ನಿತ್ಯ 25-30 ವಿಮಾನ ಸಂಚಾರ ಕಡಿತಕ್ಕೆ ವಿಸ್ತಾರ ನಿರ್ಧಾರ

KannadaprabhaNewsNetwork |  
Published : Apr 08, 2024, 01:07 AM ISTUpdated : Apr 08, 2024, 05:45 AM IST
ವಿಸ್ತಾರ’ ಏರ್‌ಲೈನ್ಸ್‌, | Kannada Prabha

ಸಾರಾಂಶ

ಏರ್‌ ಇಂಡಿಯಾ ಜತೆಗಿನ ವಿಲೀನ ಹಾಗೂ ಕಮ್ಮಿ ಸಂಬಳ ವಿರೋಧಿಸಿ ಪೈಲಟ್‌ಗಳು ಪ್ರತಿಭಟನೆಗೆ ಇಳಿದ ಬಳಿಕ ಕಂಗೆಟ್ಟಿರುವ ಟಾಟಾ-ಸಿಂಗಾಪುರ ಏರ್‌ಲೈನ್ಸ್‌ ಜಂಟಿ ಮಾಲೀಕತ್ವದ ‘ವಿಸ್ತಾರ’ ಏರ್‌ಲೈನ್ಸ್‌, ತನ್ನ ನಿತ್ಯದ ಕಾರ್ಯಾಚರಣೆ ಪೈಕಿ ಶೇ.10ರಷ್ಟು ಅಥವಾ 25-30 ವಿಮಾನ ಸಂಚಾರ ರದ್ದತಿಗೆ ನಿರ್ಧರಿಸಿದೆ

ನವದೆಹಲಿ: ಏರ್‌ ಇಂಡಿಯಾ ಜತೆಗಿನ ವಿಲೀನ ಹಾಗೂ ಕಮ್ಮಿ ಸಂಬಳ ವಿರೋಧಿಸಿ ಪೈಲಟ್‌ಗಳು ಪ್ರತಿಭಟನೆಗೆ ಇಳಿದ ಬಳಿಕ ಕಂಗೆಟ್ಟಿರುವ ಟಾಟಾ-ಸಿಂಗಾಪುರ ಏರ್‌ಲೈನ್ಸ್‌ ಜಂಟಿ ಮಾಲೀಕತ್ವದ ‘ವಿಸ್ತಾರ’ ಏರ್‌ಲೈನ್ಸ್‌, ತನ್ನ ನಿತ್ಯದ ಕಾರ್ಯಾಚರಣೆ ಪೈಕಿ ಶೇ.10ರಷ್ಟು ಅಥವಾ 25-30 ವಿಮಾನ ಸಂಚಾರ ರದ್ದತಿಗೆ ನಿರ್ಧರಿಸಿದೆ. 

ಇವು ಹೆಚ್ಚಾಗಿ ದೇಶೀ ವಿಮಾನ ಆಗಿವೆ. ವಿಸ್ತಾರ ನಿತ್ಯ 300 ವಿಮಾನಗಳನ್ನುಈ ಮುಂಚೆ ಹಾರಿಸುತ್ತಿತ್ತು. ಪೈಲಟ್‌ಗಳು ಪ್ರತಿಭಟನೆ ನಡೆಸಿದ ಕಾರಣ ಕಾರ್ಯಾಚರಣೆ ಹೆಚ್ಚೂಕಮ್ಮಿ ನಿಂತಿತ್ತು. ಈಗ ಶೇ.80ರಷ್ಟು ಪೈಲಟ್‌ಗಳು ಕೆಲಸಕ್ಕೆ ಮರಳಿದ್ದಾರೆ ಎನ್ನಲಾಗಿದ್ದು, ಶೇ.10ರಷ್ಟು ವಿಮಾನ ರದ್ದು ಮಾಡಿ ಮಿಕ್ಕ ವಿಮಾನ ಹಾರಾಟಕ್ಕೆ ನಿರ್ಧರಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಪಂಚರಾಜ್ಯಗಳ ಚುನಾವಣೆ ಮುಹೂರ್ತ ಫಿಕ್ಸ್ : ಇಲ್ಲಿ ಗೆಲ್ಲೋರ್ಯಾರು ? ಸೋಲು ಯಾರಿಗೆ?
ಕಚ್ಚಾ ತೈಲ ಹೊತ್ತ ಮತ್ತೊಂದು ಹಡಗು ಭಾರತಕ್ಕೆ