ಅಮೆರಿಕ: ಕೈಕೋಳ ಹಾಕಿ ಚಿತ್ರಹಿಂಸೆ ನೀಡಿ ಭಾರತೀಯನ ಗಡೀಪಾರು

KannadaprabhaNewsNetwork |  
Published : Jun 10, 2025, 03:09 AM ISTUpdated : Jun 10, 2025, 04:57 AM IST
ಅಮೆರಿಕ | Kannada Prabha

ಸಾರಾಂಶ

ಅಮೆರಿಕದ ನ್ಯೂಯಾರ್ಕ್‌ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕೈಕೋಳ ಹಾಕಿ ನೆಲಕ್ಕೆ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಈ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಬಳಕೆದಾರರು ಹೇಳಿಕೊಂಡಿದ್ದಾರೆ.

ನ್ಯೂಯಾರ್ಕ್‌: ಅಮೆರಿಕದ ನ್ಯೂಯಾರ್ಕ್‌ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಕೈಕೋಳ ಹಾಕಿ ನೆಲಕ್ಕೆ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಈ ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಬಳಕೆದಾರರು ಹೇಳಿಕೊಂಡಿದ್ದಾರೆ.

ಈತ ಯಾರೆಂದು ಗೊತ್ತಾಗಿಲ್ಲ. ಆದರೆ ಹರ್ಯಾಣ ಮೂಲದವ ಎನ್ನಲಾಗಿದೆ. ಏಕೆಂದರೆ ಆತ ಹರಿಯಾಣ್ವಿ ಭಾಷೆಯಲ್ಲಿ ಮಾತನಾಡುತ್ತಿದ್ದ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ಬಗ್ಗೆ ಅಮೆರಿಕಕ್ಕೆ ದೂರಬೇಕು ಎಂದು ಭಾರತೀಯ ಅಮೆರಿಕನ್‌ ಮುಖಂಡ ಕುನಾಲ್‌ ಜೈನ್‌ ಆಗ್ರಹಿಸಿದ್ದಾರೆ.

‘ನಿನ್ನೆ ರಾತ್ರಿ ನ್ಯೂವಾರ್ಕ್ ವಿಮಾನ ನಿಲ್ದಾಣದಿಂದ ಒಬ್ಬ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡುವುದನ್ನು ನಾನು ನೋಡಿದೆ. ಕೈಕೋಳ ಹಾಕಲಾಗುತ್ತು. ಆತ ಅಳುತ್ತಿದ್ದ, ಆತನನ್ನು ಅಪರಾಧಿಯಂತೆ ನಡೆಸಿಕೊಳ್ಳಲಾಯಿತು. ನಾನು ಇದನ್ನು ನೋಡುತ್ತಿದ್ದರೂ ಅಸಹಾಯಕನಾಗಿದ್ದೆ. ಇದು ಮಾನವ ದುರಂತ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಐಇಡಿ ಸ್ಫೋಟ: ಛತ್ತೀಸ್‌ಗಢದಲ್ಲಿ ಎಎಸ್‌ಪಿ ಹುತಾತ್ಮ, ಇಬ್ಬರಿಗೆ ಗಾಯ

ಸುಕ್ಮಾ: ನಕ್ಸಲ್ ಮುಕ್ತಕ್ಕೆ ಪಣ ತೊಟ್ಟಿರುವ ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಮತ್ತೆ ತಮ್ಮ ಮೊಂಡಾಟ ಮೆರೆದಿದ್ದು, ನಕ್ಸಲರು ಇರಿಸಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟಗೊಂಡು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ.

ಸುಕ್ಮಾ ಜಿಲ್ಲೆಯ ದೊಂಡ್ರಾ ಗ್ರಾಮದ ಕೊಂಟಾ - ಎರ್ರಾಬೋರ್‌ ರಸ್ತೆಯ ಬಳಿ ಘಟನೆ ನಡೆದಿದೆ. ಎಎಸ್‌ಪಿ ಆಕಾಶ್‌ ರಾವ್ ಗಿರೆಪುಂಜೆ ಮತ್ತು ಇತರ ಸಿಬ್ಬಂದಿ ಆ ಪ್ರದೇಶದಲ್ಲಿ ಮಣ್ಣು ತೆಗೆಯುವ ಯಂತ್ರವನ್ನು ನಕ್ಸಲರು ಸುಟ್ಟು ಹಾಕಿದ್ದಾರೆ ಎಂಬ ಮಾಹಿತಿಯ ಮೇರೆಗೆ ಗಸ್ತು ತಿರುಗುತ್ತಿದ್ದರು. ಈ ಸಂದರ್ಭದಲ್ಲಿ ಮಾವೋವಾದಿಗಳು ಇರಿಸಿದ್ದ ಐಇಡಿ ಸ್ಫೋಟಗೊಂಡಿದೆ.ಈ ವೇಳೆ ಆಕಾಶ್ ರಾವ್ ಸೇರಿದಂತೆ ಇತರ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ರಾವ್ ಸಾವನ್ನಪ್ಪಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಎಎಸ್‌ಪಿ ಸಾವಿಗೆ ಛತ್ತೀಸ್‌ಗಢ ಸಿಎಂ ವಿಷ್ಣುದೇವ್ ಸಾಯಿ ಸಂತಾಪ ಸೂಚಿಸಿದ್ದಾರೆ.

