ಹನೂರು: ತಾಲೂಕು ಕಚೇರಿಯಲ್ಲಿರುವ ರೆಕಾರ್ಡ್ ರೂಂಗೆ ಕಿಡಿಗೇಡಿಗಳು ಬೀಗ ಒಡೆದು ಒಳ ನುಗ್ಗಿ ಕೆಲವು ದಾಖಲೆಗಳನ್ನು ಕಳ್ಳತನ ಮಾಡಿರುವ ಘಟನೆ ಹನೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ನಡೆದಿದೆ. ಹನೂರು ಪಟ್ಟಣದಲ್ಲಿರುವ ತಾಲೂಕು ಕಚೇರಿಗೆ ಸೋಮವಾರ ರಾತ್ರಿ ಬಂದ ಕಿಡಿಗೇಡಿಗಳು ರೆಕಾರ್ಡ್ ರೂಂ ಬೀಗ ಒಡೆದು ಅಕ್ರಮವಾಗಿ ಒಳ ಪ್ರವೇಶ ಮಾಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೆರಳಚ್ಚು ವಿಭಾಗ ಹಾಗೂ ಶ್ವಾನದಳವನ್ನು ಕರೆಸಿ ಸ್ಥಳ ಪರಿಶೀಲಿಸಿದರು. ಹನೂರು ಪಟ್ಟಣ ಹಾಗೂ ತಾಲೂಕಿನಲ್ಲಿ ಭೂ ಕಳ್ಳರು ಹೆಚ್ಚಾಗಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಮೀನು ಖರೀದಿ ಹಾಗೂ ಪರಭಾರೆ ಮಾಡಿರುವವರೇ ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಬಯಲಿಗೆ ಬರಬೇಕಾಗಿದೆ. ಭದ್ರತೆ ಹೆಚ್ಚಿಸಿ: ತಾಲೂಕು ಕಚೇರಿ ಬಳಿ ಇರುವ ಭೂ ದಾಖಲೆಗಳ ಕಚೇರಿಗೆ ಸೂಕ್ತ ಭದ್ರತೆ ವಹಿಸುವ ಮೂಲಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಜೊತೆಗೆ ತಾಲೂಕು ಕಚೇರಿ ಪಟ್ಟಣದ ಹೃದಯ ಭಾಗವಾದಲ್ಲಿರುವುದರಿಂದ ಈ ಕಚೇರಿಯ ಮುಂಭಾಗ ರಾತ್ರಿ ವೇಳೆ ಯಾರೂ ಇರುವುದಿಲ್ಲ. ನಡೆದಿರುವ ಘಟನೆಯ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ ----------- 10ಸಿಎಚ್‌ಎನ್ ಘಟನಾ ಸ್ಥಳವಾದ ತಾಲೂಕು ಕಚೇರಿಗೆ ಶ್ವಾನ ದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.