ತಮಿಳ್ನಾಡಲ್ಲಿ ದಾಖಲೆಯ ಶೇ.85ರಷ್ಟು ಮತದಾನ

KannadaprabhaNewsNetwork |  
Published : Apr 24, 2026, 02:00 AM IST
tamilnadu

ಸಾರಾಂಶ

ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ದಾಖಲೆಯ ಶೇ.85ರಷ್ಟು ಮತ ಚಲಾವಣೆಯಾಗಿದೆ. 2011ರಲ್ಲಿ ಎಐಎಡಿಎಂಕೆ ಭರ್ಜರಿ ಜಯ ಸಾಧಿಸಿದ್ದ ಚುನಾವಣೆಯಲ್ಲಿ ಶೇ.78.29ರಷ್ಟು ಮತ ಚಲಾವಣೆಯಾಗಿದ್ದೇ ಇದುವರೆಗಿನ ದಾಖಲೆಯಾಗಿತ್ತು.

ಚೆನ್ನೈ: ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ದಾಖಲೆಯ ಶೇ.85ರಷ್ಟು ಮತ ಚಲಾವಣೆಯಾಗಿದೆ. 2011ರಲ್ಲಿ ಎಐಎಡಿಎಂಕೆ ಭರ್ಜರಿ ಜಯ ಸಾಧಿಸಿದ್ದ ಚುನಾವಣೆಯಲ್ಲಿ ಶೇ.78.29ರಷ್ಟು ಮತ ಚಲಾವಣೆಯಾಗಿದ್ದೇ ಇದುವರೆಗಿನ ದಾಖಲೆಯಾಗಿತ್ತು. 

ಒಂದೇ ಹಂತದಲ್ಲಿ ಮತದಾನ

ಗುರುವಾರದ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳುವುದರೊಂದಿಗೆ ಆಡಳಿತಾರೂಢ ಡಿಎಂಕೆ, ಅಣ್ಣಾಡಿಎಂಕೆ-ಬಿಜೆಪಿ ಮತ್ತು ನಟ ವಿಜಯ್‌ ನೇತೃತ್ವದ ಟಿವಿಕೆ ನಡುವೆ ತ್ರಿಕೋನ ಸಮರಕ್ಕೆ ವೇದಿಕೆಯಾಗಿದ್ದ ಚುನಾವಣಾ ಕಣ ಕ್ಲೈಮ್ಯಾಕ್ಸ್‌ ಹಂತ ತಲುಪಿದಂತಾಗಿದೆ. 

234 ಕ್ಷೇತ್ರಗಳಿಗೆ ಒಟ್ಟು 4023 ಅಭ್ಯರ್ಥಿಗಳು

234 ಕ್ಷೇತ್ರಗಳಿಗೆ ಒಟ್ಟು 4023 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 75064 ಮತಗಟ್ಟೆಗಳ ಮೂಲಕ ರಾಜ್ಯದ ಜನತೆ ಅಭ್ಯರ್ಥಿಗಳ ಹಣೆ ಬರಹವನ್ನು ಇವಿಎಂ ಯಂತ್ರದ ಮೂಲಕ ನಿರ್ಧರಿಸಿದ್ದಾರೆ. ಗುರುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. 

ಮತದಾರರು ಇಳಿದರೂ ಮತ ಏರಿಕೆ:ಚುನಾವಣೆಗೂ ಮುನ್ನ ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲಾಗಿತ್ತು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ರಾಜ್ಯದಲ್ಲಲಿ ಮತದಾರರ ಸಂಖ್ಯೆ 6.41 ಕೋಟಿಯಿಂದ 5.73 ಕೋಟಿಗೆ ಇಳಿದಿತ್ತು. ಆದರೂ ದಾಖಲೆ ಪ್ರಮಾಣದಲ್ಲಿ ಮತದಾನ ದಾಖಲಾಗಿದ್ದು ಅಚ್ಚರಿ ಮೂಡಿಸಿದೆ.ಈ ವರ್ಷ ರಾಜ್ಯದಲ್ಲಿ 18 ವರ್ಷ ತುಂಬಿದ 14 ಲಕ್ಷ ಜನರು ಹೊಸದಾಗಿ ಹೆಸರು ನೊಂದಾಯಿಸಿಕೊಂಡಿದ್ದು ಅವರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿರುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗೂಂಡಾಗಿರಿ ನಡುವೆ ಬಂಗಾಳದಲ್ಲಿ ದಾಖಲೆ ಶೇ.90 ಮತ
ಹಾಲಿವುಡ್‌ ಸ್ಟೈಲಲ್ಲಿ ಭಾರತಕ್ಕೆ ಹೊರಟ ಹಡಗು ಇರಾನ್‌ನಿಂದ ವಶ