ವಾರಾಣಸಿ: ಇಲ್ಲಿನ ಜ್ಞಾನವಾಪಿ ಮಸೀದಿಯಲ್ಲಿ ಈ ಹಿಂದೆ ಹಿಂದೂ ದೇಗುಲವಾಗಿತ್ತು ಎಂಬ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಸಮೀಕ್ಷೆ ಹಿನ್ನೆಲೆಯಲ್ಲಿ ಮಸೀದಿಯನ್ನು ಹಿಂದೂ ದೇಗುಲ ಎಂದು ಘೋಷಿಸಬೇಕು ಹಾಗೂ ಹಿಂದೂ ಸಮುದಾಯಕ್ಕೆ ಹಸ್ತಾಂತರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಈಗಿರುವ ಜ್ಞಾನವಾಪಿ ಮಸೀದಿಯನ್ನು ಗೌರವಯುತವಾಗಿ ಮತ್ತೊಂದು ಜಾಗಕ್ಕೆ ಸ್ಥಳಾಂತರಿಸಿ ಆ ಜಾಗವನ್ನು ಕಾಶಿ ವಿಶ್ವನಾಥ ಮಂದಿರದ ಸುಪರ್ದಿಗೆ ನೀಡಬೇಕು.
ಹಿಂದೂ ಧಾರ್ಮಿಕ ಸ್ಥಳಗಳ ಕಾಯಿದೆ ಸೆಕ್ಷನ್ 4ರ ಪ್ರಕಾರವೂ ಸಹ ಈ ಜಾಗವನ್ನು ಹಿಂದೂ ದೇಗುಲವೆಂದು ಘೋಷಣೆ ಮಾಡಬೇಕು ಎಂದು ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಒತ್ತಾಯಿಸಿದ್ದಾರೆ.
ಜ್ಞಾನವಾಪಿ ಮಸೀದಿಯ ಸಮೀಕ್ಷೆಯಲ್ಲಿ ಮಸೀದಿಯ ಪ್ರಾಂಗಣದಲ್ಲಿ ಹಲವು ಹಿಂದೂ ದೇವರ ವಿಗ್ರಹಗಳು ಮತ್ತು ಅದರ ಕುರಿತಾದ ಶಿಲಾಶಾಸನಗಳಿರುವುದಾಗಿ ಉಲ್ಲೇಖಿಸಲಾಗಿದೆ.