50ನೇ ಟಾಸ್ಕ್‌ ಆತ್ಮಹತ್ಯೆ: ಕೊರಿಯನ್‌ ಗೇಮ್‌ಗೆ 3 ಸೋದರಿಯರು ಬಲಿ!

KannadaprabhaNewsNetwork |  
Published : Feb 05, 2026, 02:15 AM ISTUpdated : Feb 05, 2026, 08:06 AM IST
Game

ಸಾರಾಂಶ

ಆತ್ಮಹತ್ಯೆಗೆ ಪ್ರಚೋದಿಸುವ ಕೊರಿಯನ್‌ ಆನ್‌ಲೈನ್‌ ಗೇಮ್‌ನ ಚಟಕ್ಕೆ ಬಿದ್ದಿದ್ದ ಮೂವರು ಸೋದರಿಯರು, ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಹಾರಿ ಆತ್ಮ8ತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಬುಧವಾರ ನಡೆದಿದೆ.

ಗಾಜಿಯಾಬಾದ್‌: ಆತ್ಮಹತ್ಯೆಗೆ ಪ್ರಚೋದಿಸುವ ಕೊರಿಯನ್‌ ಆನ್‌ಲೈನ್‌ ಗೇಮ್‌ನ ಚಟಕ್ಕೆ ಬಿದ್ದಿದ್ದ ಮೂವರು ಸೋದರಿಯರು, ಅಪಾರ್ಟ್‌ಮೆಂಟ್‌ನ ಕಿಟಕಿಯಿಂದ ಹಾರಿ ಆತ್ಮ8ತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಬುಧವಾರ ನಡೆದಿದೆ. ಕೊರಿಯನ್‌ ಗೇಮ್‌ನ ಕೊನೆಯ ಮತ್ತು 50ನೇ ಆಟ ಆತ್ಮ8ತ್ಯೆಯಾಗಿತ್ತು. ಈ ಕಾರಣಕ್ಕೇ ಮಕ್ಕಳು ಆತ್ಮ8ತ್ಮೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೆಲ ವರ್ಷಗಳ ಹಿಂದೆ ಭಾರತ ಸೇರಿದಂತೆ ವಿಶ್ವಾದ್ಯಂತ ನೂರಾರು ಮಕ್ಕಳ ಜೀವ ಬಲಿ ಪಡೆದಿದ್ದ ಬ್ಲ್ಯೂವೇಲ್‌ ಮಾದರಿಯ ಈ ಗೇಮ್‌ ಮತ್ತು ಅದಕ್ಕೆ ಮಕ್ಕಳ ಬಲಿ ಇಡೀ ದೇಶವನ್ನೇ ಮತ್ತೊಮ್ಮೆ ಬೆಚ್ಚಿಬೀಳಿಸಿದೆ. ಜೊತೆಗೆ, ಇಂಥ ಗೇಮಿಂಗ್‌ಗೆ ದಾಸರಾಗಿರುವ ಮಕ್ಕಳ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳುವ, ಮಕ್ಕಳ ಮೊಬೈಲ್‌ ಬಳಕೆ ಮೇಲೆ ನಿಗಾ ಇಡುವ ಬಗ್ಗೆ ವ್ಯಾಪಕ ಆಗ್ರಹ ಕೇಳಿಬಂದಿದೆ.

ಏನಾಯ್ತು?:

ಗಾಜಿಯಾಬಾದ್‌ನ ಭಾರತ್‌ ಸಿಟಿ ಪ್ರದೇಶದಲ್ಲಿ ಕುಟುಂಬವೊಂದರ ನಿಶಿಕಾ (16), ಪ್ರಾಚಿ (14), ಪಾಖಿ (12) ಎಂಬ ಮೂವರು ಹೆಣ್ಣುಮಕ್ಕಳು ಬುಧವಾರ ನಸುಕಿನ 2.45ರ ವೇಳೆಗೆ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಿಂದ ಹಾರಿ ಆತ್ಮ8ತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಆ ವೇಳೆಗಾಗಲೇ ಅವರೆಲ್ಲಾ ಮೃತಪಟ್ಟಿದ್ದರು. ಪ್ರಾಥಮಿಕ ತನಿಖೆ ವೇಳೆ, ಈ ಮೂವರೂ ಕೊರಿಯನ್‌ ಆಟಕ್ಕೆ ದಾಸರಾಗಿದ್ದರು.

