ಕೋಲ್ಕತಾ: ಪಶ್ಚಿಮ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್‌ಗೆ ಇತ್ತೀಚೆಗೆ ಒಡಿಶಾದಿಂದ ತರಲಾದ ಒಂದು ಗಂಡು, ಮತ್ತೊಂದು ಹೆಣ್ಣು ಸಿಂಹ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ.
ಅರಣ್ಯಾಧಿಕಾರಿಗಳು ಅಧಿಕಾರಿಗಳು ಹೆಣ್ಣು ಸಿಂಹಕ್ಕೆ ‘ಸೀತಾ’ ಹಾಗೂ ಗಂಡು ಸಿಂಹಕ್ಕೆ ‘ಅಕ್ಬರ್’ ಎಂದು ನಾಮಕರಣ ಮಾಡಿದ್ದಾರೆ.
ಜೊತೆಗೆ ಅದನ್ನು ಸಫಾರಿ ವಲಯದಲ್ಲಿ ಒಂದೇ ಪ್ರದೇಶದೊಳಗೆ ಇರಿಸಿದ್ದಾರೆ. ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುತ್ತಿದೆ ಎಂದು ವಿಎಚ್‌ಪಿ ಆರೋಪಿಸಿದೆ.
ಅಲ್ಲದೆ ಕೂಡಲೇ ಪ್ರಾಣಿಗಳ ಹೆಸರು ಬದಲಿಸಬೇಕು ಎಂದು ಕೋರಿ ವಿಎಚ್‌ಪಿ ನಾಯಕರು ಕಲ್ಕತಾ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಈ ಅರ್ಜಿ ಫೆ.20ರಂದು ವಿಚಾರಣೆಗೆ ಬರಲಿದೆ. ಈ ನಡುವೆ ಈವರೆಗೆ ಸಿಂಹಗಳಿಗೆ ಇನ್ನೂ ನಾಮಕರಣ ಮಾಡಿಲ್ಲ’ ಎಂದು ಅರಣ್ಯ ಇಲಾಖೆ ಸ್ಪಷ್ಟನೆ ನೀಡಿದೆ.