ಶೀಘ್ರ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ

KannadaprabhaNewsNetwork |  
Published : Sep 09, 2025, 01:02 AM IST
ವಂದೇ ಭಾರತ್‌  | Kannada Prabha

ಸಾರಾಂಶ

ಭಾರತೀಯ ರೈಲ್ವೆಯ ಬಹುನಿರೀಕ್ಷಿತ ವಂದೇ ಭಾರತ್‌ ಸ್ಲೀಪರ್‌ ಮಾದರಿಯ ರೈಲುಗಳು ಶೀಘ್ರವಾಗಿ ದೆಹಲಿಯಿಂದ ಉದ್ಘಾಟನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

 ನವದೆಹಲಿ: ಭಾರತೀಯ ರೈಲ್ವೆಯ ಬಹುನಿರೀಕ್ಷಿತ ವಂದೇ ಭಾರತ್‌ ಸ್ಲೀಪರ್‌ ಮಾದರಿಯ ರೈಲುಗಳು ಶೀಘ್ರವಾಗಿ ದೆಹಲಿಯಿಂದ ಉದ್ಘಾಟನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಉದ್ಘಾಟನಾ ರೈಲು ಮಂಗಳೂರು ಮತ್ತು ಬೆಂಗಳೂರು ನಡುವೆ ಸಂಚರಿಸುತ್ತವೆ ಎಂಬ ಮಾತುಗಳಿತ್ತು. ಆದರೆ ಉದ್ಘಾಟನಾ ರೈಲು ದೆಹಲಿಯಿಂದ ಪಟನಾ, ಅಹಮದಾಬಾದ್‌ ಅಥವಾ ಭೋಪಾಲ್‌ಗೆ ಇರಲಿದೆ ಎನ್ನಲಾಗಿದೆ. ವಂದೇ ಭಾರತ್‌ ಸ್ಲೀಪರ್‌ ರೈಲುಗಳು 1 ಸಾವಿರ ಕಿ.ಮೀ. ದೂರದರೆಗೆ ಸಂಚರಿಸುವ ಸಾಧ್ಯತೆ ಇದೆ.

ರೈಲು ಹೇಗಿರುತ್ತವೆ?:

ಈ ರೈಲುಗಳು ಸಂಪೂರ್ಣ ಹವಾನಿಯಂತ್ರಿತವಾಗಿದ್ದು, 3 ಟೈರ್‌, 2 ಟೈರ್‌ ಮತ್ತು ಫಸ್ಟ್‌ ಕ್ಲಾಸ್‌ ಏಸಿ ಕೋಚ್‌ಗಳು ಇರಲಿವೆ. ವಿಶೇಷವೆಂದರೆ, ಫಸ್ಟ್‌ ಕ್ಲಾಸ್‌ ಕೋಚ್‌ನಲ್ಲಿ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆಯು ಇರಲಿದೆ. ಇವುಗಳು 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಈ ವರ್ಷಾಂತ್ಯಕ್ಕೆ 10 ಸೆಟ್‌ ರೈಲುಗಳು ತಯಾರಾಗಲಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಆ್ಯಂಥ್ರೋಪಿಕ್‌ ಎಐನಿಂದ ವಿಶ್ವ ಟೆಕ್‌ ಲೋಕದಲ್ಲಿ ಬಿರುಗಾಳಿ!
ಕೇರಳ ಅಸೆಂಬ್ಲಿಯಲ್ಲೂ ಈಗ ‘ಗೋ ರಾಮ್‌ ಜಿ’ ನಿರ್ಣಯ