- ಬೆಳಗ್ಗೆ 4ಕ್ಕೇ ಅವರ ದಿನಚರಿ ಶುರು
ಚೆನ್ನೈ: ತಮಿಳುನಾಡಿನಲ್ಲಿ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಅಸ್ತಿತ್ವಕ್ಕೆ ಬಂದು 100 ದಿನಗಳನ್ನು ಪೂರೈಸಿದ್ದು, ಈ ಬೆನ್ನಲ್ಲೇ ‘ಸಿಎಂ ವಿಜಯ್ ನಿತ್ಯ 20 ಗಂಟೆ ಕೆಲಸ ಮಾಡುತ್ತಾರೆ. ಅವರ ದಿನಚರಿ ಬೆಳಿಗ್ಗೆ 4 ಗಂಟೆಯಿಂದಲೇ ಆರಂಭವಾಗುತ್ತದೆ’ ಎಂದು ಸಚಿವ ಆಧವ್ ಅರ್ಜುನ್ ಗುಟ್ಟು ಬಿಚ್ಚಿಟ್ಟಿದ್ದಾರೆ.
ಟೀವಿ ಸಂವಾದದಲ್ಲಿ ಮಾತನಾಡಿದ ಅವರು,, ‘ನಮ್ಮ ನಾಯಕ ನಿತ್ಯ 18-20 ಗಂಟೆಗೂ ಹೆಚ್ಚು ಕೆಲಸ ಮಾಡುತ್ತಾರೆ. ಅವರು ಬೆಳಿಗ್ಗೆ 4 ಗಂಟೆಗೆ ನಮಗೆ ಕರೆ ಮಾಡಿ ಪ್ರತಿಯೊಂದು ಇಲಾಖೆಯಲ್ಲಿ ಏನಾಗುತ್ತಿದೆ ಎಂದು ವಿಚಾರಿಸುತ್ತಾರೆ. ಅಂತಹವರು ನಮ್ಮ ಮುಖ್ಯಮಂತ್ರಿ. ಸಿಎಂ ಆಗಿದ್ದರೂ ಯಾವುದೇ ಅಹಂಕಾರವಿಲ್ಲ. ನಾವು ಜನರಿಗಾಗಿ ಕೆಲಸ ಮಾಡಲು ಬಯಸುತ್ತೇವೆ’ ಎಂದರು.ಇದೇ ವೇಳೆ ಸಿಎಂರನ್ನು ರಾಜಕೀಯ ಸನ್ಯಾಸಿ, ಅವರು ಸಂಭ್ರಮದತ್ತ ಗಮನ ಹರಿಸುವ ಬದಲು ಆಡಳಿತದತ್ತ ಚಿತ್ತ ಹರಿಸಿದ್ದಾರೆ ಎಂದು ಸಚಿವರು ಬಣ್ಣಿಸಿದರು.