ಭಾರತದ ಮೇಲೆ ಹೇರಿದ್ದ ಶೇ.26ರಷ್ಟು ಪ್ರತಿತೆರಿಗೆಗೆ ಜು.9ರವರೆಗೂ ತಡೆ ಇರಲಿದೆ : ಅಮೆರಿಕ

ಸಾರಾಂಶ

ಭಾರತದ ಮೇಲೆ ಹೇರಿದ್ದ ಶೇ.26ರಷ್ಟು ಪ್ರತಿತೆರಿಗೆಗೆ ಜು.9ರವರೆಗೂ ತಡೆ ಇರಲಿದೆ ಎಂದು ಅಮೆರಿಕ ಗುರುವಾರ ಅಧಿಕೃತ ಪ್ರಕಟಣೆ ನೀಡಿದೆ.

ನವದೆಹಲಿ: ಭಾರತದ ಮೇಲೆ ಹೇರಿದ್ದ ಶೇ.26ರಷ್ಟು ಪ್ರತಿತೆರಿಗೆಗೆ ಜು.9ರವರೆಗೂ ತಡೆ ಇರಲಿದೆ ಎಂದು ಅಮೆರಿಕ ಗುರುವಾರ ಅಧಿಕೃತ ಪ್ರಕಟಣೆ ನೀಡಿದೆ. ಬುಧವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಫ್‌, ಚೀನಾ ಹೊರತುಪಡಿಸಿ 75 ದೇಶಗಳಿಗೆ 90 ದಿನಗಳ ಕಾಲ ಪ್ರತಿತೆರಿಗೆಯಿಂದ ವಿನಾಯ್ತಿ ನೀಡುವುದಾಗಿ ಘೋಷಿಸಿದ್ದರು. 

ಆದರೆ ದೇಶಗಳ ಹೆಸರನ್ನು ಪ್ರಕಟ ಮಾಡಿರಲಿಲ್ಲ. ಹೀಗಾಗಿ ಗುರುವಾರ ಶ್ವೇತಭವನ ಈ ಕುರಿತು ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಆದರೆ ಈಗಾಗಲೇ ಜಾರಿಯಲ್ಲಿದ್ದ ಶೇ.10ರಷ್ಟು ಮೂಲ ತೆರಿಗೆ ಹಿಂದಿನಂತೆ ಮುಂದುವರೆಯಲಿದೆ.

Share this article