗ್ಗೆ ಸಂಸತ್‌ನಲ್ಲೂ ಕಿಡಿ
ರಾಜಕಾರಣಕ್ಕೆ ಪೂರ್ಣ ವಿರಾಮ ಇಲ್ಲ : ಪ್ರಧಾನಿ ನರೇಂದ್ರ ಮೋದಿ