ಉತ್ತರ ಪ್ರದೇಶದ ಗೋಂಡಾ ಜಿಲ್ಲಾಧಿಕಾರಿ ಕಚೇರಿ ಸ್ವಚ್ಚತಾ ಸಿಬ್ಬಂದಿ ಬಳಿ ಐಷಾರಾಮಿ ಮನೆ, 9 ಕಾರು ಪತ್ತೆ!

KannadaprabhaNewsNetwork |  
Published : Aug 19, 2024, 12:50 AM ISTUpdated : Aug 19, 2024, 04:50 AM IST
ಸ್ವಚ್ಚತಾ ಸಿಬ್ಬಂದಿ | Kannada Prabha

ಸಾರಾಂಶ

ಉತ್ತರ ಪ್ರದೇಶದ ಗೋಂಡಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಂತೋಷ್‌ ಕುಮಾರ್‌ ಜೈಸ್ವಾಲ್ ಎಂಬಾತನ ಬಳಿ ಐಷಾರಾಮಿ ಬಂಗಲೆ, 9 ದುಬಾರಿ ಮೌಲ್ಯದ ಕಾರುಗಳು ಪತ್ತೆಯಾಗಿದ್ದು ಆತನ ಸಂಪಾದನೆಯ ಮಾರ್ಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಲಖನೌ: ಉತ್ತರ ಪ್ರದೇಶದ ಗೋಂಡಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಸಂತೋಷ್‌ ಕುಮಾರ್‌ ಜೈಸ್ವಾಲ್ ಎಂಬಾತನ ಬಳಿ ಐಷಾರಾಮಿ ಬಂಗಲೆ, 9 ದುಬಾರಿ ಮೌಲ್ಯದ ಕಾರುಗಳು ಪತ್ತೆಯಾಗಿದ್ದು ಆತನ ಸಂಪಾದನೆಯ ಮಾರ್ಗ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

ಕಮಿಷನರ್ ಕಚೇರಿಯಲ್ಲಿ ಗುಮಾಸ್ತನ ಕೆಲಸ ಮಾಡುತ್ತಿರುವ ಸಂತೋಷ್‌ ವಿರುದ್ಧ ಅಕ್ರಮದ ದೂರು ಕೇಳಿ ಬಂದಿತ್ತು. ಸರ್ಕಾರಿ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಆತನನ್ನು ಅಮಾನತುಗೊಳಿಸಿ ವಿರುದ್ಧ ತನಿಖೆಗೆ ಆದೇಶಿಸಿದ್ದರು. ತನಿಖೆಗೆ ಇಳಿದ ಅಧಿಕಾರಿಗಳಿಗೆ ಜೈಸ್ವಾಲ್‌ ಬಳಿ ವೇಳೆ ಪತ್ತೆಯಾದ ಸಂಪತ್ತಿನ ರಾಶಿ ದಂಗಾಗಿಸಿದೆ.

ಕಚೇರಿಯಲ್ಲಿ ಕೆಲಸದ ವೇಳೆ ಸಂತೋಷ್‌, ಫೈಲ್‌ಗಳನ್ನು ತಿರುಚುವ, ಕಡತ ದುರುಪಯೋಗದ ಕೆಲಸ ಮಾಡಿ ಹಲವು ವರ್ಷಗಳಿಂದ ಭಾರೀ ಹಣ ಸಂಪಾದನೆ ಮಾಡಿದ್ದ ಎಂಬುದು ಬೆಳಕಿಗೆ ಬಂದಿದೆ. ಪ್ರಾಥಮಿಕ ತನಿಖೆ ವೇಳೆ ಐಷಾರಾಮಿ ಮನೆ, 9 ಕಾರು ಮತ್ತು ಬ್ಯಾಂಕ್‌ ಖಾತೆಯಲ್ಲಿ ಭಾರೀ ಹಣ ಪತ್ತೆಯಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಗಾ ವಿರುದ್ಧ ಸಂಸತ್ತಲ್ಲಿ ಬಿಜೆಪಿಯ ಅನರ್ಹತೆ ಅಸ್ತ್ರ
7 ದಶಕಗಳ ಬಳಿಕಹೊಸ ಕಟ್ಟಡಕ್ಕೆ ಪ್ರಧಾನಿ ಕಚೇರಿ - ಇಂದು ‘ಸೇವಾ ತೀರ್ಥ’ ಉದ್ಘಾಟನೆ