ಡೀಸೆಲ್‌ಗಾಗಿ 100 ಕಿ.ಮೀ.ಹಿಂದಕ್ಕೆ ಚಲಿಸಿದ ರೈಲು!

KannadaprabhaNewsNetwork |  
Published : Oct 28, 2023, 01:15 AM IST

ಸಾರಾಂಶ

2 ರೈಲ್ವೇ ವಲಯಗಳ ಅಧಿಕಾರಿಗಳ ನಡುವಿನ ಬಿಕ್ಕಟ್ಟಿನಿಂದಾಗಿ ಡೀಸೆಲ್‌ ತುಂಬಿಸಲು ರೈಲೊಂದರ ಎಂಜಿನನ್ನು ಸುಮಾರು 100 ಕಿ.ಮೀ. ದೂರ ವಾಪಸ್‌ ಕರೆಸಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ.

2 ರೈಲ್ವೇ ವಲಯಗಳ ಅಧಿಕಾರಿಗಳ ನಡುವಿನ ಬಿಕ್ಕಟ್ಟಿನಿಂದಾಗಿ ಡೀಸೆಲ್‌ ತುಂಬಿಸಲು ರೈಲೊಂದರ ಎಂಜಿನನ್ನು ಸುಮಾರು 100 ಕಿ.ಮೀ. ದೂರ ವಾಪಸ್‌ ಕರೆಸಿಕೊಂಡ ಘಟನೆ ಆಗ್ರಾದಲ್ಲಿ ನಡೆದಿದೆ. ಮಥುರಾದಿಂದ ಜೈಪುರಕ್ಕೆ ಹೊರಟಿದ್ದ ರೈಲಿಗೆ ಅಲ್ವಾರ್‌ ಬಳಿ ಎಲೆಕ್ಟ್ರಿಕ್‌ ಎಂಜಿನ್‌ ತೆಗೆದು ಡೀಸೆಲ್‌ ಎಂಜಿನ್‌ ಜೋಡಿಸಲಾಯಿತು. ಆದರೆ ಈ ಎಂಜಿನ್‌ಗೆ ಡೀಸೆಲ್‌ ತುಂಬಿಸಲು ಜೈಪುರ ವಲಯದ ಅಲ್ವಾರ್‌ ಅಧಿಕಾರಿ ಒಪ್ಪಿಗೆ ನೀಡದ ಕಾರಣ, ಊತಾವರ್‌ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ, ಎಂಜಿನನ್ನು 100 ಕಿ.ಮೀ. ದೂರದ ಮಥುರಾಗೆ ತಂದು ಡೀಸೆಲ್‌ ತುಂಬಿಸಿ ಪ್ರಯಾಣ ಮುಂದುವರೆಸಲಾಯಿತು. ಇದೆಲ್ಲಾ ನಡೆಯುವವರೆಗೆ ಸುಮಾರು 10 ಗಂಟೆಗಳ ಕಾಲ ಗೂಡ್ಸ್‌ ಬೋಗಿಗಳು ಊತಾವರ್‌ ನಿಲ್ದಾಣದಲ್ಲೇ ನಿಂತಿದ್ದವು.

PREV

Recommended Stories

ಆಳಂದ ಮತ ಅಕ್ರಮಕ್ಕೆ ರಾಹುಲ್‌ 3 ಸಾಕ್ಷ್ಷ್ಯ
ರಾಹುಲ್‌ ಆರೋಪ ನಿರಾಧಾರ: ಆಯೋಗ ಸ್ಪಷ್ಟನೆ