;Resize=(412,232))
ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಭಾನುವಾರ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಸಿನಿಮೀಯ ಶೈಲಿಯಲ್ಲಿ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾಳಿಯ ಬಳಿಕ ಆರೋಪಿಗಳು ಬಳಿಕ ಮುಂಬೈನ ಅಂಧೇರಿಯಲ್ಲಿ ಬೈಕ್ ಬಿಸಾಡಿ, ರೈಲಿನಲ್ಲಿ ರಾಜಸ್ಥಾನಕ್ಕೆ ತೆರಳಿ ಅಲ್ಲಿಂದ ನೇಪಾಳಕ್ಕೆ ಪರಾರಿಗೆ ಮುಂದಾಗಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ಮೂವರ ಪೈಕಿ ಒಬ್ಬ ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನ ಸಂಪರ್ಕದಲ್ಲಿದ್ದ. ಟೈಗರ್ ಶ್ರಾಫ್ ಮೇಲೆ ದಾಳಿಗೆ ಆರೋಪಿಗಳು ಕೇವಲ 50000 ರು. ಸುಪಾರಿ ಪಡೆದಿದ್ದರು ಎಂದು ತಿಳಿದುಬಂದಿದೆ.
ಆರೋಪಿಗಳ ಪೈಕಿ ಇಬ್ಬರು ಹರ್ಯಾಣದವರು, ಒಬ್ಬ ಬಿಹಾರ ಮೂಲದವ. ಮೂವರ ಪೈಕಿ ಬಿಹಾರದ ರಿತಿಕ್ ಮತ್ತು ಹರ್ಯಾಣದ ರೆಹಾನ್ ಎಂಬಾತನ ಹೆಸರು ಬಹಿರಂಗಪಡಿಸಲಾಗಿದೆ. ಮತ್ತೊಬ್ಬನ ಹೆಸರು ಬಹಿರಂಗವಾಗಿಲ್ಲ.
ಶನಿವಾರ ಘಟನಾ ಸ್ಥಳದಲ್ಲಿನ ಸಿಸಿಟೀವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಅದರಂತೆ ಆರೋಪಿಗಳು ಘಟನೆ ಬಳಿಕ ಬೈಕ್ ಎಸೆದು ಪುಣೆ-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳುತ್ತಿರುವ ವಿಷಯ ಮುಂಬೈ ಪೊಲೀಸರಿಗೆ ತಿಳಿದುಬಂದಿತ್ತು. ಅವರು ಈ ವಿಷಯವನ್ನು ರಾಜಸ್ಥಾನ ಪೊಲೀಸರಿಗೆ ತಿಳಿಸಿದ್ದರು. ಈ ಮಾಹಿತಿ ರವಾನೆಯಾದ ವೇಳೆ ರೈಲು ರಾಜಸ್ಥಾನದ ಕೋಟಾದ ಸಮೀಪದಲ್ಲೇ ಇತ್ತು. ಹೀಗಾಗಿ ಮಾಹಿತಿ ಸಿಕ್ಕ ಕೇವಲ 15 ನಿಮಿಷಗಳಲ್ಲೇ ಕೋಟಾ ಪೊಲೀಸರು ರೈಲಿನ ಮೇಲೆ ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳಿಂದ ಸದ್ಯ ಯಾವುದೇ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿಲ್ಲ. ಮೂವರ ಪೈಕಿ ಯಾರೂ ಅಪ್ರಾಪ್ತರಲ್ಲ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಬಳಿಕ ದಾಳಿಯ ಉದ್ದೇಶ ತಿಳಿದುಬರಲಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ರೆಹಾನ್ ಈ ಹಿಂದೆ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿತನಾಗಿ ಜಾಮೀನನ ಮೇಲೆ ಬಿಡುಗಡೆಯಾಗಿದ್ದ. ಜೊತೆಗೆ ಈತ ಗ್ಯಾಂಗ್‌ಸ್ಚರ್ ಬಿಷ್ಣೋಯ್ ಗ್ಯಾಂಗ್‌ನ ಅನಿಲ್ ಪಂಡಿತ್ ಜತೆಗೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
ಗುಂಡಿನ ದಾಳಿಗೆ ಒಳಗಾದ ನಟ ಟೈಗರ್ ಶ್ರಾಫ್ ಅವರನ್ನು ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಸೋಮವಾರ ಮುಂಬೈನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ದಾಳಿ ಬಳಿಕ ಟೈಗರ್ ಶ್ರಾಫ್ ಅವರ ಮೊದಲ ಫೋಟೋ ಇದಾಗಿದ್ದು, ಅದರಲ್ಲಿ ಅವರ ತೋಳು, ಎದೆಯ ಮೇಲೆ ಬ್ಯಾಂಡೇಜನ್ನು ಕಾಣಬಹುದು.
ನವದೆಹಲಿ: 1998ರಲ್ಲಿ ಕೃಷ್ಣಮೃಗಗಳನ್ನು ಹತ್ಯೆಗೈದ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಬಿಷ್ಣೋಯಿ ಸಮುದಾಯದ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಅವರ ಇಡೀ ಕುಟುಂಬವನ್ನೇ ನಾಶಪಡಿಸುತ್ತೇವೆ ಎಂದು ಪಾತಕಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಬೆದರಿಕೆಯೊಡ್ಡಿದೆ.