ವಲಸಿಗರ ಹೊರದಬ್ಬುವ ಟ್ರಂಪ್‌ ನಡೆ ವಿರುದ್ಧ ಹಿಂಸೆ

ಲಾಸ್‌ ಏಂಜಲೀಸ್‌: ವಲಸಿಗರನ್ನು ಹೊರದಬ್ಬುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಹೊಸ ವಿರುದ್ಧ ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ ನಗರದಲ್ಲಿ ಶನಿವಾರದಿಂದ ಭಾರಿ ಹಿಂಸಾಚಾರ ನಡೆಯುತ್ತಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಲವರನ್ನು ಬಂಧಿಸಿದ್ದಾರೆ.ಭಾನುವಾರ ಈ ಪ್ರತಿಭಟನೆಯು ಇನ್ನು ಜೋರಾಗ ತೊಡಗಿದ್ದನ್ನು ಗಮನಿಸಿದ ಅಧ್ಯಕ್ಷ ಟ್ರಂಪ್‌, ಹೆಚ್ಚುವರಿಯಾಗಿ 300 ನ್ಯಾಷನಲ್‌ ಗಾರ್ಡ್‌ಗಳನ್ನು ಪ್ರತಿಭಟನಾ ಸ್ಥಳಕ್ಕೆ ನಿಯೋಜನೆ ಮಾಡಿದ್ದಾರೆ. ಆದರೆ ಇದಕ್ಕೆ ಬಗ್ಗದ ಉದ್ರಿಕ್ತರು, ಪೊಲೀಸರು, ಸಿಬ್ಬಂದಿ ಮೇಲೆ ಬಾಟಲ್‌ ಬಾಂಬ್‌ಗಳನ್ನು ಎಸೆದು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಹಿಂಬದಿಯಿಂದ ಭದ್ರತಾ ಸಿಬ್ಬಂದಿ ಮೇಲೆ ಹಾನಿ ಮಾಡಲು ಶುರುಮಾಡಿದ್ದಾರೆ. ಈ ವೇಳೆ ಒಬ್ಬ ಆಸ್ಟ್ರೇಲಿಯಾ ಪತ್ರಕರ್ತೆಗೂ ಪೊಲೀಸರ ಗುಂಡು ತಾಗಿದೆ.

ಇದೇ ವೇಳೆ ಪೊಲೀಸರ ಮೇಲೆ ದಾಳಿ ಮಾಡಿದರೆ ಜೈಲಿಗೆ ಹಾಕುತ್ತೇವೆ ಎಂದು ಎಫ್‌ಬಿಐ ಮುಖ್ಯಸ್ಥ ಕಾಶ್‌ ಪಟೇಲ್‌ ಎಚ್ಚರಿಕೆ ನೀಡಿದ್ದಾರೆ.

