ಭಾರತದ ಗಡಿಗೆ ಹಿಂದೂ ನಿರಾಶ್ರಿತರ ಆಗಮನ

KannadaprabhaNewsNetwork |  
Published : Aug 07, 2024, 01:06 AM IST
ಭಾರತದ ಗಡಿ | Kannada Prabha

ಸಾರಾಂಶ

ಬಾಂಗ್ಲಾದಲ್ಲಿ ಹಿಂದೂಗಳನ್ನೇ ಗುರಿಯಾಗಿಸಿ ದಾಳಿ ಹೆಚ್ಚಳ ಬೆನ್ನಲ್ಲೇ ಆತಂಕಗೊಂಡಿರುವ ಹಿಂದೂಗಳು ಭಾರತದ ಗಡಿಯತ್ತ ಆಗಮಿಸತೊಡಗಿದ್ದಾರೆ. ಮಂಗಳವಾರ ಇಂಥ ದೊಡ್ಡ ಪ್ರಮಾಣದ ಗುಂಪೊಂದು ಉಭಯ ದೇಶಗಳ ಗಡಿಯಲ್ಲಿ ಬೀಡುಬಿಟ್ಟಿರುವುದು ಕಂಡುಬಂದಿದೆ.

ನವದೆಹಲಿ: ಬಾಂಗ್ಲಾದಲ್ಲಿ ಹಿಂದೂಗಳನ್ನೇ ಗುರಿಯಾಗಿಸಿ ದಾಳಿ ಹೆಚ್ಚಳ ಬೆನ್ನಲ್ಲೇ ಆತಂಕಗೊಂಡಿರುವ ಹಿಂದೂಗಳು ಭಾರತದ ಗಡಿಯತ್ತ ಆಗಮಿಸತೊಡಗಿದ್ದಾರೆ. ಮಂಗಳವಾರ ಇಂಥ ದೊಡ್ಡ ಪ್ರಮಾಣದ ಗುಂಪೊಂದು ಉಭಯ ದೇಶಗಳ ಗಡಿಯಲ್ಲಿ ಬೀಡುಬಿಟ್ಟಿರುವುದು ಕಂಡುಬಂದಿದೆ. ಆದರೆ ಇವರನ್ನು ಗಡಿಯೊಳಗೆ ಸೇರಿಸಲು ಇನ್ನೂ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ, ಗಡಿ ಭದ್ರತೆ ವಹಿಸುವ ಬಿಎಸ್‌ಎಫ್‌ ಸಿಬ್ಬಂದಿ ನಿರಾಶ್ರಿತರನ್ನು ಗಡಿಯಲ್ಲೇ ತಡೆಹಿಡಿದಿದ್ದಾರೆ.

1 ಕೋಟಿ ಹಿಂದೂಗಳು ಭಾರತಕ್ಕೆ: ಸುವೇಂದು ಆತಂಕಕೋಲ್ಕತಾ: ಬಾಂಗ್ಲಾದಲ್ಲಿ ಇಸ್ಲಾಮಿಕ್ ಸಂಘಟನೆಗಳ ಹಿಂಸಾಚಾರದಿಂದ ನಲುಗಿರುವ ಹಿಂದೂಗಳು ಭಾರತಕ್ಕೆ ಬರಬಹುದು. ‘ಒಂದು ಕೋಟಿಯಷ್ಟು ಹಿಂದೂಗಳು ಬಂಗಾಳವನ್ನು ಪ್ರವೇಶಿಸಬಹುದು. ಅವರಿಗೆ ಭಾರತದ ಪೌರತ್ವವನ್ನು ನೀಡಬೇಕು’ ಎಂದು ಬಿಜೆಪಿ ನಾಯಕ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.ವಿಧಾನಸಭೆಯಲ್ಲಿ ಈ ಕುರಿತು ಮಾತನಾಡಿದ ಸುವೇಂದು ಅಧಿಕಾರಿ,‘ ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ, ಒಂದು ವೇಳೆ ಅದನ್ನು ನಿಯಂತ್ರಿಸದಿದ್ದರೆ 1947 ಅಥವಾ 1971 ರ ವಿಮೋಚನಾ ಚಳುವಳಿಯಂತೆ ಒಂದು ಕೋಟಿಗೂ ಹೆಚ್ಚು ನಿರಾಶ್ರಿತರನ್ನು ಸ್ವೀಕರಿಸಲು ಸಿದ್ಧರಾಗಬೇಕು. ಸಿಎಂ ಮಮತಾ ಬ್ಯಾನರ್ಜಿ ಕೇಂದ್ರದ ಜೊತೆ ಚರ್ಚಿಸಿ, ಅವರೆಲ್ಲರಿಗೂ ಸಿಎಎ ಕಾನೂನಿನಡಿ ದೇಶದ ಪೌರತ್ವ ನೀಡಬೇಕು’ ಎಂದಿದ್ದಾರೆ.

ಬಾಂಗ್ಲಾ ಜನಸಂಖ್ಯೆಯ ಶೇ.8ರಷ್ಟಿರುವ ಹಿಂದೂಗಳುಢಾಕಾ: ಬಾಂಗ್ಲಾದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.8ರಷ್ಟು ಹಿಂದೂಗಳಿದ್ದಾರೆ. ಆದರೆ ಈ ಪ್ರಮಾಣ ವರ್ಷ ವರ್ಷ ಕಡಿಮೆಯಾಗುತ್ತಿದೆ. 1951ರ ಜನ ಗಣತಿ ಅನ್ವಯ ಬಾಂಗ್ಲಾ ಜನಸಂಖ್ಯೆಯ ಶೇ.22ರಷ್ಟು ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪ್ರಮಾಣ ಕೇವಲ 1.31 ಕೋಟಿಗೆ ಇಳಿದಿದೆ. 1964-2013ರ ಅವಧಿಯಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಪರಿಣಾಮ 1 ಕೋಟಿಗೂ ಹೆಚ್ಚು ಹಿಂದೂಗಳು ಬಾಂಗ್ಲಾದೇಶ ತೊರೆದಿದ್ದಾರೆ. ಸದ್ಯ ಬಾಂಗ್ಲಾದ ಜನಸಂಖ್ಯೆ 17 ಕೋಟಿಯಷ್ಟಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