ದೇಶಾದ್ಯಂತ ಬಿಜೆಪಿಯಿಂದ ಹಲವು ಸೇವಾ ಕಾರ್ಯಕ್ರಮ
ಸೆ.17ರಿಂದ ಅ.2 (ಗಾಂಧಿ/ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ) ವರೆಗೆ ದೇಶಾದ್ಯಂತ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಅಭಿಯಾನ, ಒಡಿಶಾದಲ್ಲಿ ಗಿಡನೆಡುವ ಅಭಿಯಾನವನ್ನು ಸಹ ಅಲ್ಲಿನ ಬಿಜೆಪಿ ಸರ್ಕಾರ ಹಮ್ಮಿಕೊಂಡಿದೆ. ಬಿಜೆಪಿ ಯುವಮೋರ್ಚಾ 75 ನಗರಗಳಲ್ಲಿ ‘ನಮೋ ಯುವ ರನ್’ ಹೆಸರಿನಲ್ಲಿ ಮ್ಯಾರಥಾನ್ ಆಯೋಜಿಸಿದ್ದು, ಪ್ರತಿ ಕಡೆ 10000ಕ್ಕೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಗುಜರಾತ್ ಸರ್ಕಾರ ಯೋಗ ಅಭಿಯಾನ, ದೆಹಲಿಯಲ್ಲಿ ಸಿಎಂ ರೇಖಾ ಗುಪ್ತಾ ಸರ್ಕಾರ ವಿವಿಧ ಆರೋಗ್ಯ ಯೋಜನೆಗಳನ್ನು ಜನರಿಗೆ ಮುಕ್ತ ಮಾಡಲಿದ್ದಾರೆ. ಬಂಗಾಳದಲ್ಲಿ ವಾರಪೂರ್ತಿ ಮೋದಿ ಅವರ ಜೀವನದ ಕುರಿತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಪುಣೆಯಲ್ಲಿ ಡ್ರೋನ್ ಲೇಸರ್ ಶೋ:ಮೋದಿ ಅವರ ಜನ್ಮದಿನದ ಹಿಂದಿನ ದಿನ ಮಂಗಳವಾರ ಪುಣೆಯಲ್ಲಿ ಸಂಸದ, ವಿಮಾನಯಾನ ಖಾತೆ ರಾಜ್ಯ ಸಚಿವ ಮುರಳಿಧರ ಮೊಹೋಲ್ ಅವರು ನೇತೃತ್ವದಲ್ಲಿ ಡ್ರೋನ್ ಲೇಸರ್ ಶೋ ಆಯೋಜಿಸಲಾಗಿತ್ತು. ಇಲ್ಲಿ ಮೋದಿ ಅವರ ಕುರಿತು ಪ್ರದರ್ಶನ ನಡೆಯಿತು.
ಕುನೋದಿಂದ 2 ಚೀತಾ ವರ್ಗ:ಮಧ್ಯ ಪ್ರದೇಶದ ಕುನೋದಿಂದ 2 ಚೀತಾಗಳನ್ನು ಮಂಡ್ಸೋರ್‌ನಲ್ಲಿನ ಗಾಂಧಿ ಸಾಗರ್ ಅಭಯಾರಣ್ಯಕ್ಕೆ ವರ್ಗಾಯಿಸಲಾಗುತ್ತದೆ. ಈಗಾಗಲೇ ಇಲ್ಲಿಗೆ 2 ಗಂಡು ಚೀತಾಗಳನ್ನು ಬಿಟ್ಟಿದ್ದು, ಈಗ ಅಲ್ಲಿಗೇ 2 ಹೆಣ್ಣು ಚೀತಾಗಳನ್ನು ಬಿಡಲಾಗುತ್ತದೆ.
ಪಿತೃಪಕ್ಷ ಮೇಳದಲ್ಲಿ ಮೋದಿ ಭಾಗಿ:ಬಿಹಾರದ ಗಯಾಜಿಯಲ್ಲಿ ನಡೆಯಲಿರುವ ಪಿತೃಪಕ್ಷ ಮೇಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗುವ ಸಾಧ್ಯತೆ ಎನ್ನಲಾಗಿದೆ.