ರಷ್ಯಾದಿಂದ ಅತಿದೊಡ್ದ ಅಟ್ಯಾಕ್‌: 479 ಡ್ರೋನ್‌ಗಳ ಭೀಕರ ದಾಳಿ

ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ರಷ್ಯಾ ಮತ್ತೆ ಉಕ್ರೇನ್ ಮೇಲೆ ಅತಿದೊಡ್ಡ ದಾಳಿ ನಡೆಸಿದ್ದು 479 ಡ್ರೋನ್‌ಗಳನ್ನು ಬಳಸಿ ದಾಳಿ ನಡೆಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.ಈ ಬಗ್ಗೆ ಉಕ್ರೇನ್ ವಾಯುಪಡೆಯೇ ಖಚಿತ ಪಡಿಸಿದ್ದು, ‘479 ಡ್ರೋನ್‌ಗಳ ಜತೆಗೆ 20 ಕ್ಷಿಪಣಿಗಳನ್ನು ಉಕ್ರೇನ್‌ನ ಹಲವು ಭಾಗಗಳಲ್ಲಿ ಹಾರಿಸಿದೆ. ಅದರಲ್ಲಿಯೂ ಮಧ್ಯ ಮತ್ತು ಪಶ್ಚಿಮ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ’ ಎಂದಿದೆ.ಇನ್ನು ರಷ್ಯಾದ ವೈಮಾನಿಕ ದಾಳಿಯನ್ನು ಉಕ್ರೇನ್ ಸಮರ್ಥವಾಗಿ ನಿಭಾಯಿಸಿದ್ದು, ಉಕ್ರೇನ್‌ನ ವಾಯು ರಕ್ಷಣಾ ಪಡೆಗಳು 277 ಡ್ರೋನ್‌ಗಳು ಮತ್ತು 19 ಕ್ಷಿಪಣಿಗಳನ್ನು ಹಾರಾಟದ ಮಧ್ಯದಲ್ಲಿಯೇ ನಾಶಪಡಿಸಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.

ಸ್ಟಾರ್‌ಲಿಂಕ್‌ ಇಂಟರ್ನೆಟ್‌ ಸೇವೆ ತಿಂಗಳಿಗೆ ₹3000 ರು.?

ನವದೆಹಲಿ: ವಿಶ್ವದ ಶ್ರೀಮಂತ ಎಲಾನ್‌ ಮಸ್ಕ್‌ ಅವರ ಒಡೆತನದ ಹಾಗೂ ಉಪಗ್ರಹದಿಂದ ನೇರವಾಗಿ ಇಂಟರ್ನೆಟ್‌ ಸೇವೆ ಒದಗಿಸುವ ಸ್ಟಾರ್‌ಲಿಂಕ್‌ ಭಾರತಕ್ಕೆ ಪಾದಾರ್ಪಣೆ ಮಾಡುವ ಕಾಲ ಸನ್ನಿಹಿತವಾಗಿದೆ. ಇದರ ಪ್ಲಾನ್‌ಗಳು ತಿಂಗಳಿಗೆ 3000 ರು.ನಿಂದ ಆರಂಭವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.ಇದರ ಜೊತೆಗೆ ರಿಸೀವರ್‌ ಕಿಟ್‌ಗೆ ಒಮ್ಮೆ 33,000 ರು. ಇರಬಹುದು ಎನ್ನಲಾಗಿದೆ.

ಸ್ಟಾರ್‌ಲಿಂಕ್‌ ಕೆಳ ಕಕ್ಷೆ ಉಪಗ್ರಹಗಳಿಂದ (ಎಲ್‌ಇಓ) ನೇರವಾಗಿ ಇಂಟರ್ನೆಟ್‌ ಸೌಲಭ್ಯವನ್ನು ಒದಗಿಸಲಿದ್ದು, ಇದರ ವೇಗವು ಪ್ರತಿ ಸೆಕೆಂಡಿಗೆ 600-700 ಜಿಬಿ ಇರಲಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಪ್ರಮುಖವಾಗಿ ಸಾಮಾನ್ಯ ಟವರ್‌, ಕೇಬಲ್‌ ಆಧರಿತ ಇಂಟರ್ನೆಟ್‌ ಸೌಲಭ್ಯವಿಲ್ಲದ ಗ್ರಾಮೀಣ ಭಾಗದಲ್ಲಿ ಒದಗಿಸಲು ಸ್ಟಾರ್‌ಲಿಂಕ್‌ ಮುನ್ನೋಡುತ್ತಿದೆ. ಮುಂದಿನ 12 ತಿಂಗಳಲ್ಲಿ ಸ್ಟಾರ್‌ಲಿಂಕ್‌ ಭಾರತದಲ್ಲಿ ಸೇವೆ ಶುರು ಮಾಡುವ ಸಾಧ್ಯತೆ ಇದೆ.

PREV
Read more Articles on

Recommended Stories

ಇನ್ನೂ 20 ವರ್ಷ ನೀವು ವಿಪಕ್ಷದಲ್ಲಿ: ಕಾಂಗ್ರೆಸ್‌ಗೆ ಶಾ ಟಾಂಗ್
ಭಾರತಕ್ಕೆ ಸೇನೆಯೇ ಬೇಡ ಎಂದು ನೆಹರು ಹೇಳಿದ್ದರು : ಸಂಸದ ತೇಜಸ್ವಿ ಸೂರ್ಯ