ವಿವಾದಿತ ಐಎಎಸ್‌ ಪೂಜಾಗೆ ನೇಮಕ ರದ್ದು ಭೀತಿ : ಕೇಂದ್ರ ಲೋಕಸೇವಾ ಆಯೋಗ ಸರಣಿ ಕ್ರಮ

KannadaprabhaNewsNetwork | Updated : Jul 20 2024, 05:21 AM IST

ಸಾರಾಂಶ

ನಕಲಿ ದಾಖಲೆ ಪತ್ರಗಳನ್ನು ನೀಡಿ ನೇಮಕ ಆಗಿರುವ ಆರೋಪ ಹೊತ್ತಿರುವ ಹಾಗೂ ನೇಮಕ ಆದ ನಂತರ ಸಾಕಷ್ಟು ಅಧಿಕಾರ ದುರ್ಬಳಕೆ ಮಾಡಿಕೊಂಡು ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಪುಣೆಯ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸರಣಿ ಕ್ರಮಗಳನ್ನು ಆರಂಭಿಸಿದೆ.

  ನವದೆಹಲಿ : ನಕಲಿ ದಾಖಲೆ ಪತ್ರಗಳನ್ನು ನೀಡಿ ನೇಮಕ ಆಗಿರುವ ಆರೋಪ ಹೊತ್ತಿರುವ ಹಾಗೂ ನೇಮಕ ಆದ ನಂತರ ಸಾಕಷ್ಟು ಅಧಿಕಾರ ದುರ್ಬಳಕೆ ಮಾಡಿಕೊಂಡು ಕುಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಪುಣೆಯ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಸರಣಿ ಕ್ರಮಗಳನ್ನು ಆರಂಭಿಸಿದೆ.

ಇದರ ಮೊದಲ ಭಾಗವಾಗಿ ಶುಕ್ರವಾರ ಪೂಜಾ ವಿರುದ್ಧ ಯುಪಿಎಸ್ಸಿ ಎಫ್ಐಆರ್‌ ದಾಖಲಿಸಿದೆ. ಅಲ್ಲದೆ, ನಾಗರಿಕ ಸೇವಾ ಪರೀಕ್ಷೆ-2022ರಲ್ಲಿ ಆಕೆಯ ಆಯ್ಕೆಯನ್ನು ‘ನೇಮಕವನ್ನು) ರದ್ದುಗೊಳಿಸಲು ಶೋಕಾಸ್‌ ನೋಟಿಸ್‌ ನೀಡಿದೆ.ಇದೇ ವೇಳೆ, ಭವಿಷ್ಯದಲ್ಲಿ ಆಕೆ ಯಾವುದೇ ಪರೀಕ್ಷೆ ಹಾಗೂ ನೇಮಕಾತಿಗಳಲ್ಲಿ ಪಾಲ್ಗೊಳ್ಳದಂತೆ ದಿಬಾರ್‌ ಮಾಡುವ ನೋಟಿಸ್‌ ಕೂಡ ಜಾರಿ ಮಾಡಿದೆ. ಆಯೋಗದ ಮುಂದಿನ ಕ್ರಮವು ಖೇಡ್ಕರ್ ಅವರ ಉತ್ತರವನ್ನು ಅವಲಂಬಿಸಿರುತ್ತದೆ.

ತಾನು ದೃಷ್ಟಿ ಸಮಸ್ಯೆ ಇರುವ ಅಂಗವಿಕಲೆ ಎಂದು ಹಾಗೂ ಹಿಂದುಳಿದ ವರ್ಗದವಳು ಹೇಳಿಕೊಂಡು ಪೂಜಾ, ಆ ಕೋಟಾದಲ್ಲಿ ಐಎಎಸ್‌ ಅಧಿಕಾರಿಯಾಗಿ ಆಯ್ಕೆ ಆಗಿದ್ದಳು. ಈಗ ಆಕೆ ನಕಲಿ ಅಂಗವೈಕಲ್ಯ ದಾಖಲೆ ಹಾಗೂ ನಕಲಿ ಒಬಿಸಿ ದಾಖಲೆ ನೀಡಿದ್ದು ಕಂಡುಬಂದಿರುವ ಕಾರಣ ದಿಲ್ಲಿ ಪೊಲೀಸರಿಗೆ ದೂರು ನೀಡಿ ಎಫ್ಐಆರ್‌ ದಾಖಲಿಸಿದೆ. ‘ಪೂಜಾಳ ಎಲ್ಲ ನಡೆ-ನುಡಿಗಳನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಯುಪಿಎಸ್ಸಿ ಸ್ಪಷ್ಟಪಡಿಸಿದೆ.

ಇತ್ತೀಚೆಗೆ ಈಕೆಯನ್ನು ಕೇಂದ್ರ ಸರ್ಕಾರವು ಮಹಾರಾಷ್ಟ್ರದ ವಾಶಿಂನಲ್ಲಿನ ಪ್ರೊಬೆಷನರಿ ಹುದ್ದೆಯನ್ನು ತೊರೆದು ಮಸ್ಸೂರಿಯ ಐಐಎಸ್‌ ತರಬೇತಿ ಕೇಂದ್ರಕ್ಕೆ ಮರಳಬೇಕು ಎಂದು ಸೂಚಿಸಿತ್ತು.

ಪ್ರೊಬೆಷನರಿ ಅಧಿಕಾರಿಯಾಗಿದ್ದರೂ ಹಿರಿಯ ಐಐಎಸ್ ಅಧಿಕಾರಿಗಳಿಗೆ ಸಿಗುವ ಸವಲತ್ತುಗಳನ್ನು ಪೂಜಾ ಬೇಡಿದ್ದಳು. ಅಲ್ಲದೆ, ತನ್ನ ಖಾಸಗಿ ಕಾರಿಗೆ ರೆಡ್‌ ಬೀಕನ್‌ ಲೈಟ್‌ ಹಾಕಿಕೊಂಡು ದರ್ಪ ಮೆರೆದಿದ್ದಳು.

Share this article