ಬೇರೆ ಮುಟ್ಠಾಳ ದೇಶ ಹುಡುಕಿ : ಬ್ರಿಕ್ಸ್‌ಗೆ ಮತ್ತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ

KannadaprabhaNewsNetwork |  
Published : Feb 01, 2025, 12:01 AM ISTUpdated : Feb 01, 2025, 05:23 AM IST
US President Donald Trump

ಸಾರಾಂಶ

ಡಾಲರ್‌ ಬದಲು ಪ್ರತ್ಯೇಕ ಕರೆನ್ಸಿ ತರಲು ಬ್ರಿಕ್ಸ್ ದೇಶಗಳ ಪ್ರಸ್ತಾಪದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತೊಮ್ಮೆ ಕಿಡಿಕಾರಿದ್ದಾರೆ.

ವಾಷಿಂಗ್ಟನ್‌: ಡಾಲರ್‌ ಬದಲು ಪ್ರತ್ಯೇಕ ಕರೆನ್ಸಿ ತರಲು ಬ್ರಿಕ್ಸ್ ದೇಶಗಳ ಪ್ರಸ್ತಾಪದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತೊಮ್ಮೆ ಕಿಡಿಕಾರಿದ್ದಾರೆ. ‘ ನಮ್ಮನ್ನು ಎದುರು ಹಾಕಿಕೊಳ್ಳಬೇಡಿ. ಈ ರೀತಿ ಮಾಡುವುದಾದರೆ ಬೇರೆ ಮಟ್ಠಾಳ ದೇಶವನ್ನು ಹುಡುಕಿಕೊಳ್ಳಿ. ಒಂದು ವೇಳೆ ಎದುರು ಹಾಕಿಕೊಂಡರೆ ಬ್ರಿಕ್ಸ್‌ನ ಸದಸ್ಯ ರಾಷ್ಟ್ರಗಳು ಶೇ.100ರಷ್ಟು ಸುಂಕವನ್ನು ತೆರಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಿಡಿ ಕಾರಿರುವ ಟ್ರಂಪ್, ‘ ಬ್ರಿಕ್ಸ್‌ ದೇಶಗಳು ಡಾಲರ್‌ನಿಂದ ದೂರ ಸರಿಯಲು ಪ್ರಯತ್ನಿಸುತ್ತಿವೆ. ನಾವು ನಿಂತು ನೋಡುತ್ತಿರುವುದು ಮುಗಿದಿದೆ. ಅಮೆರಿಕದ ಡಾಲರ್‌ ಬದಲಿಗೆ ಹೊಸ ಬ್ರಿಕ್ಸ್‌ ಕರೆನ್ಸಿಯನ್ನು ತರುವುದಿಲ್ಲ ಎನ್ನುವ ಬದ್ಧತೆ ತೋರಲಿ ಅಥವಾ ಶೇ.100ರಷ್ಟು ಸುಂಕವನ್ನು ಎದುರಿಸಲಿ. ಅವರು ಮತ್ತೊಂದು ಮುಟ್ಠಾಳ ರಾಷ್ಟ್ರವನ್ನು ಹುಡುಕಲಿ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಅಥವಾ ಬೇರೆಲ್ಲಿಯಾದರೂ ಬ್ರಿಕ್ಸ್ ಅಮೆರಿಕ ಡಾಲರ್‌ ಬದಲಿಸುವ ಯಾವುದೇ ಅವಕಾಶವಿಲ್ಲ. ಯಾವುದೇ ದೇಶವು ಸುಂಕಗಳಿಗೆ ಹಲೋ ಹೇಳಬೇಕು ಎಂದರೆ ಅಮೆರಿಕಕ್ಕೆ ವಿದಾಯ ಹೇಳಬೇಕು ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.

ಭಾರತದ ಸೇರಿದಂತೆ 10 ರಾಷ್ಟ್ರಗಳ ಸಂಘಟನೆಯಾಗಿರುವ ಬ್ರಿಕ್ಸ್‌ ಅಮೆರಿಕದ ಡಾಲರ್‌ ಬದಲಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತ್ಯೇಕ ಕರೆನ್ಸಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