ಮಕ್ಕಳ ಮೊಬೈಲ್‌ ಚಟದಿಂದ ಬೇಸತ್ತಿದ್ದ ಪೋಷಕರು, ಅತಿಯಾಗಿ ಮೊಬೈಲ್‌ ಬಳಸದಂತೆ ಇತ್ತೀಚೆಗೆ ನಿರ್ಬಂಧ ವಿಧಿಸಿದ್ದರು. ಇದರಿಂದ ಮೂವರು ಸಹೋದರಿಯರಿಗೆ ಕಿರಿಕಿರಿಯಾಗಿ ಅತಿಯಾಗಿ ನೊಂದುಕೊಂಡಿದ್ದರು. ಇದರಿಂದ ನೊಂದು ಮೂವರು 9ನೇ ಮಹಡಿಯಲ್ಲಿದ್ದ ಫ್ಲಾಟ್‌ನ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ ಎಂದು ಒಂದು ವರದಿ ಹೇಳಿದೆ. ಇನ್ನೊಂದು ವರದಿಯ ಪ್ರಕಾರ, ಕೊರಿಯನ್‌ ಗೇಮ್‌ನ ಕಡೆಯ ಮತ್ತು 50ನೇ ಆಟ ಆತ್ಮಹತ್ಯೆಯಾಗಿತ್ತು. ಹೀಗಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗಿದೆ.

ಆದರೆ ಸಾವಿಗೆ ಆಟವೇ ಕಾರಣವೇ ಎಂಬುದರ ಬಗ್ಗೆ ಇನ್ನಷ್ಟು ತನಿಖೆ ಬಳಿಕವೇ ಖಚಿತವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ಸಾವಿಗೂ ಮುನ್ನ ಒಬ್ಬಾಕೆ, ನಮ್ಮನ್ನು ಕ್ಷಮಿಸಿ ಅಪ್ಪ. ಈ ಪತ್ರದಲ್ಲಿ ನಾವು ಬರೆದಿರುವುದೆಲ್ಲಾ ನಿಜ. ನೀವು ನಮ್ಮನ್ನ ಕೊರಿಯಾದಿಂದ ದೂರ ಮಾಡಲಾಗದು ಎಂದು ಪತ್ರದಲ್ಲಿ ದಾಖಲಿಸಿರುವುದು ಮಕ್ಕಳ ಆನ್‌ಲೈನ್‌ ಆಟದ ದಾಸ್ಯದ ಕುರಿತ ಅನುಮಾನ ದೃಢಪಡಿಸಿದೆ.

ಕೋವಿಡ್ ವೇಳೆ ಆಟ:

ಕೋವಿಡ್‌ ವೇಳೆ ಮೂವರು ಮಕ್ಕಳು ಆನ್‌ಲೈನ್‌ ಆಟಕ್ಕೆ ದಾಸ್ಯರಾಗಿದ್ದರು. ಅದಾದ ಬಳಿಕ ಓದಿನಲ್ಲೂ ಹಿಂದೆ ಬಿದ್ದ ಕಾರಣ ಮೂವರು ಕಳೆದ ಎರಡು ವರ್ಷಗಳಿಂದ ಶಾಲೆಗೆ ಕೂಡಾ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಜೊತೆಗೆ ಮೂವರೂ ಅತ್ಯಂತ ಆತ್ಮೀಯರಾಗಿದ್ದು, ದೈನಂದಿನ ಚಟುವಟಿಕೆಗಳು ಸೇರಿ ಯಾವುದೇ ಕೆಲಸವಿದ್ದರೂ ಒಟ್ಟಿಗೇ ಮಾಡುತ್ತಿದ್ದರು. ಬಹುತೇಕ ಸಮಯ ಕೊಠಡಿಯಲ್ಲಿ ಮೊಬೈಲ್‌ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಮನೆಯ ಸದಸ್ಯರು ಕೊಠಡಿಗೆ ಪ್ರವೇಶ ಮಾಡಿದರೆ ಹೊರಗೆ ತೆರಳುತ್ತಿದ್ದರು. ಎನ್ನಲಾಗಿದೆ.

