ಕೈ ಮುರಿದಿತ್ತು, ರಕ್ತ ಸೋರುತ್ತಿತ್ತು- ಪ್ಯಾಂಟ್‌ ತೆರೆದಿತ್ತು- ದೇಹದ ಮೇಲೆ ಒಂದು ತುಂಡಷ್ಟೇ ಬಟ್ಟೆಯಿತ್ತು

KannadaprabhaNewsNetwork | Updated : Aug 19 2024, 04:44 AM IST

ಸಾರಾಂಶ

ಕೋಲ್ಕತಾ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಬಳಿಕ ಹತ್ಯೆಗೀಡಾದ ವೈದ್ಯೆಯ ತಾಯಿ, ಘಟನೆ ಬಳಿಕ ಮೊದಲ ಬಾರಿ ತಮ್ಮ ಮಗಳನ್ನು ನೋಡಿದಾಗ ಆಕೆಯ ಪರಿಸ್ಥಿತಿ ಹೇಗಿತ್ತು ಎಂಬ ಭೀಕರ ಚಿತ್ರಣವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಇದು ಘಟನೆಯ ಭೀಕರತೆಯ ಬಗ್ಗೆ ಬೆಳಕು ಚೆಲ್ಲಿದೆ.

ಕೋಲ್ಕತಾ: ಕೋಲ್ಕತಾ ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಬಳಿಕ ಹತ್ಯೆಗೀಡಾದ ವೈದ್ಯೆಯ ತಾಯಿ, ಘಟನೆ ಬಳಿಕ ಮೊದಲ ಬಾರಿ ತಮ್ಮ ಮಗಳನ್ನು ನೋಡಿದಾಗ ಆಕೆಯ ಪರಿಸ್ಥಿತಿ ಹೇಗಿತ್ತು ಎಂಬ ಭೀಕರ ಚಿತ್ರಣವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಇದು ಘಟನೆಯ ಭೀಕರತೆಯ ಬಗ್ಗೆ ಬೆಳಕು ಚೆಲ್ಲಿದೆ.

ಆ.9ರಂದು ನನಗೆ ದೂರವಾಣಿ ಕರೆ ಮಾಡಿದ್ದರು. ಅದರಲ್ಲಿ ‘ಕಾಲೇಜಿನಲ್ಲಿ ನಿಮ್ಮ ಮಗಳು ಅನಾರೋಗ್ಯದಿಂದ ಬಳಲುತ್ತಿದ್ದಾಳೆ. ತಕ್ಷಣವೇ ಬನ್ನಿ ಎಂದು ತಿಳಿಸಿದ್ದರು. ಏನಾಯಿತು ಕೇಳುವಷ್ಟರಲ್ಲಿ ಕರೆ ಕಟ್‌ ಮಾಡಿದ್ದರು. ಇಂಥ ಸ್ಥಿತಿಯಲ್ಲೇ ಆಸ್ಪತ್ರೆಗೆ ತೆರಳಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದರು. ಮುಂಜಾನೆ 3 ಗಂಟೆ ತನಕವೂ ಒಳಗಡೆ ಬಿಟ್ಟಿರಲಿಲ್ಲ. ಆ ಬಳಿಕ ಮೃತ ದೇಹ ಹೋಗಿ ನೋಡಿದಾಗ, ಪ್ಯಾಂಟ್‌ ತೆರೆದಿತ್ತು. ಆಕೆಯ ದೇಹದ ಮೇಲೆ ಒಂದು ತುಂಡಷ್ಟೇ ಬಟ್ಟೆಯಿತ್ತು. ಕೈ ಮುರಿದಿತ್ತು. ಕಣ್ಣು ಮತ್ತು ಮೂಗಿನಿಂದ ರಕ್ತ ಸೋರುತ್ತಿತ್ತು ’ ಎಂದು ಕಣ್ಣೆದುರೇ ಮಗಳಿದ್ದ ಸ್ಥಿತಿ ನೋಡಿದ ತಾಯಿ ಆ ಸನ್ನಿವೇಶವನ್ನು ವಿವರಿಸಿದ್ದಾರೆ.

ಟಿಎಂಸಿ, ಬಿಜೆಪಿ ಸಂಸದ, ಇಬ್ಬರು ವೈದ್ಯರಿಗೆ ಪೊಲೀಸರಿಂದ ಸಮನ್ಸ್‌

ಕೋಲ್ಕತಾ: ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ತಪ್ಪು ಮಾಹಿತಿ ಹಂಚಿಕೊಂಡ ಆರೋಪದಡಿ ಟಿಎಂಸಿ ಸಂಸದ ಸುಖೇಂದು ಶೇಖರ್‌ ರಾಯ್‌, ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿ ಮತ್ತು ಇಬ್ಬರು ವೈದ್ಯರಿಗೆ ಕೋಲ್ಕತಾ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ಆ.9 ರಂದು ವೈದ್ಯೆಯ ಶವ ಪತ್ತೆಯಾಗಿದ್ದು, ಅದಾದ ಮೂರು ದಿನಗಳ ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು ಶ್ವಾನ ಕರೆದೊಯ್ದು ತಪಾಸಣೆ ನಡೆಸಿದ್ದಾರೆ. ಜೊತೆಗೆ ವೈದ್ಯೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸಿದ್ಧಾಂತ ಹರಿಬಿಟ್ಟಿದ್ದೇಕೆ. ಅವರನ್ನೂ ಸಿಬಿಯ ವಿಚಾರಣೆಗೆ ಒಳಪಡಿಸಬೇಕು ಎಂದು ಸುಖೇಂದು ಜಾಲತಾಣದಲ್ಲಿ ಬರೆದುಕೊಂಡಿದ್ದರು.ಇನ್ನೊಂದೆಡೆ ಲಾಕೆಟ್‌ ಚಟರ್ಜಿ, ಹತ್ಯೆಗೊಳಗಾದ ವೈದ್ಯೆಯ ಫೋಟೋ, ಹೆಸರು ಬಹಿರಂಗಪಡಿಸಿ ನಿಯಮ ಉಲ್ಲಂಘಿಸಿದ್ದರು. ಮತ್ತೊಂದೆಡೆ ಇಬ್ಬರು ವೈದ್ಯರು, ಹತ್ಯೆಗೊಳಗಾದ ವೈದ್ಯೆಯ ಗುಪ್ತಾಂಗದಲ್ಲಿ 150 ಎಂಎಂನಷ್ಟು ವೀರ್ಯ ಪತ್ತೆಯಾಗಿದೆ. ಇದು ಗ್ಯಾಂಗ್‌ರೇಪ್‌ಗೆ ಸಾಕ್ಷಿ ಎಂಬ ಮಾಹಿತಿ ಮರಣೋತ್ತರ ಪರೀಕ್ಷಾ ವರದಿಯಲ್ಲಿದೆ ಎಂದಿದ್ದರು. ಈ ಎಲ್ಲಾ ಮಾಹಿತಿ ಸುಳ್ಳು ಎಂಬ ಕಾರಣಕ್ಕೆ ಪೊಲೀಸರು ಸಮನ್ಸ್‌ ಜಾರಿ ಮಾಡಿದ್ದಾರೆ.

ಮುಂಬೈ: ವೈದ್ಯೆ ಮೇಲೆ ರೋಗಿ ಕುಟುಂಬಸ್ಥರಿಂದ ಹಲ್ಲೆ

ಮುಂಬೈ: ಬಂಗಾಳದ ವೈದ್ಯೆ ರೇಪ್, ಕೊಲೆ ಪ್ರಕರಣದಿಂದ ವೈದ್ಯರ ಸುರಕ್ಷತೆ ಬಗ್ಗೆ ಪ್ರಶ್ನೆ ಎದ್ದಿರುವ ಹೊತ್ತಲ್ಲಿಯೇ ಮುಂಬೈನಲ್ಲಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ರೋಗಿ ಹಾಗೂ ಕುಟುಂಬಸ್ಥರು ವೈದ್ಯೆ ಮೇಲೆ ಹಲ್ಲೆ ನಡೆಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಘಟನೆ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಭಾನುವಾರ ಬೆಳಗ್ಗೆ ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ಕರೆ ತರಲಾಗಿತ್ತು. ಈ ವೇಳೆ ಮಹಿಳಾ ವೈದ್ಯೆ ರಕ್ತ ಒರೆಸುತ್ತಿರುವ ವೇಳೆ ರೋಗಿ ನೋವಿನಿಂದ ಕೂಗಿದ್ದಾನೆ. ಈ ವೇಳೆ ಆತನ ಜೊತೆಗೆ ಬಂದಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾರೆ.ಈ ವೇಳೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆ ವೇಳೆ ರೋಗಿಯ ಮೂವರೂ ಜೊತೆಗಾರರು ಕುಡಿದ ಮತ್ತಿನಲ್ಲಿ ಇದ್ದಿದ್ದು ಖಚಿತಪಟ್ಟಿದೆ.

Share this article