ರಾಮಮಂದಿರ ಉದ್ಘಾಟನೆ ವೇಳೆ ದೇಶಾದ್ಯಂತ ಭರ್ಜರಿ 1.25 ಲಕ್ಷ ಕೋಟಿ ವಹಿವಾಟು

KannadaprabhaNewsNetwork |  
Published : Jan 24, 2024, 02:04 AM ISTUpdated : Jan 24, 2024, 02:21 PM IST
Rammandir

ಸಾರಾಂಶ

ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ದೇಶಾದ್ಯಂತ ಸುಮಾರು 1.25 ಲಕ್ಷ ಕೋಟಿ ರು. ವಹಿವಾಟು ನಡೆದಿದೆ ಎಂದು ವ್ಯಾಪಾರಸ್ಥರ ಒಕ್ಕೂಟ (ಸಿಎಐಟಿ) ಮಾಹಿತಿ ನೀಡಿದೆ.

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೇಶಾದ್ಯಂತ 1.25 ಲಕ್ಷ ಕೋಟಿ ರು. ವಹಿವಾಟು ನಡೆದಿದೆ ಎಂದು ಅಖಿಲ ಭಾರತ ವ್ಯಾಪಾರಸ್ಥರ ಒಕ್ಕೂಟ ತಿಳಿಸಿದೆ. 

ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಸಮಿತಿಯ ಅಧ್ಯಕ್ಷ ಖಂಡೇಲ್‌ವಾಲ್‌, ‘ರಾಮಮಂದಿರ ಉದ್ಘಾಟನೆ ನಿಮಿತ್ತ ದೇಶಾದ್ಯಂತ ಉತ್ಸವವನ್ನು ಆಚರಿಸಲಾಯಿತು. 

ಈ ಪ್ರಯುಕ್ತ ದೇಶಾದ್ಯಂತ ಸಣ್ಣ ವ್ಯಾಪಾರಸ್ಥರಿಗೆ ಹೆಚ್ಚಿನ ಮಟ್ಟದ ವ್ಯಾಪಾರವಾಗಿದೆ. ಈ ಪೈಕಿ ಉತ್ತರ ಪ್ರದೇಶವೊಂದರಲ್ಲೇ 40 ಸಾವಿರ ಕೋಟಿ ರು. ವಹಿವಾಟು ನಡೆದಿದೆ. ದೆಹಲಿಯಲ್ಲಿ 25 ಸಾವಿರ ಕೋಟಿ ರು. ವಹಿವಾಟು ನಡೆದಿದೆ. 

ರಾಮನ ಮೇಲಿನ ಭಕ್ತಿಯಿಂದ ದೇಶದಲ್ಲಿ ಮುಂಚೆ ಚಾಲ್ತಿಯಲ್ಲಿದ್ದ ಸನಾತನ ಆರ್ಥಿಕತೆ ಮರುಕಳಿಸಿದೆ’ ಎಂದು ತಿಳಿಸಿದರು. ಈ ಸಮಯದಲ್ಲಿ ದೇಶಾದ್ಯಂತ ಲಕ್ಷ ಲಕ್ಷ ಸಂಖ್ಯೆಯಲ್ಲಿ ರಾಮೋತ್ಸವಕ್ಕೆ ಸಂಬಂಧಿಸಿದ ಉಡುಗೊರೆ, ಆಹಾರ ಪದಾರ್ಥ, ವಸ್ತ್ರ, ಪೂಜಾ ಸಾಮಗ್ರಿ, ಆಭರಣ, ಎಲ್‌ಈಡಿ ಸ್ಕ್ರೀನ್‌ಗಳು ಮಾರಾಟವಾಗಿವೆ. 

ಜೊತೆಗೆ ರಾಮಮಂದಿರದ ಪ್ರತಿಕೃತಿಯ ಮಾರಾಟವೂ ಹೆಚ್ಚಿದ್ದು, ಮುಂದೆ ವಿವಾಹ ಸಮಾರಂಭದಲ್ಲಿ ಅದನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯ ಬೆಳೆಯುವ ಲಕ್ಷಣಗಳು ಗೋಚರಿಸುತ್ತಿವೆ ಎಂದೂ ಮಾಹಿತಿ ನೀಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶಬರಿಮಲೆ ಚಿನ್ನಕನ್ನ: ಕಾಂತಾರ ನಟಗೆ ಇ.ಡಿ. ಸಮನ್ಸ್‌
ಐಎಎಸ್‌, ಐಎಫ್ಎಸ್‌ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್‌ ಇಲ್ಲ- ಯುಪಿಎಸ್ಸಿ ನಿಯಮ ಬದಲು