ಕೊರಿಯನ್‌ ಲವ್‌ ಗೇಮ್‌:

ಕೊರೋನಾ ಸಮಯದಲ್ಲಿ ಮೂವರೂ ಕೊರಿಯನ್‌ ಲವ್‌ ಗೇಮ್‌ ಆಡಲು ಪ್ರಾರಂಭಿಸಿದ್ದರು. ಜತೆಗೆ ಕೊರಿಯಾದ ಕಾರ್ಯಕ್ರಮಗಳನ್ನೂ ಬಿಟ್ಟೂಬಿಡದೆ ನೋಡುತ್ತಿದ್ದ ಇವರು, ತಮ್ಮನ್ನು ತಾವು ಕೊರಿಯಾದ ರಾಜಕುಮಾರಿಯರು ಎಂದು ಭಾವಿಸಿದ್ದರು. ತಮಗೆ ಮನೆಯಲ್ಲಿ ಇಟ್ಟ ಹೆಸರು ಬಿಟ್ಟು ಪ್ರತ್ಯೇಕವಾಗಿ ತಾವೇ ಕೊರಿಯನ್‌ ಹೆಸರು ಕೂಡಾ ಇಟ್ಟುಕೊಂಡಿದ್ದರಂತೆ. ಅಲ್ಲದೆ ತಮ್ಮ ತಂದೆಗೆ ಪದೇ ಪದೇ ತಮ್ಮನ್ನು ಕೊರಿಯಾಕ್ಕೆ ಕರೆದೊಯ್ಯವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ.

ತಂದೆ ಆಕ್ರಂದನ:

‘ನನ್ನ ಮಕ್ಕಳು ಆಗಾಗ ಬಂದು ಕೊರಿಯಾಗೆ ಕರೆದುಕೊಂಡು ಹೋಗುವಂತೆ ಕೇಳುತ್ತಿದ್ದರು. ಆದರೆ ಅವರು ಕಳೆದ 2-3 ವರ್ಷಗಳಿಂದ ಆಡುತ್ತಿದ್ದ ಆಟದ ಟಾಸ್ಕ್‌ ಪೂರೈಸುವ ಉದ್ದೇಶ ಅವರದ್ದಾಗಿತ್ತೆಂದು ಗೊತ್ತಿರಲಿಲ್ಲ. ಮಕ್ಕಳು ಅಂತಹ ಗೇಮ್‌ ಆಡುತ್ತಿದ್ದರು ಎಂದು ತಿಳಿದಿದ್ದರೆ ನಾನು ಆಡಲು ಬಿಡುತ್ತಲೇ ಇರಲಿಲ್ಲ’ ಎಂದು ಮೃತ ಮಕ್ಕಳ ತಂದೆ ಚೇತನ್‌ ದುಃಖಿಸಿದ್ದಾರೆ. ಘಟನೆಯ ಬಗ್ಗೆ ಮಾತನಾಡುತ್ತಾ, ‘ರಾತ್ರಿ ನಾವೆಲ್ಲಾ ಮಲಗಿದ್ದಾಗ ನೀರು ಕುಡಿಯುವ ನೆಪದಲ್ಲಿ ಮಕ್ಕಳು ಎದ್ದಿದ್ದರು. ಆಗ ಅವರ ಕೈಯ್ಯಲ್ಲಿ ಮೊಬೈಲ್‌ ಇದ್ದದ್ದನ್ನು ನಾನು ಗಮನಿಸಿರಲಿಲ್ಲ. ಮೆಲ್ಲನೆ ಹೊರಹೋದವರು ಚಿಲಕವಿಕ್ಕಿಕೊಂಡು ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ. ಆಗ ಅವರು ಕಿರುಚಿದ ಹಾಗೂ ಧೊಪ್ಪೆಂದು ಬಿದ್ದ ಸದ್ದು ಕೇಳಿಸಿ ಎಲ್ಲರೂ ಎದ್ದೆವು’ ಎಂದಿದ್ದಾರೆ.

