ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ

KannadaprabhaNewsNetwork |  
Published : Dec 06, 2025, 02:00 AM ISTUpdated : Dec 06, 2025, 04:27 AM IST
supreme court

ಸಾರಾಂಶ

‘ದೇವರಿಗೆಂದು ಭಕ್ತರು ನೀಡುವ ಕಾಣಿಕೆಯನ್ನು ದೇವಸ್ಥಾನದ ಕಾರ್ಯಗಳಿಗಷ್ಟೇ ಬಳಸಬೇಕು. ದೇವಾಲಯಗಳ ದುಡ್ಡನ್ನು ಅನ್ಯ ಕಾರ್ಯಕ್ಕೆ ಬಳಸುವ ಕ್ರಮ ಅಕ್ರಮ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕ ಗಡಿಯಲ್ಲಿರುವ ಕೇರಳದ ತಿರುನೆಲ್ಲಿ ದೇವಾಲಯದ ಪ್ರಕರಣವೊಂದರಲ್ಲಿ ಈ ಮಹತ್ವದ ಆದೇಶವನ್ನು ಕೋರ್ಟ್ ನೀಡಿದೆ.

  ನವದೆಹಲಿ :  ‘ದೇವರಿಗೆಂದು ಭಕ್ತರು ನೀಡುವ ಕಾಣಿಕೆಯನ್ನು ದೇವಸ್ಥಾನದ ಕಾರ್ಯಗಳಿಗಷ್ಟೇ ಬಳಸಬೇಕು. ದೇವಾಲಯಗಳ ದುಡ್ಡನ್ನು ಅನ್ಯ ಕಾರ್ಯಕ್ಕೆ ಬಳಸುವ ಕ್ರಮ ಅಕ್ರಮ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕ ಗಡಿಯಲ್ಲಿರುವ ಕೇರಳದ ತಿರುನೆಲ್ಲಿ ದೇವಾಲಯದ ಪ್ರಕರಣವೊಂದರಲ್ಲಿ ಈ ಮಹತ್ವದ ಆದೇಶವನ್ನು ಕೋರ್ಟ್ ನೀಡಿದೆ.

‘ಸಹಕಾರಿ ಬ್ಯಾಂಕುಗಳನ್ನು ಉಳಿಸಲು ದೇವಸ್ಥಾನಕ್ಕೆ ಸೇರಿದ ಹಣ ಬಳಕೆ

‘ಸಹಕಾರಿ ಬ್ಯಾಂಕುಗಳನ್ನು ಉಳಿಸಲು ದೇವಸ್ಥಾನಕ್ಕೆ ಸೇರಿದ ಹಣ ಬಳಸಲಾಗಿದೆ’ ಎಂಬ ಅರ್ಜಿ ವಿಚಾರಣೆನ ನಡೆಸಿದ ಪೀಠ ಈ ಆದೇಶ ಹೊರಡಿಸಿದೆ.

ಈ ಹಿಂದೆ 5 ಸಹಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿ ರೂಪದಲ್ಲಿದ್ದ ಠೇವಣಿಯನ್ನು ಮರಳಿಸಲು ಅವುಗಳು ಹಿಂದೇಟು ಹಾಕಿದ್ದನ್ನು ಗಮನಿಸಿದ್ದ ಕೇರಳ ಹೈಕೋರ್ಟ್‌, 2 ತಿಂಗಳಲ್ಲಿ ಅದನ್ನು ತಿರುನೆಲ್ಲಿ ದೇವಸ್ಥಾನ ದೇವಸ್ವಂಗೆ ಹಿಂದಿರುಗಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಾನಂತವಾಡಿ ಕೋ-ಆಪರೇಟಿವ್ ಅರ್ಬನ್ ಸೊಸೈಟಿ ಲಿ. ಮತ್ತು ತಿರುನೆಲ್ಲಿ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದವು. 

ದೇವರಿಗೆ ಸೇರಿದ ಹಣವನ್ನು ದೇವಸ್ಥಾನದ ಕೆಲಸಗಳಿಗಾಗಿ ಉಳಿಸಿ

ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸಿಜೆಐ ನ್ಯಾ। ಸೂರ್ಯಕಾಂತ್‌ ಮತ್ತು ನ್ಯಾ। ಜಯಮಾಲ್ಯ ಬಾಗ್ಚಿ ಅವರ ಪೀಠ, ‘ದೇವರಿಗೆ ಸೇರಿದ ಹಣವನ್ನು ದೇವಸ್ಥಾನದ ಕೆಲಸಗಳಿಗಾಗಿ ಉಳಿಸಿ, ಬಳಸಬೇಕು. ಬೇಕಿದ್ದರೆ ಹಣ ಮರಳಿಸುವ ಅವಧಿಯನ್ನು ವಿಸ್ತರಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿ’ ಎಂದು ನಿರ್ದೇಶಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

150 ದೇಶಗಳಿಗೆ ಭಾರತದ ಇಂಧನ : ಮೋದಿ
ಯುಜಿಸಿಯ ತಾರತಮ್ಯ ತಡೆ ಸಮಿತಿ : ಜನರಲ್‌ ವರ್ಗ ಕಿಡಿ