ಟೆಲಿಕಾಂ ನಿಯಂತ್ರಕ ಟ್ರಾಯ್, ಮಂಗಳವಾರ ಕರೆ ದರಗಳು ಹಾಗೂ ಕರೆ-ಡೇಟಾ ನಿಯಮಗಳನನ್ನು ಬದಲಿಸಿದೆ. ಈ ಪ್ರಕಾರ ಡೇಟಾ ಬೇಡ ಕೇವಲ ಕರೆ/ಎಸ್ಸೆಮ್ಮಸ್ ಪ್ಯಾಕ್ ಸಾಕು ಎನ್ನುವವರಿಗೆ ಪ್ರತ್ಯೇಕ ಪ್ಲಾನ್ ಬಿಡುಗಡೆ ಮಾಡಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ.
ನವದೆಹಲಿ: ಟೆಲಿಕಾಂ ನಿಯಂತ್ರಕ ಟ್ರಾಯ್, ಮಂಗಳವಾರ ಕರೆ ದರಗಳು ಹಾಗೂ ಕರೆ-ಡೇಟಾ ನಿಯಮಗಳನನ್ನು ಬದಲಿಸಿದೆ. ಈ ಪ್ರಕಾರ ಡೇಟಾ ಬೇಡ ಕೇವಲ ಕರೆ/ಎಸ್ಸೆಮ್ಮಸ್ ಪ್ಯಾಕ್ ಸಾಕು ಎನ್ನುವವರಿಗೆ ಪ್ರತ್ಯೇಕ ಪ್ಲಾನ್ ಬಿಡುಗಡೆ ಮಾಡಲು ಟೆಲಿಕಾಂ ಕಂಪನಿಗಳಿಗೆ ಸೂಚಿಸಿದೆ. ಅಲ್ಲದೆ, ಅಂತೆಯೇ, ವಿಶೇಷ ರೀಚಾರ್ಜ್ ಕೂಪನ್‌ಗಳ ಮೇಲಿನ 90 ದಿನಗಳ ಮಿತಿಯನ್ನು ತೆಗೆದು ಹಾಕಿರುವ ಟ್ರಾಯ್, ಅದನ್ನು 365 ದಿನಗಳವರೆಗೆ ವಿಸ್ತರಿಸಬೇಕು ಎಂದು ಸೂಚಿಸಿದೆ.
ವೃದ್ಧರು ಹಾಗೂ ಮನೆಗಳಲ್ಲಿ ಬ್ರಾಡ್‌ಬ್ಯಾಂಡ್ ಹೊಂದಿರುವವರಿಗೆ ಇಂಟರ್‌ನೆಟ್‌ಗೆ ರೀಚಾರ್ಜ್ ಮಾಡಿಸುವ ಅವಶ್ಯಕತೆ ಇರದಿರುವುದನ್ನು ಗಮನಿಸಿರುವ ಟ್ರಾಯ್, ಕೇವಲ ಕರೆ ಹಾಗೂ ಸಂದೇಶ ರವಾನೆಗೆಂದು ಪ್ರತ್ಯೇಕ ದರಪಟ್ಟಿ ತಯಾರಿಸಲು ಸೂಚಿಸಿದೆ. ಈ ಮೂಲಕ ಗ್ರಾಹಕರು ತಾವು ಬಳಸುವ ಸೇವೆಗಳಿಗಷ್ಟೇ ಹಣ ಪಾವತಿಸುವಂತಾಗುತ್ತದೆ.
ಅಂತೆಯೇ, ವೌಚರ್‌ಗಳಿಗೆ ಯಾವುದೇ ಬೆಲೆಯನ್ನು ನಿಗದಿಪಡಿಸಲು ಅನುಮತಿಸಿರುವ ಟ್ರಾಯ್, 10 ರು. ರೀಚಾರ್ಜ್ ಕೂಪನ್ ಕೂಡ ಒದಗಿಸಬೇಕು ಎಂದು ಸೂಚಿಸಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.