ಅಪ್ಪಾ... ನಮ್ಮನ್ನು ಕ್ಷಮಿಸಿ, ನಮ್ಮನ್ನು ಕೊರಿಯಾದಿಂದ ದೂರ ಮಾಡಲಾಗದು ಎಂದು ಪತ್ರ ಬರೆದಿಟ್ಟು 9ನೇ ಮಹಡಿಯಿಂದ ಜಿಗಿದ ಬಾಲಕಿಯರು

ನೂರಾರು ಮಕ್ಕಳ ಬಲಿ ಪಡೆದಿದ್ದ ಬ್ಲ್ಯೂವೇಲ್‌ ಬಳಿಕ ಅಂಥದ್ದೇ ಮತ್ತೊಂದು ಮಾದರಿ ಆಟದ ಆತಂಕ

ಗೇಮಿಂಗ್‌ ದಾಸ ಮಕ್ಕಳ ಬಗ್ಗೆ ಭಾರಿ ಆತಂಕಟಾಪ್‌- ಡೆತ್‌ ಗೇಮ್‌

- ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲೊಂದು ಹೃದಯವಿದ್ರಾವಕ ಘಟನೆ

12, 14, 16 ವರ್ಷದ ಬಾಲಕಿಯರ ದಾರುಣ ಅಂತ್ಯ

ಕೊರಿಯಾ ಹುಚ್ಚಿನ ಆಟ - ಕೋವಿಡ್‌ ವೇಳೆ ಮೊಬೈಲ್‌ ಹಾಗೂ ಕೊರಿಯನ್‌ ಗೇಮ್‌ ಗೀಳು ಅಂಟಿಸಿಕೊಂಡಿದ್ದ ಬಾಲಕಿಯರು

- ಓದಿನಲ್ಲಿ ಹಿಂದೆ ಬಿದ್ದ ಕಾರಣ ಎರಡು ವರ್ಷಗಳಿಂದ ಶಾಲೆಗೂ ಹೋಗುತ್ತಿರಲಿಲ್ಲ ಎನ್ನುವ ಸ್ಥಳೀಯರು

- ಮೂವರೂ ಅತ್ಯಂತ ಆತ್ಮೀಯರಾಗಿದ್ದರು. ಬಹುತೇಕ ಸಮಯ ಕೊಠಡಿಯಲ್ಲೇ ಕಾಲಕಳೆಯುತ್ತಿದ್ದರು

- ಕೊರಿಯಾದ ಕಾರ್ಯಕ್ರಮ ಬಿಟ್ಟೂಬಿಡದೆ ನೋಡುತ್ತಿದ್ದರು. ಕೊರಿಯಾ ರಾಜಕುವರಿಯರು ಅಂತ ಭಾವಿಸಿದ್ದರು

- ತಮಗೆ ಮನೆಯಲ್ಲಿ ನಾಮಕರಣ ಮಾಡಿದ ಹ ಹೆಸರು ತೊರೆದು ಕೊರಿಯನ್‌ ಹೆಸರುಗಳನ್ನು ಇಟ್ಟುಕೊಂಡಿದ್ದರು

- ಕೊರಿಯಾಕ್ಕೆ ಕರೆದೊಯ್ಯುವಂತೆ ಪೋಷಕರಿಗೆ ಪದೇ ಪದೇ ಪೀಡಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ

ಗೇಮ್‌ ಆಡುತ್ತಿರುವ ಬಗ್ಗೆ ಗೊತ್ತಿರಲಿಲ್ಲ

ನನ್ನ ಮಕ್ಕಳು ಆಗಾಗ ಬಂದು ಕೊರಿಯಾಗೆ ಕರೆದುಕೊಂಡು ಹೋಗುವಂತೆ ಕೇಳುತ್ತಿದ್ದರು. ಆದರೆ ಅವರು ಕಳೆದ 2-3 ವರ್ಷಗಳಿಂದ ಆಡುತ್ತಿದ್ದ ಆಟದ ಟಾಸ್ಕ್‌ ಪೂರೈಸುವ ಉದ್ದೇಶ ಅವರದ್ದಾಗಿತ್ತೆಂದು ಗೊತ್ತಿರಲಿಲ್ಲ. ಮಕ್ಕಳು ಅಂತಹ ಗೇಮ್‌ ಆಡುತ್ತಿದ್ದರು ಎಂದು ತಿಳಿದಿದ್ದರೆ ನಾನು ಆಡಲು ಬಿಡುತ್ತಲೇ ಇರಲಿಲ್ಲ.

