ಸರ್ಕಾರದ ಬೊಕ್ಕಸ ಪೂರ್ಣ ಖಾಲಿ : ತೆಲಂಗಾಣ ಸಿಎಂ

KannadaprabhaNewsNetwork |  
Published : Aug 26, 2025, 01:03 AM ISTUpdated : Aug 26, 2025, 03:51 AM IST
Revanth Reddy

ಸಾರಾಂಶ

ಕರ್ನಾಟಕದ ರೀತಿ ಗ್ಯಾರಂಟಿಗಳನ್ನು ನೀಡಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, ಇದೀಗ ಬೊಕ್ಕಸ ಬರಿದು ಮಾಡಿಕೊಂಡು ಪರದಾಡುತ್ತಿರುವುದನ್ನು ಸ್ವತಃ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ.

 ಹೈದರಾಬಾದ್ :  ಕರ್ನಾಟಕದ ರೀತಿ ಗ್ಯಾರಂಟಿಗಳನ್ನು ನೀಡಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, ಇದೀಗ ಬೊಕ್ಕಸ ಬರಿದು ಮಾಡಿಕೊಂಡು ಪರದಾಡುತ್ತಿರುವುದನ್ನು ಸ್ವತಃ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ‘ಸರ್ಕಾರದ ಬೊಕ್ಕಸ ಪೂರ್ತಿ ಬತ್ತಿಹೋಗಿದ್ದು, ಮಾರಾಟ ಮಾಡಿ ದೇಣಿಗೆ ಎತ್ತಲು ಸಹ ಸರ್ಕಾರದ ಬಳಿ ಭೂಮಿಯಿಲ್ಲ’ ಎಂದು ವಿಷಾದಿಸಿದ್ದಾರೆ.

ಉಸ್ಮಾನಿಯಾ ವಿವಿಯ ವಿವಿಧ ಕಟ್ಟಡಗಳ ಲೋಕಾರ್ಪಣೆ ಹಾಗೂ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ತೆಲಂಗಾಣ ಸರ್ಕಾರದ ಬೊಕ್ಕಸ ಪೂರ್ತಿ ಒಣಗಿಹೋಗಿದೆ. ಸರ್ಕಾರದಲ್ಲಿ ಮಾರಾಟ ಮಾಡಲು ಮತ್ತು ಹಣವನ್ನು ಸಂಗ್ರಹಿಸಲು ಯಾವುದೇ ಭೂಮಿಯೂ ಲಭ್ಯವಿಲ್ಲ’ ಎಂದರು.

‘ಇಷ್ಟಾದರೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಬದ್ಧರಾಗಿದ್ದೇವೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಶೇ.1.5ರಷ್ಟು ಹಣದುಬ್ಬರ ದರದೊಂದಿಗೆ ದೇಶದಲ್ಲಿಯೇ ಅತ್ಯಂತ ಕಡಿಮೆ ಹಣದುಬ್ಬರ ಹೊಂದಿರುವ ಮೊದಲ ರಾಜ್ಯ ತೆಲಂಗಾಣ’ ಎಂದರು.

ಈ ಹಿಂದೆಯೂ ಸರ್ಕಾರ ಆರ್ಥಿಕವಾಗಿ ಸೋತುಹೋಗಿರುವ ಬಗ್ಗೆ ತಿಳಿಸಿದ್ದ ರೆಡ್ಡಿ, ‘ಚುನಾವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಹಣಕಾಸಿನ ಸ್ಥಿತಿಗತಿಯ ಬಗ್ಗೆ ನಿಜವಾದ ತಿಳಿವಳಿಕೆ ಬಂತು. ನಾವೇ ಘೋಷಿಸಿದ ಗ್ಯಾರಂಟಿಗೆ ಮೀಸಲಾಗಿರಿಸಲು ಸರ್ಕಾರದ ಬಳಿ ದುಡ್ಡಿಲ್ಲ. ಗ್ಯಾರಂಟಿ ಬಗ್ಗೆ ದೇಶಾದ್ಯಂತ ಚರ್ಚೆಯಾಗಬೇಕು’ ಎಂದಿದ್ದರು. ಅಲ್ಲದೆ, ‘ಕೇಂದ್ರ ಸರ್ಕಾರದ ಬಳಿ ಹಣ ಕೇಳಲು ಹೋದರೆ ಅಲ್ಲಿ ಯಾರೂ ನಾವು ಬಂದಾಗ ಬಾಗಿಲು ತೆರೆಯುತ್ತಿಲ್ಲ’ ಎಂದು ಹೇಳಿ ಸುದ್ದಿಯಾಗಿದ್ದರು.

ತೆಲಂಗಾಣದ 6 ಗ್ಯಾರಂಟಿ- ಮಹಿಳೆಯರಿಗೆ ತಿಂಗಳಿಗೆ 2,500 ರು. 500 ರು.ಗೆ ಸಿಲಿಂಡರ್‌, ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ

- ರೈತರು, ಹಿಡುವಳಿದಾರರಿಗೆ ಎಕರೆಗೆ 15 ಸಾವಿರ ರು.ನೆರವು. ಕೃಷಿ ಕಾರ್ಮಿಕರಿಗೆ 12000 ರು. ನೆರವು

- ವಸತಿರಹಿತರಿಗೆ ನಿವೇಶನ. ಮನೆ ನಿರ್ಮಾಣಕ್ಕೆ 5 ಲಕ್ಷ ರು., ತೆಲಂಗಾಣ ಹೋರಾಟಗಾರರಿಗೆ 250 ಚದರ ಅಡಿ ನಿವೇಶನ

- ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್. ವಿದ್ಯಾರ್ಥಿಗಳಿಗೆ 5 ಲಕ್ಷ ರು.ಗಳ ಶಿಕ್ಷಣ ಭರವಸೆ ಕಾರ್ಡ್

- ವೃದ್ಧರು, ವಿಧವೆಯರು, ಅಂಗವಿಕಲರು, ಬೀಡಿ ಕಾರ್ಮಿಕರು, ಒಂಟಿ ಮಹಿಳೆಯರು, ಕಲ್ಲು ಕ್ವಾರಿಗಳು ಮತ್ತು ಕೈಮಗ್ಗ ಕಾರ್ಮಿಕರು, ಹೆಚ್‌ಐವಿ ಪೀಡಿತರು, ಡಯಾಲಿಸಿಸ್ ರೋಗಿಗಳಿಗೆ 4 ಸಾವಿರ ರು. ಮಾಸಿಕ ಪಿಂಚಣಿ ಮತ್ತು ರಾಜೀವ್ ಆರೋಗ್ಯ ವಿಮೆಗೆ 10 ಲಕ್ಷ ರು.

PREV
Read more Articles on

Recommended Stories

ಪ್ರವಾಹದ ಬಗ್ಗೆ ಪಾಕಿಸ್ತಾನಕ್ಕೆ ಎಚ್ಚರಿಸಿ ಭಾರತ ಔದಾರ್ಯ!
ಹುಟ್ಟೂರು ಲಖನೌನಲ್ಲಿ ಶುಕ್ಲಾಗೆ ಅದ್ಧೂರಿ ಸ್ವಾಗತ, ಮೆರವಣಿಗೆ