112 ಅಕ್ರಮ ವಲಸಿಗರ ಹೊತ್ತಿದ್ದ 3ನೇ ಸೇನಾ ವಿಮಾನ ಭಾರತಕ್ಕೆ ಆಗಮನ : 332 ಭಾರತೀಯರ ಗಡೀಪಾರು

KannadaprabhaNewsNetwork |  
Published : Feb 17, 2025, 12:30 AM ISTUpdated : Feb 17, 2025, 05:50 AM IST
ಗಡೀಪಾರು | Kannada Prabha

ಸಾರಾಂಶ

ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಹಾಕುವ ಭಾಗವಾಗಿ 112 ಭಾರತೀಯರನ್ನು ಹೊತ್ತ ಅಮೆರಿಕದ 3ನೇ ಸೇನಾ ವಿಮಾನ ಭಾನುವಾರ ರಾತ್ರಿ ಅಮೃತಸರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಇದರೊಂದಿಗೆ ಒಟ್ಟು 3 ಹಂತದಲ್ಲಿ 332 ಭಾರತೀಯ ವಲಸಿಗರನ್ನು ಅಮೆರಿಕ ಭಾರತಕ್ಕೆ ಗಡೀಪಾರು ಮಾಡಿದಂತಾಗಿದೆ.

ಚಂಡೀಗಢ: ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಹಾಕುವ ಭಾಗವಾಗಿ 112 ಭಾರತೀಯರನ್ನು ಹೊತ್ತ ಅಮೆರಿಕದ 3ನೇ ಸೇನಾ ವಿಮಾನ ಭಾನುವಾರ ರಾತ್ರಿ ಅಮೃತಸರದ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಇದರೊಂದಿಗೆ ಒಟ್ಟು 3 ಹಂತದಲ್ಲಿ 332 ಭಾರತೀಯ ವಲಸಿಗರನ್ನು ಅಮೆರಿಕ ಭಾರತಕ್ಕೆ ಗಡೀಪಾರು ಮಾಡಿದಂತಾಗಿದೆ.

ಭಾನುವಾರ ರಾತ್ರಿ 10 ಗಂಟೆಗೆ ಆಗಮಿಸಿದ ವಿಮಾನದಲ್ಲಿದ್ದವರ ಪೈಕಿ 44 ಜನರು ಹರ್ಯಾಣ, 33 ಜನರು ಗುಜರಾತ್‌, 31ಜನರು ಪಂಜಾಬ್‌, ಇಬ್ಬರು ಉತ್ತರಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲಪ್ರದೇಶದ ತಲಾ ಒಬ್ಬರು ಇದ್ದರು. ಹೀಗೆ ಬಂದವರು ಅಗತ್ಯ ಕಾನೂನು ವಿಧಿ ಪೂರೈಸಿದ ಬಳಿಕ ಅವರವರ ತವರು ರಾಜ್ಯಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.

ಫೆ.5ರಂದು 104 ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕದ ಮೊದಲ ವಿಮಾನ ಅಮೃತಸರಕ್ಕೆ ಬಂದಿತ್ತು. ನಂತರ ಫೆ.15ರಂದು 116 ಜನರಿದ್ದ 2ನೇ ವಿಮಾನವನ್ನೂ ಭಾರತದಲ್ಲಿ ಬಂದಿಳಿದಿತ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