ಅಮೆರಿಕದಲ್ಲಿ ಕಂಡು ಕೇಳರಿಯದ ಜನಾಂಗೀಯ ಹಿಂಸೆ

KannadaprabhaNewsNetwork |  
Published : Jun 11, 2025, 12:17 PM ISTUpdated : Jun 11, 2025, 01:11 PM IST
ಅಮೆರಿಕ  | Kannada Prabha

ಸಾರಾಂಶ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ ವಿರೋಧಿಸಿ ಲಾಸ್‌ ಏಂಜಲೀಸ್‌ ನಲ್ಲಿ 160 ವರ್ಷದಲ್ಲೇ ಕಂಡು ಕೇಳರಿಯದ ಜನಾಂಗೀಯ ದಂಗೆ ಅಮೆರಿಕದಲ್ಲಿ ಆರಂಭವಾಗಿದೆ 

 ಲಾಸ್‌ ಏಂಜಲೀಸ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ವಲಸೆ ನೀತಿ ವಿರೋಧಿಸಿ ಲಾಸ್‌ ಏಂಜಲೀಸ್‌ ನಲ್ಲಿ 160 ವರ್ಷದಲ್ಲೇ ಕಂಡು ಕೇಳರಿಯದ ಜನಾಂಗೀಯ ದಂಗೆ ಅಮೆರಿಕದಲ್ಲಿ ಆರಂಭವಾಗಿದೆ. ಇದು ಹಿಂಸಾರೂಪ ಪಡೆದಿದ್ದು, ಅದರ ನಿಗ್ರಹಕ್ಕಾಗಿ ಟ್ರಂಪ್‌ ನೌಕಾಪಡೆಯ 700 ಯೋಧರು ಮತ್ತು ರಾಷ್ಟ್ರೀಯ ಗಾರ್ಡ್‌ನ 2000 ಯೋಧರನ್ನು ಲಾಸ್‌ ಏಂಜಲೀಸ್‌ಗೆ ರವಾನಿಸಿದ್ದಾರೆ

ಇದೇ ವೇಳೆ, ಸೇನೆಯ ನಿಯೋಜನೆಯನ್ನು ಟ್ರಂಪ್‌ ವಿರೋಧಿ ಆಗಿರುವ ಕ್ಯಾಲಿಫೋರ್ನಿಯಾ ಗವರ್ನರ್‌ ವಿರೋಧಿಸಿದ್ದಾರೆ. ಹೀಗಾಗಿ ಗವರ್ನರ್‌ ಅವರನ್ನೇ ಬಂಧಿಸುವ ಬೆದರಿಕೆಯನ್ನು ಟ್ರಂಪ್‌ ಹಾಕಿದ್ದಾರೆ.

ದಂಗೆ ಏಕೆ?:

ಕಳೆದ ಶುಕ್ರವಾರ 40 ವಲಸಿಗರನ್ನು ಅಮೆರಿಕದ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದನ್ನು ವಿರೋಧಿಸಿ ಲಾಸ್‌ ಏಂಜಲೀಸ್‌ನಲ್ಲಿ 3 ದಿನಗಳಿಂದ ವಲಸಿಗರು ಪ್ರತಿಭಟಿಸುತ್ತಿದ್ದಾರೆ. ಆರಂಭದಲ್ಲಿ ಶಾಂತಿಯುತವಾಗಿ ನಡೆದ ಪ್ರತಿಭಟನೆ ಆ ಬಳಿಕ ಗಲಭೆಗೆ ತಿರುಗಿತು. ಜನರು ಹೆದ್ದಾರಿ ತಡೆದು ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಲಾಗಿದೆ.

ಸ್ಥಳೀಯಾಡಳಿತ ವಿರೋಧ:

ಟ್ರಂಪ್ ಈ ನಡೆಗೆ ಅಲ್ಲಿನ ಸ್ಥಳೀಯಾಡಳಿತ ವಿರೋಧವನ್ನು ವ್ಯಕ್ತಪಡಿಸಿದೆ. ಸೇನೆಯ ಅಗತ್ಯವಿಲ್ಲ ಎಂದು ಪೊಲೀಸರು ಹೇಳಿದ್ದರೂ ಕೂಡ ಟ್ರಂಪ್ ಮಿಲಿಟರಿ ಸಿಬ್ಬಂದಿ ನಿಯೋಜಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಯನ್ನು ಅಪಾಯಕ್ಕೆ ತಂದೊಡ್ಡುತ್ತಿದ್ದಾರೆ. ಇದು ಅಜಾಗರೂಕ ಮತ್ತು ಸೈನಿಕರಿಗೆ ಅಗೌರವ ಎಂದು ಅಸಮಾಧಾನಗೊಂಡಿದೆ.

ದಂಗೆ ಏಕೆ?

- ಅಕ್ರಮ ಹಾಗೂ ಕ್ರಿಮಿನಲ್‌ ವಲಸಿಗರನ್ನು ಅಮೆರಿಕದಿಂದ ಹೊರದಬ್ಬಲು ಟ್ರಂಪ್‌ ಯತ್ನ

- ಆದರೆ ಅಕ್ರಮ ವಲಸಿಗರ ಹೆಸರಲ್ಲಿ ಅಮಾಯಕರ ಹೊರದಬ್ಬಲಾಗುತ್ತಿದೆ ಎಂದು ಜನಾಕ್ರೋಶ

- ಹೀಗಾಗಿ ಲಾಸ್‌ ಏಂಜಲೀಸ್ ಸೇರಿ ವಿವಿಧೆಡೆ ಕಳೆದ 3 ದಿನಗಳಿಂದ ಭಾರಿ ಹಿಂಸಾಚಾರ

- ಹಿಂಸೆ ನಿಯಂತ್ರಣಕ್ಕೆಟ್ರಂಪ್‌ರಿಂದ ಸೇನೆ ನಿಯೋಜನೆ । ಇದಕ್ಕೆ ಗವರ್ನರ್‌ ಭಾರಿ ವಿರೋಧ

PREV
Read more Articles on

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