- ಚೇತನ್‌, ತಂದೆ

 ಪೋಷಕರೇ ಹುಷಾರ್‌- ಮಕ್ಕಳನ್ನು ಆದಷ್ಟೂ ಮೊಬೈಲ್‌ನಿಂದ ದೂರವಿಡಿ. ನೀಡಿದರೂ ಸಮಯ ನಿಗದಿ ಮಾಡಿ

- ಮೊಬೈಲ್ ನೀಡಿದರೆ ಚೈಲ್ಡ್‌ ಲಾಕ್‌ ಹಾಕಿ. ಅದರ ನಿಯಂತ್ರಣ ನಿಮ್ಮ ಬಳಿ ಇಟ್ಟುಕೊಳ್ಳಿ- ಮಕ್ಕಳು ಮೊಬೈಲ್‌ನಲ್ಲಿ ಏನು ವೀಕ್ಷಿಸುತ್ತಾರೆ ಎಂಬುದರ ಬಗ್ಗೆ ಸದಾಕಾಲ ನಿಗಾ ಇಟ್ಟಿರಿ

- ಅತಿಯಾದ ಬಳಕೆ ಕಂಡರೆ ಏಕಾಏಕಿ ನಿರ್ಬಂಧ ಬದಲು ಅದರ ಸಾಧಕ-ಬಾಧಕ ತಿಳಿಸಿ- ಆನ್‌ಲೈನ್‌ನಲ್ಲಿ ಎದುರಾಗುವ ಆಪತ್ತು ಎದುರಿಸುವ ಕುರಿತು ಮಕ್ಕಳಿಗೆ ತಿಳಿಸಿಕೊಡಿ- ಮಕ್ಕಳೊಂದಿಗೆ ಮುಕ್ತವಾಗಿದ್ದು, ಅವರ ಮಾತುಗಳಲ್ಲಿನ ಸೂಕ್ಷ್ಮತೆ ಗ್ರಹಿಸುವ ಕೆಲಸ ಮಾಡಿ

- ಸಂದೇಹ ಸೃಷ್ಟಿಯಾದಲ್ಲಿ ವಿಚಾರಿಸಿ, ಇಲ್ಲವೇ ಬೇರೆ ಮಾರ್ಗದಲ್ಲಿ ಅದರ ಬಗ್ಗೆ ತಿಳಿದುಕೊಳ್ಳಿ- ವರ್ತನೆಯಲ್ಲಿ ಅಸಹಜ ಬದಲಾವಣೆ ಕಂಡುಬಂದಲ್ಲಿ ಆಪ್ತ ಸಮಾಲೋಚನೆಗೆ ಒಳಪಡಿಸಿ

ನೂರಾರು ಮಕ್ಕಳ ಬಲಿ

ಪಡೆದಿದ್ದ ‘ಬ್ಲ್ಯೂವೇಲ್‌’

2017ರಲ್ಲಿ ಬ್ಲ್ಯೂವೇಲ್‌ ಎಂಬ ರಷ್ಯಾ ಮೂಲದ ಗೇಮ್‌ ಕೂಡ ಜಗತ್ತಿನಾದ್ಯಂತ ಭಾರೀ ವೈರಲ್‌ ಆಗಿತ್ತು. ಅದರಲ್ಲೂ ಕೂಡ ದಿನಕ್ಕೊಂದು ಸವಾಲು ನೀಡುವುದು ಮತ್ತು ಅಂತಿಮವಾಗಿ ಸಾವನ್ನಪ್ಪುವ ಟಾಸ್ಕ್‌ ನೀಡಲಾಗುತ್ತಿತ್ತು. ಇದಕ್ಕೆ ರಷ್ಯಾ ಮೊದಲಾದ ದೇಶಗಳಲ್ಲಿ 130ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಮುಂಬೈನಲ್ಲೂ ಬಾಲಕನೊಬ್ಬ ಸಾವನ್ನಪ್ಪಿದ್ದ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ದೇಶದಲ್ಲಿ ಭಾರೀ ಮಳೆ, ಬಿರುಗಾಳಿ ಸಾಧ್ಯತೆ: ಇಲಾಖೆ ಮುನ್ಸೂಚನೆ