9 ದಾಳಿಯಲ್ಲಿ ಬಚಾವ್ ಆಗಿದ್ದ ಖಮೇನಿ ಆಪ್ತ ಖಾನಿ ಇಸ್ರೇಲ್‌ ಗೂಢಚರ ?

KannadaprabhaNewsNetwork |  
Published : Mar 08, 2026, 01:45 AM ISTUpdated : Mar 08, 2026, 06:09 AM IST
Iran

ಸಾರಾಂಶ

ಸಾವಿಲ್ಲದ ಸರದಾರ, ಇರಾನ್‌ ರೆವಲ್ಯೂಷನರಿ ಗಾರ್ಡ್‌ (ಐಆರ್‌ಜಿಸಿ)ನ ಕಮಾಂಡರ್‌ ಇಸ್ಮಾಯಿನ್‌ ಖಾನಿ (67) ಅವರನ್ನು ಇಸ್ರೇಲ್‌ ಪರ ಗೂಢಚರ್ಯೆ ನಡೆಸಿದ ಆರೋಪ ಮೇರೆಗೆ ಹತ್ಯೆ ಮಾಡಲಾಗಿದೆ ಎಂಬ ವದಂತಿ ಕೇಳಿಬಂದಿದೆ.

 ವಾಷಿಂಗ್ಟನ್‌: ಸಾವಿಲ್ಲದ ಸರದಾರ, ಇರಾನ್‌ ರೆವಲ್ಯೂಷನರಿ ಗಾರ್ಡ್‌ (ಐಆರ್‌ಜಿಸಿ)ನ ಕಮಾಂಡರ್‌ ಇಸ್ಮಾಯಿನ್‌ ಖಾನಿ (67) ಅವರನ್ನು ಇಸ್ರೇಲ್‌ ಪರ ಗೂಢಚರ್ಯೆ ನಡೆಸಿದ ಆರೋಪ ಮೇರೆಗೆ ಹತ್ಯೆ ಮಾಡಲಾಗಿದೆ ಎಂಬ ವದಂತಿ ಕೇಳಿಬಂದಿದೆ.

ಇರಾನ್‌ನ ಪರಮೋಚ್ಚ ನಾಯಕ ಆಯೆತೊಲ್ಲಾ ಖಮೇನಿ ಹತ್ಯೆ ವೇಳೆ ಸ್ಥಳದಲ್ಲೇ ಇದ್ದ ಖಾನಿ ಅವರು ದಾಳಿಗೆ ಕೆಲವೇ ಕ್ಷಣಗಳ ಮೊದಲು ಹೊರಹೋಗಿದ್ದರು. ಈ ಮೂಲಕ ಖಮೇನಿ ಮತ್ತಿತರ ಪ್ರಮುಖರು ಹತ್ಯೆಯಾದರೂ ಖಾನಿ ಮಾತ್ರ ಬಚಾವಾಗಿದ್ದರು. ಈ ಹಿನ್ನೆಲೆಯಲ್ಲಿ ಖಾನಿ ಅವರ ಮೇಲೆ ಇಸ್ರೇಲ್‌ ಪರ ಗೂಢಚರ್ಯೆ ನಡೆಸಿದ ಆರೋಪದ ಮೇರೆಗೆ ಬಂಧಿಸಿ, ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಾವಿಲ್ಲದ ಸರದಾರ:

ಅಮೆರಿಕ ಸೇನೆಯು 2020ರಲ್ಲಿ ಖಾಸೀಂ ಸುಲೈಮಾನಿ ಅವರನ್ನು ಹತ್ಯೆ ಬಳಿಕ ಐಆರ್‌ಜಿಸಿ ಕಮಾಂಡರ್‌ ಆಗಿ ನೇಮಕೊಂಡಿದ್ದರು. ಐಆರ್‌ಜಿಸಿ ಅಥವಾ ರೆವಲ್ಯೂನರಿ ಗಾರ್ಡ್‌ ಇರಾನ್‌ ಸೇನೆಯ ಒಂದು ವಿಭಾಗವಾಗಿದ್ದು, ಮಧ್ಯಪ್ರಾಚ್ಯದಲ್ಲಿ ತಂತ್ರಗಾರಿಕೆ ರೂಪಿಸುವುದು, ಬೆಂಬಲಿಗರಿಗೆ ಶಸ್ತ್ರಾಸ್ತ್ರ ಪೂರೈಸುವುದು ಸೇರಿ ಇರಾನ್‌ ವಿರೋಧಿಗಳ ದಮನದಲ್ಲಿ ಮಹತ್ವದ ಪಾತ್ರವಹಿಸುತ್ತದೆ.  

ವಿಶೇಷವೆಂದರೆ ಖಾನಿ ಕಮಾಂಡ್‌ ಆಗುವ ಹೊತ್ತಿಗೆ ಇಸ್ರೇಲ್‌, ಅಮೆರಿಕ ನಡೆಸಿದ ಹಲವು ದಾಳಿಗಳಲ್ಲಿ ಲೆಬನಾನ್‌ನ ಹಿಜ್ಬುಲ್ಲಾ ನಾಯಕ ಹಸನ್‌ ನಸ್ರುಲ್ಲಾ, ಹಮಾಸ್‌ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೆಹ್‌ ಸೇರಿ ಇರಾನ್‌ ಹಾಗೂ ಅದರ ಸಹಯೋಗಿಗಳ ಹಲವು ಸೇನಾ ಮತ್ತು ಗುಪ್ತಚರ ಮುಖಂಡರು ಬಲಿಯಾಗಿದ್ದು, ಖಾನಿ ಮಾತ್ರ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗುತ್ತಿದ್ದರು. ಹೀಗೆ 9 ಬಾರಿ ಅವರು ಜೀವ ಉಳಿಸಿಕೊಂಡಿದ್ದರು.

ರಹಸ್ಯ ಸ್ಥಳವೊಂದರಲ್ಲಿ ಖಾನಿ ಮತ್ತು ಹನಿಯೆಹ್‌ ಭೇಟಿ

ಟೆಹರಾನ್‌ನ ರಹಸ್ಯ ಸ್ಥಳವೊಂದರಲ್ಲಿ ಖಾನಿ ಮತ್ತು ಹನಿಯೆಹ್‌ ಭೇಟಿಯಾಗಿದ್ದರು. ಆ ಬಳಿಕ ಇಸ್ರೇಲ್‌ ಹನಿಯೆಹ್‌ ಅವರಿದ್ದ ಸ್ಥಳದ ಮೇಲೆ ಬಾಂಬ್‌ ದಾಳಿ ನಡೆಸಿ, ಹನಿಯೆಹ್‌ ಹತ್ಯೆ ಮಾಡಿತ್ತು. ಆ ಬಳಿಕ ಇರಾನ್‌ ಗುಪ್ತಚರರು ಖಾನಿ ಮತ್ತು ಜತೆಗಿದ್ದವರ ಮೇಲೆ ಕಣ್ಣಿಟ್ಟಿದ್ದರು. ಖಮೇನಿ ಹತ್ಯೆ ಬಳಿಕ ಅವರನ್ನು ಬಂಧಿಸಿ, ಆ ಬಳಿಕ ಹತ್ಯೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಹಾರಾಟಕ್ಕೆ ಬ್ರೇಕ್ : ವಿಮಾನಯಾನ ಸಂಸ್ಥೆಗಳ ಎಚ್ಚರಿಕೆ
19300 ರು.ಗಾಗಿ ಬ್ಯಾಂಕ್‌ಗೆ ಅಕ್ಕನ ಅಸ್ಥಿಪಂಜರ ತಂದ!