ತ್ರಿಶ್ಶೂರ್: ವನವಾಸದ ವೇಳೆ ರಾಮ-ಲಕ್ಷ್ಮಣರಿಗೆ ಸೀತಾಮಾತೆ ಪರೋಟ ಮತ್ತು ಮಾಂಸದಡುಗೆ ಮಾಡಿ ಉಣಬಡಿಸುತ್ತಿದ್ದಳು ಎಂದು ಕೇರಳ ಸಿಪಿಐ ಶಾಸಕ ಬಾಲಚಂದ್ರನ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿ ವಿವಾದ ಸೃಷ್ಟಿಸಿದ್ದಾರೆ.
ಬಾಲಚಂದ್ರನ್ ಪೋಸ್ಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೇರಳ ಬಿಜೆಪಿ ಘಟಕ, ಕಮ್ಯುನಿಸ್ಟರು ಮಾತ್ರವೇ ಈ ರೀತಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ತುಳಿಯಲು ಸಾಧ್ಯವಿದೆ.
ಅವರು ಹಾಕಿರುವ ಪೋಸ್ಟ್ ಅಸಂಖ್ಯಾತ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದೆ. ವಿವಾದ ಭುಗಿಲೇಳುತ್ತಿದ್ದಂತೆ ಶಾಸಕ ಬಾಲಚಂದ್ರನ್ ಕ್ಷಮೆಯಾಚಿಸಿದ್ದು, ‘ನಾನು ಕೇಳಲ್ಪಟ್ಟ ರಾಮಾಯಣದ ಕತೆಯನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೇನೆ.
ಇದರಿಂದಾಗಿ ರಾಮಭಕ್ತರಿಗೆ ನೋವುಂಟಾಗಿದ್ದರ ಕುರಿತು ಅವರಲ್ಲಿ ಕ್ಷಮೆಯಾಚಿಸುತ್ತೇನೆ’ ಎಂದು ತಿಳಿಸಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ.