ಬಿಜೆಪಿ ಸರ್ಕಾರ ಸೇರಲು ತ್ರಿಪುರಾ ಪ್ರಮುಖ ವಿಪಕ್ಷ ನಿರ್ಧಾರ

KannadaprabhaNewsNetwork |  
Published : Mar 07, 2024, 01:45 AM IST
ಬಿಪ್ಲಬ್‌ ದೇವ್‌ | Kannada Prabha

ಸಾರಾಂಶ

ಬಿಜೆಪಿ ಸರ್ಕಾರ ಸೇರುವುದಾಗಿ ತ್ರಿಪುರಾದ ಪ್ರಮುಖ ಪ್ರತಿಪಕ್ಷವಾದ ಪ್ರದ್ಯೋತ್‌ ದೇಬ್‌ ಬರ್ಮಾ ನೇತೃತ್ವದ ತಿಪ್ರಾ ಮೋಥಾ ಪಕ್ಷ ನಿರ್ಧರಿಸಿದೆ.

ಅಗರ್ತಲಾ: ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬುಧವಾರ ಮಹತ್ವದ ವಿದ್ಯಮಾನ ನಡೆದಿದ್ದು, ಪ್ರಮುಖ ವಿಪಕ್ಷವಾದ ತ್ರಿಪ್ರಾ ಮೋಥಾ, ಬಿಜೆಪಿ ಸರ್ಕಾರ ಸೇರಲು ನಿರ್ಧರಿಸಿದೆ.

ರಾಜವಂಶಜ ಪ್ರದ್ಯೋತ್ ದೇಬ್ ಬರ್ಮಾ ನೇತೃತ್ವದ ಪಕ್ಷವಾದ ತಿಪ್ರಾ ಮೋಥಾ ಲೋಕಸಭೆ ಚುನಾವಣೆಗೂ ಮುನ್ನ ತೆಗೆದುಕೊಂಡಿರುವ ಈ ನಿರ್ಣಯ, ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ.

60 ಸದಸ್ಯ ಬಲದ ವಿಧಾನಸಭೆಯಲ್ಲಿ ತಿಪ್ರಾ ಮೋಥಾ 13 ಶಾಸಕರನ್ನು ಹೊಂದಿದ್ದು, ರಾಜ್ಯ ಮಂತ್ರಿಮಂಡಲದಲ್ಲಿ 2 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ರಾಜೀಬ್ ಭಟ್ಟಾಚಾರ್ಜಿ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